ಪಂಚಾಯತ ರಾಜ್ ವ್ಯವಸ್ಥೆಯಲ್ಲಿ ಸ್ಥಾಯಿ ಸಮಿತಿಗಳು (2015 ರ ತಿದ್ದು ಪಡಿಯನ್ವಯ ) (The Standing Committees of the Panchayati Raj System)

 

I) ಗ್ರಾಮ ಪಂಚಾಯತಿ (ಪ್ರಕರಣ-61)

ಗ್ರಾಮ ಪಂಚಾಯತಿಯ 3 ಸ್ಥಾಯಿ ಸಮಿತಿಗಳು ಈ ಕೆಳಗಿನಂತಿವೆ.
1) ಸಾಮಾನ್ಯ ಸ್ಥಾಯಿ ಸಮಿತಿ : ಗ್ರಾಮ ಪಂಚಾಯತಿಯ ಉಪಾಧ್ಯಕ್ಷರು ಈ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ.
2) ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನೆ ಸ್ಥಾಯಿ ಸಮಿತಿ : ಗ್ರಾಮ ಪಂಚಾಯತಿಯ ಅಧ್ಯಕ್ಷರು ಈ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ.
3) ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ : SC/ST ಪೈಕಿ ಒಬ್ಬರು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಒಬ್ಬರು ಮಹಿಳಾ ಸದಸ್ಯರನ್ನು ಹೊಂದಿರತಕ್ಕದ್ದು.

ವಿವರಣೆ : ಪ್ರತಿಯೊಂದು ಸ್ಥಾಯಿ ಸಮಿತಿಯು ಅಧ್ಯಕ್ಷರನ್ನು ಒಳಗೊಂಡಂತೆ 3 ಕಿಂತ ಕಡಿಮೆ ಇಲ್ಲದ ಹಾಗು 05 ಕಿಂತ ಹೆಚ್ಚಿಲ್ಲದ ಸದಸ್ಯರನ್ನು ಒಳಗೊಂಡಿರತಕ್ಕದ್ದು
* ಪ್ರತಿ ಸಮಿತಿಯ ಸದಸ್ಯರ ಪಧಾವಧಿಯು(ಕಾಲಾವಧಿಯು) 30 ತಿಂಗಳು ಆಗಿರುತ್ತದೆ.

II) ತಾಲ್ಲೂಕು ಪಂಚಾಯತಿ
ತಾಲ್ಲೂಕು ಪಂಚಾಯತಿಯ ಸ್ಥಾಯಿ ಸಮಿತಿಗಳು ಈ ಕೆಳಗಿನಂತಿವೆ.
1) ಸಾಮಾನ್ಯ ಸ್ಥಾಯಿ ಸಮಿತಿ : ತಾಲ್ಲೂಕು ಪಂಚಾಯತಿಯ ಉಪಾಧ್ಯಕ್ಷರು ಈ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ
2) ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನೆ ಸ್ಥಾಯಿ ಸಮಿತಿ : ತಾಲ್ಲೂಕು ಪಂಚಾಯತಿಯ ಅಧ್ಯಕ್ಷರು ಈ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ
3) ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ : ಆಯ್ಕೆಯಾದ ಸದಸ್ಯರ ಪೈಕಿ ಒಬ್ಬರು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
ವಿವರಣೆ : * ಪ್ರತಿಯೊಂದು ಸ್ಥಾಯಿ ಸಮಿತಿಯು ಅಧ್ಯಕ್ಷರನ್ನು ಒಳಗೊಂಡಂತೆ 06 ಕಿಂತ ಹೆಚ್ಚಿಲ್ಲದ ಸದಸ್ಯರನ್ನು ಒಳಗೊಂಡಿರತಕ್ಕದ್ದು
* ಪ್ರತಿ ಸಮಿತಿಯ ಸದಸ್ಯರ ಪಧಾವಧಿಯು(ಕಾಲಾವಧಿಯು) 30 ತಿಂಗಳು ಆಗಿರುತ್ತದೆ
* ಒಬ್ಬ ತಾಲ್ಲೂಕು ಪಂಚಾಯತಿಯ ಸದಸ್ಯ ಒಂದಕ್ಕಿಂತ ಹೆಚ್ಚು ಸ್ಥಾಯಿ ಸಮಿತಿಯಲ್ಲಿ ಸದಸ್ಯನಾಗಿ ಸೇವೆ ಸಲ್ಲಿಸಲು ಅರ್ಹನಲ್ಲ.
* ತಾಲ್ಲೂಕು ಪಂಚಾಯತಿಯ ಕಾರ್ಯ ನಿರ್ವಾಹಕ ಅಧಿಕಾರಿಯು ಪ್ರತಿಯೊಂದು ಸ್ಥಾಯಿ ಸಮಿತಿಯ ಕಾರ್ಯದರ್ಶಿಯಾಗಿರತಕ್ಕದ್ದು

