ಪರಮಾಣು ತಂತ್ರಜ್ಞಾನ (Nuclear Technology)

 

ಅಣು ವಿದಳನ


• ವಿದಳನ ಕ್ರಿಯೆ ಯಾವುದಾದರೂ ಒಂದು ಭಾರವಾದ ಪರಮಾಣು ನ್ಯೂಟ್ರಾನ್ ಕಣದ ಘಷ೯ಣೆಯಿಂದ ಎರಡು ಭಾಗಗಳಾಗಿ ಒಡೆದು ಅತ್ಯಧಿಕ ಪ್ರಮಾಣದ ಶಕ್ತಿಯನ್ನು ಬಿಡುಗಡೆ ಮಾಡುವ ಕ್ರಿಯೆ.
• ಇಡೀ ವಿದ್ಯಮಾನದಲ್ಲಿ ಯುರೇನಿಯಮ್ - 235 ಪರಮಾಣು ಬೀಜಕ್ಕೆ ಮಂದ ಗತಿಯಲ್ಲಿ ಸಾಗುವ ಕಡಿಮೆ ಶಕ್ತಿಯ ನ್ಯೂಟ್ರಾನ್ ಢಿಕ್ಕಿಯಾಗುತ್ತದೆ. ಪರಿಣಾಮವಾಗಿ ಅಲ್ಲಿ ಅಸ್ಥಿರವಾದ ಯುರೇನಿಯಮ್ - 236 ಸೃಷ್ಟಿಯಾಗುತ್ತದೆ. ಇದು ಅತ್ಯಂತ ಅಸ್ಥಿರ. ಹಾಗಾಗಿ ಅದು ಇಬ್ಬಾಗವಾಗುತ್ತದೆ. ಒಂದು ಬೇರಿಯಮ್ - 141 ಮತ್ತು ಇನ್ನೊಂದು ಕ್ರಿಪ್ಟಾನ್ - 92.
• ಇವುಗಳೊಂದಿಗೆ ಮೂರು ವೇಗದಲ್ಲಿ ಸಾಗುವ ಶಕ್ತಿಶಾಲಿಯಾದ ನ್ಯೂಟ್ರಾನುಗಳು ಬಿಡುಗಡೆಯಾಗುತ್ತವೆ. ಮೂಲ ಯುರೇನಿಯಮ್ ಮತ್ತು ಹೊಸದಾಗಿ ಸೃಸ್ಟಿಗೊಂಡ ಬೇರಿಯಮ್ ಮತ್ತು ಕ್ರಿಪ್ಟಾನ್ ಹಾಗೂ ಮೂರು ನ್ಯೂಟ್ರಾನುಗಳ ದ್ರವ್ಯರಾಶಿಯನ್ನು ಲೆಕ್ಕ ಹಾಕಿದರೆ ವಿದಳನದ ನಂತರದ ದ್ರವ್ಯರಾಶಿ ಮೊದಲಿನ ದ್ರವ್ಯರಾಶಿಗಿಂತ 0.215 ಪರಮಾಣುರಾಶಿ ಮಾನದಷ್ಟು(ಎಟಾಮಿಕ್ ಮಾಸ್ ಯುನಿಟ್)ಕಡಿಮೆ ಇತ್ತು. ಈ ನಷ್ಟವಾದ ದ್ರವ್ಯರಾಶಿ 200 ಮೆಗಾ ಎಲೆಕ್ಟ್ರಾನ್ ವೋಲ್ಟ್ ಶಕ್ತಿಯಾಗಿ ಬಿಡುಗಡೆಯಾಗುತ್ತದೆ.

ಅಣು ಸಮ್ಮೇಳನ


• ಹಗುರ ಸಣ್ಣ ಅಣುಗಳನ್ನು ಸಂಯೋಜನೆ ಭಾರವಾದ ಅಣು ಮಾಡಿ ಜೊತೆಗೆ ಅಒಆರ ಶಕ್ತಿ ಉತ್ಪಾದಿಸುವುದ ಪ್ರಕ್ರಿಯೆಗೆ ಅಣು ಸಮ್ಮಿಳನ ಸಂಯೋಜನೆ ಎಂದು ಕರೆಯಲಾಗುವುದು
• ಅಣು ಸಮ್ಮಿಳನ ಪ್ರಕ್ರಿಯೆಲ್ಲಿ ಅಣು ವಿದಳನ ಪ್ರಕ್ರಿಯೆಗಿಂತ ಹೆಚ್ಚು ಶಕ್ತಿ ಉತ್ಪಾದನೆಯಾಗುತ್ತದೆ

