ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು(Rivers in Karnataka)
 
ಕಾವೇರಿ ನದಿ
✧ ಕಾವೇರಿ ನದಿಯು ದಕ್ಷಿಣ ಭಾರತದ ಅಂತರಾಜ್ಯಗಳ ನದಿಯಾಗಿದೆ. ಮುನ್ನೀರು ಭಾರತದ ಪೂರ್ವದ ಕಡೆಗೆ ಹರಿಯುವ ಈ ನದಿಯು ಬಂಗಾಳ ಕೊಲ್ಲಿ (ಕಡಲನ್ನು) ಸೇರುತ್ತದೆ.
✧ ಕೊಡಗಿನ ಕಾವೇರಿ ಎಂದೇ ಹೆಸರಾಗಿರುವ ಈ ನದಿಯು ಕೊಡಗಿನ ಬ್ರಹ್ಮಗಿರಿ ಬೆಟ್ಟದ ತಲಕಾವೇರಿಯಲ್ಲಿ ಸುಮಾರು 1341 ಮೀ. ಕಡಲ ಮಟ್ಟದಲ್ಲಿ ಹುಟ್ಟುತ್ತದೆ.
✧ ಕಾವೇರಿ ನದಿಯ ಒಟ್ಟು ಆಯಕಟ್ಟು 81,155 ಚದರ ಕಿ. ಮೀ.
✧ ಕಾವೇರಿ ನದಿ ಏರ್ಪಾಟಿನ ಇತರ ರಾಜ್ಯಗಳಲ್ಲಿ ಹರಡಿರುವ ಜಲಾನಯನ ಪ್ರದೇಶ ಮತ್ತು ಅದರ ಕಾಲುವೆ ವ್ಯವಸ್ತೆಯನ್ನು ಕೆಳಗಿನ ಪಟ್ಟಿಯಲ್ಲಿ ಕಾಣಬಹುದು.
ಜಲಾನಯನ (basin)ಇರುವ ರಾಜ್ಯ & ಆಯಕಟ್ಟು (catchment area ):
1. ಕರ್ನಾಟಕ — 34,273 ಚದರ ಕಿ. ಮೀ
2. ಕೇರಳ — 2,866 ಚದರ ಕಿ. ಮೀ
3. ತಮಿಳು ನಾಡು— 43,868 ಚದರ ಕಿ. ಮೀ
4. ಪಾಂಡಿಚರಿಯ ಕಾರೈಕಲ್ — 148 ಚದರ ಕಿ. ಮೀ
✧ಒಟ್ಟು 81,155 ಚದರ ಕಿ. ಮೀ
✧ಹಾರಂಗಿ, ಲಕ್ಶ್ಮಣ ತೀರ್ಥ, ಕಬಿನಿ, ಶಿಮ್ಶ, ಅರ್ಕಾವತಿ ಮತ್ತು ಸುವರ್ಣವತಿ ಇವೆಲ್ಲ ಕಾವೇರಿ ನದಿಯ ಬಹು ಮುಖ್ಯವಾದ ಉಪನದಿಗಳು.
✧ಇವುಗಳಲ್ಲಿ ಕಬನಿ, ಅರ್ಕಾವತಿ ಮತ್ತು ಸುವರ್ಣವತಿ ನದಿಗಳು ಹೊರತಾಗಿ ಮಿಕ್ಕೆಲ್ಲ ನದಿಗಳು ನಮ್ಮ ಕರ್ನಾಟಕದಲ್ಲೆ ಹುಟ್ಟಿ, ಕರ್ನಾಟಕದಲ್ಲೆ ಹರಿಯುತ್ತವೆ.
ಈ ನದಿಗಳ ಅಡಕವನ್ನು ಕೆಳಗಿನ ಪಟ್ಟಿಯಲ್ಲಿ ಕಾಣಬಹುದು.
