ಭಾರತದ ದ್ವೀಪಗಳು (Indian Islands)

 

ಮುಖಜಭೂಮಿಯ ದ್ವೀಪಗಳು


* ಗಂಗಾ, ಕೃಷ್ಣಾ ಮತ್ತು ಮಹಾನದಿ ದ್ವೀಪಗಳು:

* ಗಂಗಾ ನದಿಯ ಮುಖಜಭೂಮಿಯಲ್ಲಿರುವ ದ್ವೀಪಗಳು: 'ನ್ಯೂಮರ್ ದ್ವೀಪಗಳು'

* ಮುಖಜಭೂಮಿಯ ದ್ವೀಪಗಳಲ್ಲಿಯೇ ಅತೀ ದೊಡ್ಡ ದ್ವೀಪ: ನರ್ಮದಾ ನದಿ ಅಳಿವೆಯಲ್ಲಿರುವ 'ಆಲಿಯಾಬೆಟ್' (16 ಕಿಮೀ)

* ಜಗತ್ತಿನ ದೊಡ್ಡದಾದ ನದಿ ದ್ವೀಪ: ಆಸ್ಸಾಂನಲ್ಲಿ ಹರಿಯುವ ಬ್ರಹ್ಮಪುತ್ರ ನದಿಯಲ್ಲಿರುವ 'ಮಂಜೂಲಿ ದ್ವೀಪ'

ಸಾಗರಿಕ ದ್ವೀಪಗಳು


* ಭಾರತದಲ್ಲಿ ಎರಡು ಪ್ರಮುಖ ಸಾಗರಿಕ ದ್ವೀಪಸ್ತೋಮಗಳಿವೆ

1) ಬಂಗಾಳಕೊಲ್ಲಿಯಲ್ಲಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

2) ಅರಬ್ಬೀ ಸಮುದ್ರದಲ್ಲಿರುವ ಲಕ್ಷದ್ವೀಪಗಳು

* ಭಾರತದಲ್ಲಿ ಒಟ್ಟು 247 ದ್ವೀಪಗಳಿವೆ ಅರಬ್ಬಿ ಸಮುದ್ರದಲ್ಲಿ 43 ಹಾಗೂ ಬಂಗಾಳಕೊಲ್ಲಿಯಲ್ಲಿ 204 ದ್ವೀಪಗಳಿವೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು


* ವಿಸ್ತೀರ್ಣ: 8,236,85 ಚಕಿಮೀ

* ಪೂರ್ವ-ಪಶ್ಚಿಮವಾಗಿ 58 ಕಿಮೀ ಹಾಗೂ ಉತ್ತರ-ದಕ್ಷಿಣವಾಗಿ 590 ಕಿಮೀ ವಿಸ್ತರಿಸಿದೆ

* ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು 10⁰ ಕಾಲುವೆ (10⁰ Channel) ಯು ಪ್ರತ್ಯೇಕಿಸುವುದು

ಅಂಡಮಾನ್ ದ್ವೀಪಗಳು


* ಈ ದ್ವೀಪಗಳು ಜ್ವಾಲಾಮುಖಿ ನಿರ್ಮಿತ ಗಟ್ಟಿಶಿಲೆಗಳಿಂದ ಕೂಡಿವೆ

* ನಾರ್ಕೊಂಡಂ ಮತ್ತು ಬ್ಯಾರನ್ ದ್ವೀಪಗಳು ಇಲ್ಲಿನ ಪ್ರಮುಖ ಜ್ವಾಲಾಮುಖಿ ದ್ವೀಪಗಳು

* ಬ್ಯಾರನ್ ದ್ವೀಪವು ಪೋರ್ಟ್ ಬ್ಲೇರ್ ನಿಂದ ಈಶಾನ್ಯದಲ್ಲಿದ್ದು 'ಭಾರತದ ಏಕಮೇವ ಸಜೀವ ಜ್ವಾಲಾಮುಖಿ ದ್ವೀಪ'ವಾಗಿದೆ

* ಅಂಡಮಾನ್ ದ್ವೀಪಗಳಲ್ಲಿನ 'ಮಧ್ಯ ಅಂಡಮಾನ್ ದ್ವೀಪವು 'ಭಾರತದಲ್ಲಿನ ಅತಿದೊಡ್ಡ ದ್ವೀಪವಾಗಿದೆ

* ದಕ್ಷಿಣ ಅಂಡಮಾನ್ ನಲ್ಲಿ ಪೋರ್ಟ್ ಬ್ಲೇರ್ ಇರುವುದರಿಂದ ದಕ್ಷಿಣ ಅಂಡಮಾನ್ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ದ್ವೀಪವಾಗಿದೆ