ರೇಡಿಯೋ ಆಕ್ಟಿವ್ ವಸ್ತುಗಳು


ಯುರೇನಿಯಂ., ಥೋರಿಯಂ, ರೇಡಿಯಂ ಮತ್ತು ಪೋಲೊನಿಯಂ, ಇವು ಧಾತುಗಳನ್ನು ರೇಡಿಯೋ ಆಕ್ಟಿವ್ ವಸ್ತುಗಳು ಎನ್ನುತ್ತಾರೆ. ಇವು ಈ ಕೆಳಗಿನ ಅಗೋಚರ ಕಿರಣಗಳನ್ನು ಹೊರಡಿಸುತ್ತವೆ.
1. ಅಲ್ಫಾ ಕಿರಣ (ಧನಾತ್ಮಕ ಕಿರಣಗಳು)
2. ಬಿಟಾ ಕಿರಣ (ಋಣಾತ್ಮಕ ಕಿರಣಗಳು)
3. ಗಾಮಾ ಕಿರಣ (ತಟಸ್ಥ ಕಿರಣಗಳು)

ಅಣು ಸ್ಥಾವರ


• ಸಾಂಪ್ರದಾಯಿಕ ಉಷ್ಣ ವಿದ್ಯುತ್ ಸ್ಥಾವರಗಳು ಇಂಧನ ದಹನದ ನಂತರ ಬಿಡುಗಡೆಯಾಗುವ ಶಕ್ತಿಯನ್ನು ಉಷ್ಣ ಶಕ್ತಿಯನ್ನಾಗಿ ಪರಿವರ್ತಿಸುತ್ತವೆ. ಅದೇ ರೀತಿಯಲ್ಲಿ ಅಣು ವಿದ್ಯುತ್ ಉತ್ಪಾದನಾ ಘಟಕಗಳು ಪರಮಾಣುವಿನ ನ್ಯೂಕ್ಲಿಯಸ್ ನಿಂದ ಬಿಡುಗಡೆಯಾದ ಶಕ್ತಿಯನ್ನು ಅಣು ಸಮ್ಮಿಳನದ ಮೂಲಕ ಪರಿವರ್ತಿಸುತ್ತವೆ.
• ಸಾಪೇಕ್ಷವಾಗಿ ದೊಡ್ಡ ಸಮ್ಮಿಳನದ ಪರಮಾಣು ನ್ಯೂಕ್ಲಿಯಸ್ ಗಳಾದ (ಸಾಮಾನ್ಯವಾಗಿ ಯುರೇನಿಯಂ-235 ಅಥವಾ ಪ್ಲುಟೋನಿಯಂ-239) ನ್ಯೂಟ್ರಾನ್ ಅನ್ನು ಸೆಳೆದುಕೊಂಡ ನಂತರ ಪರಮಾಣುಗಳ ಸಮ್ಮಿಳನದಲ್ಲಿ ಅದು ಫಲಿತಗೊಳ್ಳುತ್ತದೆ. ಸಮ್ಮಿಳನ ಪರಮಾಣುಗಳನ್ನು ಎರಡು ಅಥವ ಅದಕ್ಕಿಂತ ಹೆಚ್ಚಿನ ನ್ಯೂಕ್ಲಿಗಳನ್ನಾಗಿ ಕೈನೆಟಿಕ್ ಶಕ್ತಿಯೊಂದಿಗೆ ವಿಭಜಿಸುತ್ತದೆ. ಮತ್ತು ಗಾಮಾ ವಿಕಿರಣ ಮತ್ತು ಮುಕ್ತ ನ್ಯೂಟ್ರಾನ್ ಗಳನ್ನು ಬಿಡುಗಡೆ ಮಾಡುತ್ತದೆ. ಈ ನ್ಯೂಟ್ರಾನ್ ಗಳ ಕೆಲವು ಭಾಗವು ಇತರ ಸಮ್ಮಿಳನ ಅಣುಗಳು ಸೆಳೆದುಕೊಳ್ಳುತ್ತವೆ ಮತ್ತು ಮತ್ತಷ್ಟು ಸಮ್ಮಿಳನ ನಿರ್ಮಿಸುತ್ತವೆ. ಅದು ಮತ್ತಷ್ಟು ನ್ಯೂಟ್ರಾನ್ ಗಳನ್ನು ಬಿಡುಗಡೆ ಮಾಡುತ್ತದೆ. ಹೀಗೆ ಅದು ಮುಂದುವರಿಯುತ್ತದೆ.
• ಶೈತ್ಯಿಕರಣಗೊಳಿಸುವಿಕೆ ವ್ಯವಸ್ಥೆಯು ರಿಯಾಕ್ಟರ್ ನ ಕೇಂದ್ರ ಭಾಗದಿಂದ ಉಷ್ಣವನ್ನು ಹೊರತೆಗೆದು ಘಟಕದ ಇನ್ನೊಂದು ಪ್ರದೇಶಕ್ಕೆ ಸಾಗಿಸುತ್ತದೆ. ಅಲ್ಲಿ ಉಷ್ಣ ಶಕ್ತಿಯನ್ನು ವಿದ್ಯುತ್ ಉತ್ಪಾದನೆಗೆ ಅಥವ ಇನ್ನಿತರ ಪ್ರಯೋಜನಕಾರಿ ಕೆಲಸಗಳಿಗೆ ಉಪಯೋಗಿಸಬಹುದು. ಅದೇ ರೀತಿ ಬಿಸಿಯಾಗಿರುವ ಕೂಲಂಟ್ ಅನ್ನು ಬಾಯಲರ್ ನ ಉಷ್ಣದ ಮೂಲವಾಗಿ ಉಪಯೋಗಿಸಲಾಗುತ್ತದೆ, ಮತ್ತು ಆ ಬಾಯಲರ್ ನಿಂದ ಒತ್ತಡಕ್ಕೆ ಒಳಗಾದ ಹಬೆಯು ಒಂದು ಅಥವ ಅದಕ್ಕಿಂತ ಹೆಚ್ಚಿನ ಹಬೆ ಟರ್ಬೈನ್ ಗಳಿಗೆ ಶಕ್ತಿಯನ್ನು ಎಲೆಕ್ಟ್ರಿಕ್ ಜನರೇಟರ್ ಗಳಿಗೆ ಪೂರೈಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ.
• ನ್ಯೂಟ್ರಾನ್ ಗಳನ್ನೂ ಹೀರಿಕೊಳ್ಳುವ ಕ್ಯಾಡ್ಮಿಯಂ ಅಥವಾ ಬೋರಾನ್ ಕಾರ್ಬೈಡ್ ನಿಂದ ಮಾಡಿದ ಸರಳುಗಳನ್ನು ನಿಯಂತ್ರಕಗಳಾಗಿ ಬಳಸುತ್ತಾರೆ.
• ಭಾರ ಜಲ ಮತ್ತು ಗ್ರ್ಯಾಫೈಟ್ ಅನ್ನು ಸಾಮಾನ್ಯವಾಗಿ ಮಂದಕಾರಿಯಾಗಿ ಬಳಸುತ್ತಾರೆ.
• ಅತ್ಯಂತ ಹೆಚ್ಚು ಕುದಿ ಬಿಂದು ಹೊಂದಿರುವ ಹೈಡ್ರೊ ಕಾರ್ಬನ್ ಗಳು,ಭಾರ ಜಲ, ನೀರು ಇವು ಸಾಮಾನ್ಯವಾಗಿ ಬಳಸುವ ತಂಪು ಕಾರಿಗಳು.

