ಆಚಾರವೇ ಸ್ವರ್ಗ ಅನಾಚಾರವೇ ನರಕ.
 
ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು ಇವುಗಳಿಂದ ಜೀವನದ ಮೌಲ್ಯ ಹೆಚ್ಚುತ್ತದೆ.ಆದ್ದರಿಂದಲೇ ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ‘ಗಾದೆಗಳನ್ನು ವೇದಗಳಿಗೆ ಸಮಾನ’ ಎಂದು ಹೇಳುವರು. ಅಂತಹ ಹಲವು ಪ್ರಸಿದ್ಧ ಗಾದೆಗಳಲ್ಲಿ ಇದು ಒಂದಾಗಿದೆ.
ಪುಣ್ಯ ಪಾಪಗಳು ನಮ್ಮ ವ್ಯಕ್ತಿತ್ವದಿಂದ ರೂಪಗೊಳ್ಳುತ್ತವೆಯೋ ಹೊರತು ಬೇರೆಲ್ಲೂ ಇರುವುದಿಲ್ಲ. ಅದ್ದರಿಂದಲೇ ಬಸವಣ್ಣನವರು ಸತ್ಯವೇ ನುಡಿವುದೇ ದೇವಲೋಕ, ಮಿತ್ಯವೇ ನುಡಿವುದೇ ಮರ್ತ್ಯಲೋಕ ಎಂದು ಹೇಳಿದ್ದು.ಅಯ್ಯಾ ಎಂದು ಒಳ್ಳೆಯ ಮಾತುಗಳನ್ನಾಡಿದರೆ ಸ್ವರ್ಗದಂತ ಸುಖ ಉಂಟಾಗುವುದು. . ಎಲವೋ ಎಂದು ಬಿರು ಮಾತನ್ನಾಡಿದರೆ ನರಕ ಸಮಾನವಾದ ಕಷ್ಟವೊದಗುವುದು. ಆದ್ದರಿಂದ ಮನುಷ್ಯರಾದ ನಾವು ನಮ್ಮ ಜೀವನದಲ್ಲಿ ಚಿಕ್ಕಂದಿನಿಂದಲೇ ಒಳ್ಳೆಯ ಆಚಾರ-ವಿಚಾರಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ನಮಗೆ ಉತ್ತಮವಾದ ಗೌರವ ಮಾನ್ಯಗಳು ದೊರಕುತ್ತದೆ. ಇದು ನಮಗೆ ಸುಖ ಮತ್ತು ನೆಮ್ಮದಿಯುತವಾದ ಜೀವನ ನಡೆಸಲು ಸಾಧ್ಯವಾಗುತ್ತದೆ. ಅದಕ್ಕೆ ವಿರುದ್ಧವಾಗಿ ನಾವು ಉತ್ತಮ ಆಚಾರ-ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳದೇ ಇದ್ದರೆ ಸಮಜ ನಮ್ಮನ್ನು ದೂಷಿಸಲು ಪ್ರಾರಂಭಿಸುತ್ತದೆ ಆಗ ನಮ್ಮ ಜೀವನ ನರಕ ಸದೃಶ್ಯವಾದ ಕಷ್ಟಕ್ಕೆ ಸಿಲುಕುತ್ತದೆ. ಆದ್ದರಿಂದ ಉತ್ತಮ ಆಚಾರ-ವಿಚಾರಗಳನ್ನು ಅಳವಡಿಸಿಕೊಳ್ಳಬೇಕೆಂದು ಈ ಗಾದೆ ಸೂಚಿಸುತ್ತದೆ.