✧ಕಾವೇರಿ ನದಿಯ ಉಪನದಿಗಳು
1ಹಾರಂಗಿ
●ಆಯಕಟ್ಟು (catchment area):— 717 ಚದರ ಕಿಮೀ
●ನದಿಯ ಮೂಲ:—ಪಶ್ಚಿಮ ಘಟ್ಟದ ಪುಶ್ಪಗಿರಿ ಬೆಟ್ಟ
●ಮೂಲದ ಎತ್ತರ:—1067 ಮೀ,
●ನದಿಯ ಉದ್ದ:—50 ಕಿ ಮೀ
●ರಾಜ್ಯ :— ಕರ್ನಾಟಕ
2.ಹೇಮಾವತಿ
●ಆಯಕಟ್ಟು (catchment area):— 5410 ಚದರ ಕಿಮೀ
●ನದಿಯ ಮೂಲ:—ಪಶ್ಚಿಮ ಘಟ್ಟದ ಬಳ್ಳರಾಯನ ದುರ್ಗ,
●ಮೂಲದ ಎತ್ತರ:—1219 ಮೀ,
●ನದಿಯ ಉದ್ದ:— 245 ಕಿ ಮೀ
●ರಾಜ್ಯ :— ಕರ್ನಾಟಕ
3.ಕಬಿನಿ
●ಆಯಕಟ್ಟು (catchment area):— 7040 ಚದರ ಕಿಮೀ
●ನದಿಯ ಮೂಲ:—ಕೇರಳದ ಪಶ್ಚಿಮ ಘಟ್ಟ್ಟ,
●ಮೂಲದ ಎತ್ತರ:—2,140 ಮೀ,
●ನದಿಯ ಉದ್ದ:— 230 ಕಿ ಮೀ
●ಒಳ –ಉಪನದಿಗಳು (sub-tributary):— ತರಕ, ಹೆಬ್ಬಳ್ಳ , ನುಗು, ಗುಂಡಲ್
●ರಾಜ್ಯಗಳು :— ಕರ್ನಾಟಕ, ಕೇರಳ ಮತ್ತು ತಮಿಳು ನಾಡು
4.ಸುವರ್ಣವತಿ
●ಆಯಕಟ್ಟು (catchment area):— 1787 ಚದರ ಕಿಮೀ
●ನದಿಯ ಮೂಲ:—ನಸ್ರೂರ್ ಘಟ್ಟ್ಟದ ಸಾಲು,
●ನದಿಯ ಉದ್ದ:— 88 ಕಿ ಮೀ
●ರಾಜ್ಯಗಳು :— ಕರ್ನಾಟಕ ಮತ್ತು ತಮಿಳು ನಾಡು
5.ಲಕ್ಶ್ಮಣ ತೀರ್ಥ
●ಆಯಕಟ್ಟು (catchment area):— 1690 ಚದರ ಕಿಮೀ
●ನದಿಯ ಮೂಲ:— ಪಶ್ಚಿಮ ಘಟ್ಟ್ಟ,
●ಮೂಲದ ಎತ್ತರ:—1,950 ಮೀ,
●ನದಿಯ ಉದ್ದ:— 131 ಕಿ ಮೀ
●ಒಳ –ಉಪನದಿಗಳು (sub-tributary):— ರಾಮತೀರ್ಥ,
●ರಾಜ್ಯಗಳು :— ಕರ್ನಾಟಕ
6.ಶಿಂಷಾ
●ಆಯಕಟ್ಟು (catchment area):— 8469 ಚದರ ಕಿಮೀ
●ನದಿಯ ಮೂಲ:— ತುಮುಕೂರು ಜಿಲ್ಲೆ,
●ಮೂಲದ ಎತ್ತರ:—914 ಮೀ,
●ನದಿಯ ಉದ್ದ:— 221 ಕಿ ಮೀ
●ಒಳ –ಉಪನದಿಗಳು (sub-tributary):— ವೀರ ವೈಶ್ನವಿ, ಕಣಿಹಳ್ಳ, ಚಿಕ್ಕೊಳೆ, ಹೆಬ್ಬಹಳ್ಳ, ಮುಲ್ಲಹಳ್ಳ ಮತ್ತು ಕಣ್ವ
●ರಾಜ್ಯಗಳು :— ಕರ್ನಾಟಕ
7.ಅರ್ಕಾವತಿ
●ಆಯಕಟ್ಟು (catchment area):— 4351ಚದರ ಕಿಮೀ
●ನದಿಯ ಮೂಲ:— ನಂದಿದುರ್ಗ,
●ಮೂಲದ ಎತ್ತರ:—1,480 ಮೀ,
●ನದಿಯ ಉದ್ದ:— 161 ಕಿ ಮೀ
●ಒಳ –ಉಪನದಿಗಳು (sub-tributary):— ಕುಮುದಾವತಿ , ಮಣಿಹಳ್ಳ,ಕುಟ್ಟೆಹೊಳೆ, ವೃಷಭಾವತಿ
●ರಾಜ್ಯಗಳು :— ಕರ್ನಾಟಕ ಮತ್ತು ತಮಿಳು ನಾಡು
Contributed by:Spardha Loka