ಭಾರತದಲ್ಲಿರುವ ಅಣುಸ್ಥಾವರಗಳು


1. ತಾರಾಪುರ - ಮಹರಾಷ್ಟ್ರ
2. ರಾವತಭಟ್ಟಾ - ರಾಜಸ್ಥಾನ
3. ಕೂಡಂಕುಳಂ - ತಮಿಳುನಾಡು
4. ಕೈಗಾ- ಕರ್ನಾಟಕ
5. ಕಕ್ರಪುರ- ಗುಜರಾತ
6. ಕಲ್ಪಾಕಮ್- ತಮಿಳುನಾಡು
7. ನರೋರಾ - ಉತ್ತರಪ್ರದೇಶ

ಪರಮಾಣು ಖನಿಜಗಳು


1. ಯುರೇನಿಯಂ
2. ನೈಯೋರ್ಬಿಯಂ
3. ಟಟಾನಿಯಂ
4. ಪಿರಲಿಯಂ
5. ಟೈಟಾನಿಯಂ
6. ರೇಡಿಯಂ
7. ಪೋಲಿನಿಯಂ

ಭಾರತದಲ್ಲಿ ಪರಮಾಣು ಶಕ್ತಿ


• ಭಾರತದಲ್ಲಿ ಭಾಭಾ ಪರಮಾಣು ಸಂಶೋಧನಾ ಕೇಂದ್ರವು ಪರಮಾಣು ಶಕ್ತಿಯ ಸಂಶೋದನೆಯಲ್ಲಿ ಮುಂಚೂಣಿಯಲ್ಲಿದೆ.ಭಾರತದ ಮೊದಲ ಪರಮಾಣು ಶಕ್ತಿ ಕೇಂದ್ರವಾದ ತಾರಾಪುರ ಪರಮಾಣು ಶಕ್ತಿ ಸ್ಥಾವರವು ಮಹಾರಾಷ್ಟ್ರದಲ್ಲಿ 1969 ರಲ್ಲಿ ಪ್ರಾರಂಭವಾಯಿತು.
• ಭಾರತದಲ್ಲಿ ಯುರೇನಿಯಂ ಅದಿರು ಪ್ರಮುಖವಾಗಿ ಝಾರ್ಖಂಡ್ ಜಾಡುಗಡ ಗಣಿಯಿಂದ ಪಡೆಯಲಾಗುತ್ತಿದೆ.
• ಭಾರತವು ಶುದ್ಧವಾದ ಯುರೇನಿಯಂ ಅನ್ನು ಆಸ್ಟ್ರೇಲಿಯಾ, ಯುರೋಪ್ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ.