ಖನಿಜಗಳು  (Minerals)

 

• ಖನಿಜಗಳು ನೈಸರ್ಗಿಕ ಸಂಪನ್ಮೂಲಗಳಲ್ಲಿ ಅತಿ ಮುಖ್ಯವಾದವು. “ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ದೊರೆಯುವ ನಿರ್ದಿಷ್ಟ ರಾಸಾಯನಿಕ ಸಂಯೋಜನೆಯನ್ನು ಒಳಗೊಂಡಿರುವ ಮಿಶ್ರಣವನ್ನೇ ಖನಿಜ” ಗಳೆಂದು ಕರೆಯುವರು.
• ಇವು ಶಿಲೆ ಹಾಗೂ ಇನ್ನಿತರ ಭೂ ಮೇಲ್ಮೈ ವಲಯದ ಮಿಶ್ರಣಗಳೊಡನೆ ದೊರೆಯುತ್ತವೆ.
• ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಬಾಕ್ಸೈಟ್ ಅದಿರು, ಅಭ್ರಕ, ಚಿನ್ನದ ಅದಿರು ಮುಖ್ಯವಾದವು.
• ಶಕ್ತಿ ಸಂಪನ್ಮೂಲಗಳಾದ ಕಲ್ಲಿದ್ದಲು, ಪೆಟ್ರೋಲಿಯಂ ಅಣು ಖನಿಜಗಳನ್ನು ದೇಶದಲ್ಲಿ ಉತ್ಪಾದಿಸಲಾಗುವುದು. ಜೊತೆಗೆ ಅಸಂಪ್ರದಾಯಕ ಶಕ್ತಿ ಸಂಪನ್ಮೂಲಗಳಾದ ಸೌರಶಕ್ತಿ, ಗಾಳಿಶಕ್ತಿ ಮೊದಲಾದವು ವಿದ್ಯುತ್ತಿನ ಅಪಾರ ಕೊರತೆಯಿರುವ ನಮ್ಮ ದೇಶದಲ್ಲಿ ಅತಿ ಮುಖ್ಯವಾಗಿವೆ.

1) ಕಬ್ಬಿಣ ಅದಿರು


• ಭಾರತವು ಉತ್ಪಾದಿಸುವ ಕಬ್ಬಿಣ ಸಂಬಂಧಿ ಅದಿರುಗಳಲ್ಲಿ ಹಾಗೂ ಲೋಹ ಖನಿಜಗಳಲ್ಲಿ ಕಬ್ಬಿಣದ ಅದಿರು ಅತಿ ಮುಖ್ಯವಾದುದು.
• ದೇಶವು ಉತ್ಪಾದಿಸುವ ಒಟ್ಟು ಖನಿಜಗಳ ಮೌಲ್ಯದ ಶೇ 11.6 ರಷ್ಟನ್ನು ಕಬ್ಬಿಣ ಅದಿರು ಒಳಗೊಂಡಿದೆ.
• ಕಬ್ಬಿಣದ ಅದಿರಿನ ನಿಕ್ಷೇಪವನ್ನು ಹೊಂದಿರುವ ರಾಷ್ಟ್ರಗಳಲ್ಲಿ ಭಾರತವು ಪ್ರಪಂಚದಲ್ಲಿ ಆರನೆಯ ಸ್ಥಾನವನ್ನು ಪಡೆದಿದೆ.

