ಪ್ರಧಾನಿ ಮಂತ್ರಿ ವಯ ವಂದನ ಯೋಜನೆ: (PMVVY)
ಯೋಜನೆಯನ್ನು ಸರ್ಕಾರ ಜಾರಿಗೆ ತಂದಿರುವ ಹಿರಿಯ ನಾಗರಿಕರ ಪೆನ್ಷನ್ ಯೋಜನೆ ಈ ಯೋಜನೆಯನ್ನು ಕೇಂದ್ರ ಸರ್ಕಾರ ಒಡೆತನದ ವಿಮಾ ಕಂಪನಿ ಎಲ್.ಐ.ಸಿ.ಯ ಮೂಲಕ ಅನುಷ್ಠಾನಗೊಳಲಾಗುತ್ತದೆ ಈ ಯೋಜನೆಯ ಫಲಾನುಭವಿಗಳಾಗಲು ಬೇಕಾಗಿರುವ ಕನಿಷ್ಠ ವಯೋಮಿತಿ 60 ವರ್ಷ ಈ ಯೋಜನೆಯ ಫಲಾನುಭವಿಗಳಾಗಲು ಕನಿಷ್ಠ 1,50,000/- ರೂಪಾಯಿಗಳು ಹಾಗೂ ಗರಿಷ್ಠ 7,50,000/- ರೂಪಾಯಿಗಳನ್ನು ಏಕಕಾಲದಲ್ಲಿ 10 ವರ್ಷಗಳ ಅವಧಿಗೆ ಹೂಡಿಕೆ ಮಾಡಬೇಕಾಗುತ್ತದೆ, ಹೂಡಿಕೆ ಮಾಡಿದ ಹಣಕ್ಕೆ ಶೇಕಡಾ 8% ರ ಬಡ್ಡಿದರದಲ್ಲಿ ಬರುವ ಬಡ್ಡಿಹಣವನ್ನು ತಿಂಗಳಿಗೊಮ್ಮೆ, 6 ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಫಲಾನುಭವಿಗಳು ಆಯ್ಕೆಮಾಡುವ ಅವಧಿಗೆ ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಪೆನ್ಷನ್ ಯೋಜನೆಯಲ್ಲಿ ತಿಂಗಳಿಗೆ ಕನಿಷ್ಠ 1000 ರೂಪಾಯಿಂದ ಗರಿಷ್ಠ 5000 ರೂಪಾಯಿವರೆÀಗೆ ಅವರ ಹೂಡಿಕೆಯ ಆಧಾರದ ಮೇಲೆ ದೊರೆಯಲಿದೆ 10 ವರ್ಷಗಳ ಅವಧಿಗೆ ಮುನ್ನ ಹೂಡಿಕೆ ಮಾಡಿದ ಹಣ ಪಡೆಯಲು ಇಚ್ಚಿಸುವವರಿಗೆ , ನಿಗದಿತ ಬಡ್ಡಿ ಹಣದ 2% ದಂಡದ ಮೊತ್ತ ಕಡಿತ ಮಾಡಿಕೊಂಡು ಹಿಂದಿರುಗಿಸಲ್ಲಗುತ್ತದೆ. 3 ವರ್ಷಗಳ ನಂತರ ಈ ಹೂಡಿಕೆ ಹಣದ ಮೇಲೆ ಶೇಕಡ 75% ರಷ್ಟು ಸಾಲದ ಸೌಲಭ್ಯವಿದೆ