III) ಜಿಲ್ಲಾ ಪಂಚಾಯತಿ
ಜಿಲ್ಲಾ ಪಂಚಾಯತಿಯು ಈ ಕೆಳಗಿನ 05 ಸ್ಥಾಯಿ ಸಮಿತಿಗಳನ್ನು ಹೊಂದಿರುತ್ತದೆ.
1) ಸಾಮಾನ್ಯ ಸ್ಥಾಯಿ ಸಮಿತಿ : ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷರು ಈ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ
2) ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನೆ ಸ್ಥಾಯಿ ಸಮಿತಿ : ಜಿಲ್ಲಾ ಪಂಚಾಯತಿಯ ಅಧ್ಯಕ್ಷರು ಈ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ
3) ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ : ಆಯ್ಕೆಯಾದ ಸದಸ್ಯರ ಪೈಕಿ ಒಬ್ಬರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
4) ಶಿಕ್ಷಣ ಮತ್ತು ಆರೋಗ್ಯ ಸಮಿತಿ : ಆಯ್ಕೆಯಾದ ಸದಸ್ಯರ ಪೈಕಿ ಒಬ್ಬರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
5) ಕೃಷಿ ಮತ್ತು ಕೈಗಾರಿಕಾ ಸಮಿತಿ : ಆಯ್ಕೆಯಾದ ಸದಸ್ಯರ ಪೈಕಿ ಒಬ್ಬರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
ವಿವರಣೆ : * ಪ್ರತಿಯೊಂದು ಸ್ಥಾಯಿ ಸಮಿತಿಯು ಅಧ್ಯಕ್ಷರನ್ನು ಒಳಗೊಂಡಂತೆ 07 ಕಿಂತ ಹೆಚ್ಚಿಲ್ಲದ ಸದಸ್ಯರನ್ನು ಒಳಗೊಂಡಿರತಕ್ಕದ್ದು
* ಪ್ರತಿ ಸಮಿತಿಯ ಸದಸ್ಯರ ಪಧಾವಧಿಯು(ಕಾಲಾವಧಿಯು) 30 ತಿಂಗಳು ಆಗಿರುತ್ತದೆ
* ಜಿಲ್ಲಾ ಪಂಚಾಯತಿಯ ಕಾರ್ಯ ನಿರ್ವಾಹಕ ಅಧಿಕಾರಿಯು ಸಾಮಾನ್ಯ ಸ್ಥಾಯಿ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯಾಗಿರತಕ್ಕದ್ದು
* ಉಳಿದ ಸ್ಥಾಯಿ ಸಮಿತಿಗಳಿಗೆ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳನ್ನು ಪದನಿಮಿತ್ತ ಕಾರ್ಯದರ್ಶಿಯಾಗಿ ಜಿಲ್ಲಾ ಪಂಚಾಯತಿಯ ಕಾರ್ಯ ನಿರ್ವಾಹಕ ಅಧಿಕಾರಿಯು ನಾಮನಿರ್ದೇಶನ ಮಾಡುವರು.

Contributed By : Spardhaloka