ಅದಿರಿನ ವಿಧಗಳು


ಕಬ್ಬಿಣದ ಅದಿರನ್ನು ಒಳಗೊಂಡಿರುವ ಖನಿಜಾಂಶದ ಪ್ರಮಾಣ ಆಧರಿಸಿ ನಾಲ್ಕು ಮುಖ್ಯ ವಿಧಗಳಾಗಿ ವಿಂಗಡಿಸಲಾಗಿದೆ. ಇವುಗಳೆಂದರೆ,
1) ಮ್ಯಾಗ್ನಟೈಟ್ :ಕಬ್ಬಿಣದ ಅದಿರುಗಳಲ್ಲಿ ಮ್ಯಾಗ್ನಾಟೈಟ್ ಅತ್ಯುತ್ತಮ ದರ್ಜೆಯದು.ಇದು ಶೇ 72 ರಷ್ಟು ಖನಿಜಾಂಶದಿಂದ ಕೂಡಿದ್ದು, ಕಪ್ಪು ಬಣ್ಣವನ್ನು ಹೊಂದಿದೆ. ಆದುದರಿಂದಲೇ ಇದನ್ನು ಕಪ್ಪು ಅದಿರು ಎನ್ನುವರು.
2) ಹೆಮಟೈಟ್ :ಪ್ರಪಂಚದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವ ಕಬ್ಬಿಣದ ಅದಿರು.ಇದು ಶೇ 70 ರಷ್ಟು ಖನಿಜಾಂಶವನ್ನು ಹೊಂದಿದ್ದು, ಕೆಂಪು ಬಣ್ಣವನ್ನು ಹೊಂದಿದೆ ಆದುದರಿಂದ ಇದನ್ನು ಕೆಂಪು ಅದಿರು ಎನ್ನುವರು.
3) ಲಿಮೊನೈಟ್ :ಈ ದರ್ಜೆಯ ಕಬ್ಬಿಣದ ಅದಿರು ಶೇ 60 ರಷ್ಟು ಖನಿಜಾಂಶ ಹೊಂದಿದೆ.
4) ಸಿಡರೈಟ್ :ಇದು ಶೇ 48 ರಷ್ಟು ಖನಿಜಹಾಂಶ ಹೊಂದಿದೆ.

• ಭಾರತದಲ್ಲಿ ಜಾರ್ಖಂಡ, ಒಡಿಶಾ ಮತ್ತು ಕರ್ನಾಟಕ ರಾಜ್ಯಗಳು ಅತಿ ಹೆಚ್ಚು ಕಬ್ಬಿಣದ ಅದಿರಿನ ನಿಕ್ಷೇಪವನ್ನು ಹೊಂದಿರುವ ರಾಜ್ಯಗಳಾಗಿವೆ
• .ಜಾರ್ಖಂಡನ ಸಿಂಗಭೂಮ್, ಒರಿಸ್ಸಾದ ಕೆಯೊಂಜ್ಹಾರ್, ಮಯೂರ್ ಭಂಜ್ ಮತ್ತು ಸುಂದರ ಘರ್ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಕಬ್ಬಿಣ ಅದಿರಿನ ನಿಕ್ಷೇಪವಿದೆ. ಇದಲ್ಲದೆ ಛತ್ತೀಸಘಡದ ಬಸ್ತಾರ್, ದುರ್ಗ ಮತ್ತು ರಾಯಪುರಗಳು ಹೆಸರಾಗಿವೆ. ಗೋವಾ, ಆಂಧ್ರ ಪ್ರದೇಶ ಮತ್ತು ತಮಿಳನಾಡು ಕಬ್ಬಿಣದ ನಿಕ್ಷೇಪವನ್ನು ಒಳಗೊಂಡಿವೆ.
• ಕರ್ನಾಟಕದ ಕೆಮ್ಮಣ್ಣುಗುಂಡಿ, ಹೊಸಪೇಟೆ, ಸೊಂಡೂರು, ಕುಮಾರ ಸ್ವಾಮಿ ಬೆಟ್ಟ, ಕುದುರೆಮುಖಗಳಲ್ಲಿ ಕಬ್ಬಿಣ ಅದಿರಿನ ನಿಕ್ಷೇಪಗಳಿವೆ.

