ಇಂದ್ರಧನುಷ್ ಯೋಜನೆ :
ಮುಂಜಾಗೃತ ಲಸಿಕೆಯಿಂದ ತಡೆಗಟ್ಟಬಹುದಾದ ಮಾರಣಾಂತಿಕ ಕಾಯಿಲೆಗಳ ವಿರುದ್ದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜಾರಿಗೆ ತಂದಿರುವ ಉಚಿತ ಲಸಿಕೆ ಹಾಕುವ ಯೋಜನೆಯೆ ಮಿಷನ್ ಇಂದ್ರಧನುಷ್. ಈ ಯೋಜನೆಗೆ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚೀವಾಲಯವು 25, ಡಿಸೆಂಬರ್ 2014 ರಂದು ಚಾಲನೆ ನೀಡಿತು. ಭಾರತ ಸರ್ಕಾರವು 1985 ರಲ್ಲಿ ಜಾರಿಗೆ ತಂದಿದ್ದ ಸಾರ್ವತ್ರಿಕ ರೋಗ ನಿರೋಧಕ ಕಾರ್ಯಕ್ರಮ(Universal Immunization Programme )ದ ಮುಂದು ವರೆದ ಭಾಗವೆ ಮಿಷನ್ ಇಂದ್ರಧನುಷ್ ಇಲ್ಲಿಯವರೆಗೆ ಮಿಷನ್ ಇಂದ್ರಧನುಷ್ ಅನ್ನು 4 ಹಂತಗಳಲ್ಲಿ ನಿರ್ವಹಿಸಿದ್ದು ಒಟ್ಟು 25 ಮಿಲಿಯನ್ ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಪ್ರಸ್ತುತ ಈ ಯೋಜನೆಯಡಿಯಲ್ಲಿ ಧನುರ್ವಾಯು, ಬಾಲಕ್ಷಯ, ಗಂಟಲುಮಾರಿ(ಢಿಫ್ತೀರಿಯ), ಪೋಲಿಯೋ, ದಡಾರ, ಹಿಬ್, ರುಬೆಲ್ಲ, ಹೆಪಟೈಟಿಸ್-ಬಿ, ನಾಯಿ ಕೆಮ್ಮು ಮತ್ತು ಜಪಾನಿಸ್ ಎನ್‍ಸಫಲೈಸಿಸ್ಟ್‍ನಂತ 10 ಮಾರಕ ಕಾಯಿಲೆಗಳಿಗೆ ಲಸಿಕೆಯನ್ನು ಹಾಕಲಾಗುತ್ತದೆ. ಕರ್ನಾಟಕದಲ್ಲಿ ಮೊದಲ ಹಂತದ ಇಂದ್ರಧನುಷ್ ಅಭಿಯಾನವನ್ನು 2015ರಲ್ಲಿ ಆರಂಭಿಸಿದ್ದು, ಪ್ರಸ್ತುತ 4ನೇ ಹಂತದ ಅಭಿಯಾನವು 2017ರ ಮೇ 8 ರಿಂದ ನಡೆಯಲಿದೆ.