* ದಕ್ಷಿಣ ಅಂಡಮಾನ್ ಮತ್ತು ಚಿಕ್ಕ ಅಂಡಮಾನ್ ಗಳನ್ನು ಪ್ರತ್ಯೇಕಿಸುವ ಕಾಲುವೆ: ಡಂಕನ್ ಕಾಲುವೆ(Duncan Channel)

*ಅಂಡಮಾನ್ ದ್ವೀಪಗಳಲ್ಲಿ ಅತಿ ಎತ್ತರದ ಶಿಖರ: 'ಸ್ಯಾಡಲ್ ಶಿಖರ'(738 ಮೀ)

* ಅಂಡಮಾನ್ ದ್ವೀಪಗಳಲ್ಲಿನ ಪ್ರಮುಖ ನದಿ: 'ರಾಂಗೋ ನದಿ'

ನಿಕೋಬಾರ್ ದ್ವೀಪಗಳು


* ನಿಕೋಬಾರ್ ದ್ವೀಪಗಳು ಅಂಡಮಾನ್ ದ ದಕ್ಷಿಣಭಾಗದಲ್ಲಿವೆ

* ನಿಕೋಬಾರ್ ದ್ವೀಪಗಳಲ್ಲಿನ ಅತಿದೊಡ್ಡ ದ್ವೀಪ: 'ಗ್ರೇಟ್ ನಿಕೋಬಾರ್' (862 ಚಕಿಮೀ)

* ಭಾರತದ ಭೂಪ್ರದೇಶದ ಅತ್ಯ೦ತ ದಕ್ಷಿಣದ ತುತ್ತತುದಿ 'ಇಂದಿರಾ ಪಾಯಿಂಟ್' ಇರುವುದು: 'ಗ್ರೇಟ್ ನಿಕೋಬಾರ್' ದ್ವೀಪದ ದಕ್ಷಿಣದ ತುದಿಯಲ್ಲಿನ 6⁰45¹ ಉಅಕ್ಷಾಂಶದಲ್ಲಿ

* ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿ: ಪೋರ್ಟ್ ಬ್ಲೇರ್ ,ದಕ್ಷಿಣ ಅಂಡಮಾನ್ ನಲ್ಲಿದೆ

ಲಕ್ಷ ದ್ವೀಪಗಳು


* ರಾಜಧಾನಿ: ಕವರತ್ತಿ, ಕಣ್ಣಾನೂರು ದ್ವೀಪದಲ್ಲಿದೆ

* ಇವು ಅರಬ್ಬೀ ಸಮುದ್ರದಲ್ಲಿರುವ ಹವಳದ ದಿಬ್ಬಗಳಾಗಿವೆ

* ಇವು 25 ದ್ವೀಪಗಳ ಸಮೂಹವಾಗಿದೆ

* ಭೂ ಮೇಲ್ಮೈ ಸಂಪೂರ್ಣವಾಗಿ ಸಮತಟ್ಟಾಗಿದ್ದು ಯಾವುದೇ ಬಗೆಯ ಬೆಟ್ಟಗುಡ್ಡಗಳು, ಝರಿಗಳು ಕಂಡುಬರುವುದಿಲ್ಲ

* ಪ್ರಮುಖವಾಗಿ ಎರಡು ದ್ವೀಪಸಮೂಹಗಳಿದ್ದು 1) ಉತ್ತರಕ್ಕೆ ಅಮಿನ್ ಡಿವಿ ದ್ವೀಪಗಳು ಮತ್ತು ದಕ್ಷಿಣಕ್ಕೆ ಕಣ್ಣಾನೂರು ದ್ವೀಪಗಳು

* ಲಕ್ಷ ದ್ವೀಪಗಳಲ್ಲಿನ ಅತಿದೊಡ್ಡ ದ್ವೀಪ: ಮಿನಿಕಾಯ್ (453 ಚಕಿಮೀ)

* ಮಿನಿಕಾಯ್ ದ್ವೀಪಸಮೂಹವನ್ನು ಇತರ ಲಕ್ಷ ದ್ವೀಪಗಳಿಂದ ಪ್ರತ್ಯೇಕಿಸುವ ಕಾಲುವೆ: 9⁰ ಕಡಲ್ಗಾಲುವೆ (9⁰ Channel)

* ಲಕ್ಷ ದ್ವೀಪಕ್ಕೆ ಸಮೀಪವಿರುವ ದೇಶ: ಮಾಲ್ಡೀವ್ಸ್(140 ಕಿಮೀ)

Contributed by:Spardha Loka