• ಕಬ್ಬಿಣ ಅದಿರನ್ನು ಕರ್ನಾಟಕ, ಛತ್ತೀಸಘಡ, ಜಾರ್ಖಂಡ್, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಒಡಿಶಾ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿರುವ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳಲ್ಲಿ ಬಳಸಲಾಗುತ್ತಿದೆ. ಜೊತೆಗೆ ಜಪಾನ್, ಚೈನಾ, ಇಟಲಿ, ಇರಾನ್ ಮೊದಲಾದ ದೇಶಗಳಿಗೆ ರಫ್ತು ಮಾಡಿ ವಿದೇಶಿ ವಿನಿಮಯವನ್ನು ಗಳಿಸಲಾಗುತ್ತಿದೆ.

2) ಮ್ಯಾಂಗನೀಸ್ ಅದಿರು


• ಭಾರತವು ಉತ್ಪಾದಿಸುತ್ತಿರುವ ಕಬ್ಬಿಣದ ಮಿಶ್ರ ಲೋಹಗಳಲ್ಲಿ ಮ್ಯಾಂಗನೀಸ್ ಅತಿ ಮುಖ್ಯವಾದುದು.
• ಇದರ ಮುಖ್ಯ ಉಪಯೋಗಗಳೆಂದರೆ ಮ್ಯಾಂಗನೀಸ್ನ್ನು ಉಕ್ಕಿನ ಉತ್ಪಾದನೆಯಲ್ಲಿ, ರಾಸಾಯನಿಕ ಮತ್ತು ವಿದ್ಯುತ್ ಉಪಕರಣಗಳ ತಯಾರಿಕೆ ಹಾಗೂ ಬಣ್ಣದ ಗಾಜುಗಳ ತಯಾರಿಕೆಯಲ್ಲಿ ಬಳಸಲಾಗುವುದು.
• ಮ್ಯಾಂಗನೀಸ್ ಅದಿರಿನ ವಿಧಗಳು : ಮ್ಯಾಂಗನೀಸ್ನ ಮುಖ್ಯ ಅದಿರುಗಳೆಂದರೆ ಪೈರೋಲೋಸೈಟ್, ಸೈಲೊಮೆಲೆನ್, ಮ್ಯಾಗ್ನೆನೈಟ್, ಬ್ರಾನೈಟ್ ಮತ್ತು ಹೋಲ್ಯಾಂಡೈಟ್.
• ಭಾರತದಲ್ಲಿ ದೊರಕುವ ಮ್ಯಾಂಗನೀಸ್ ಅದಿರು ಅತ್ಯುತ್ತಮವಾಗಿದೆ. ಪೈರೋಲೋಸೈಟ್ ಮತ್ತು ಸೈಲೋಮೆಲೇನ ಮ್ಯಾಂಗನೀಸ್ದ ಮುಖ್ಯ ಅದಿರುಗಳಾಗಿವೆ.
• ಮ್ಯಾಂಗನೀಸ್ ಉತ್ಪಾದನೆಯಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ದು, ಒಡಿಶಾ, ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ್ರಗಳು ಮ್ಯಾಂಗನೀಸ್ ಅದಿರನ್ನು ಉತ್ಪಾದಿಸುವ ಪ್ರಮುಖ ರಾಜ್ಯಗಳಾಗಿವೆ. ಇವುಗಳಲ್ಲದೆ ಬಿಹಾರ, ಛತ್ತೀಸಘಡ್, ರಾಜಸ್ತಾನ, ಪಂಜಾಬ ಮತ್ತು ಗೋವಾಗಳಲ್ಲೂ ಮ್ಯಾಂಗನೀಸ್ ಅದಿರು ದೊರೆಯುತ್ತದೆ.

