ಊಟಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ.

 

‘ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು ಇವುಗಳಿಂದ ಜೀವನದ ಮ್ಯೌ ಹೆಚ್ಚುತ್ತದೆ.ಆದ್ದರಿಂದಲೇ ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ‘ಗಾದೆಗಳನ್ನು ವೇದಗಳಿಗೆ ಸಮಾನ’ ಎಂದುಹೇಳುವರು. ಅಂತಹ ಹಲವು ಪ್ರಸಿದ್ಧ ಗಾದೆಗಳಲ್ಲಿ ಇದು ಒಂದಾಗಿದೆ.
ಜೀವಿಸಲು ಊಟ ಅವಶ್ಯಕ. ಆದರೆ ಊಟವೇ ಜೀವವಾಗಬಾರದು. ಎಂಬಂತೆ ಊಟದ ಕ್ರಮವು ಉತ್ತಮ ಆರೋಗ್ಯಕ್ಕೆ ಕಾರಣ. ಸತ್ವಯುತ ಪದಾರ್ಥಗಳನ್ನು ಸೇವಿಸುವುದು ,ಸರಿಯಾದ ಸಮಯಕ್ಕೆ ಸರಿಯಾದ ಭೋಜನ ,ನಮಗೆ ಬರಬಹುದಾದ ಹಲವಾರು ರೋಗಗಳನ್ನು ದೂರ ಮಾಡುತ್ತದೆ.ಹಾಗಯೇ ಮಿತಿ ಅರಿತ ಅರ್ಥಪೂರ್ಣ ಮಾತು ನಡೆಯಬಹುದಾದ ಅನೇಕ ಜಗಳಗಳನ್ನು ತಡೆಯುತ್ತದೆ ಎಂಬುದನ್ನು ಈ ಗಾದೆಯು ಸೂಚಿಸುತ್ತದೆ.