3) ಬಾಕ್ಸೈಟ್ ಅದಿರು


• ಬಾಕ್ಸೈಟ್ ಅಲ್ಯುಮಿನಿಯಂ ಲೋಹದ ಮುಖ್ಯ ಅದಿರಾಗಿದೆ.
• ಕಂದು ಹಳದಿ ಮತ್ತು ಬೂದು ಬಣ್ಣಗಳಿಂದ ಮಿಶ್ರಿತವಾಗಿರುವ ಬಾಕ್ಸೈಟ್ ಜೇಡಿಮಣ್ಣಿನಂತೆ ಜಿಗುಟು ಗುಣವನ್ನು ಹೊಂದಿರುತ್ತದೆ.
• ಬಾಕ್ಸೈಟ್ ಅದಿರು ಪ್ರತಿಶತ 60 ರಿಂದ 70 ರಷ್ಟು ಅಲ್ಯುಮಿನಿಯಂ ಆಕ್ಸೈಡ್ ಹೊಂದಿದ್ದು, ಅದನ್ನು ಸಂಸ್ಕರಿಸಿ ಅಲ್ಯುಮಿನಿಯಂನ್ನು ಪಡೆಯಲಾಗುತ್ತದೆ.
• ಬಾಕ್ಸೈಟ್ ವೈವಿಧ್ಯಮಯ ಉಪಯೋಗಗಳಿಗಾಗಿ ಬಳಸಲ್ಪಡುವುದರಿಂದ 20ನೇ ಶತಮಾನದ ‘ಆಶ್ಚರ್ಯ ಲೋಹ’ವೆಂದು ಕರೆಯಲಾಗುತ್ತದೆ.
ಬಾಕ್ಸೈಟ್ ಅದಿರು ಮುಖ್ಯವಾಗಿ ಅಲ್ಯುಮಿನಿಯಂ ತಯಾರಿಕೆಯಲ್ಲಿ ಉಪಯೋಗವಾಗುತ್ತದೆ. ಭಾರತವು ಹೇರಳವಾದ ಬಾಕ್ಸೈಟ್ನ ನಿಕ್ಷೇಪವನ್ನು ಹೊಂದಿದ್ದು, ಅಲ್ಯುಮಿನಿಯಂ ಉತ್ಪಾದನೆಯಲ್ಲಿ ಸ್ವಾವಲಂಬನೆಯಾಗಿದೆ. ನಿಕ್ಷೇಪದಲ್ಲಿ ದೇಶವು ಪ್ರಪಂಚದಲ್ಲಿ 5ನೇ ಸ್ಥಾನದಲ್ಲಿದೆ.
• ಭಾರತದಲ್ಲಿ ಮುಖ್ಯವಾಗಿ ಒಡಿಶಾದ ಕೋರಾಪಟ್, ಕಾಳಹಂದಿ, ಬೋಲಾಂಗೀರ್, ಸುಂದರಘರ್; ಗುಜರಾತ್ನ ಜಾಮನಗರ, ತೆಲಂಗಾಣ ಭಾವನಗರ, ಜುನಾಗಡ, ಬರೂಚ್, ಸೂರತ ಜಿಲ್ಲೆಗಳಲ್ಲಿ; ಜಾರ್ಖಂಡನ ರಾಂಚಿ, ಪಲಮಾವು, ಶಹಬಾದ್, ಮಹಾರಾಷ್ಟ್ರದ ರತ್ನಾಗಿರಿ, ಕೊಲ್ಲಾಪೂರ, ಅಂಬೋಲಿಘಾಟ, ಉದಯಗಿರಿ, ರಾಧಾನಗರಿ, ದಂಗರ್ವಾಡಿ ಮತ್ತು ದರ್ಭಾಂಗ, ಛತ್ತೀಸಗಡದ ಬಸ್ತಾರ, ಬಿಲಾಸ್ಪುರ, ರಾಯಗಡ್ ಮತ್ತು ಸುರಗುಜಾಗಳಲ್ಲಿ ಹಂಚಿಕೆಯಾಗಿದೆ. ಇದಲ್ಲದೆ ಮಧ್ಯಪ್ರದೇಶ, ಕರ್ನಾಟಕದ ಬೆಳಗಾವಿ, ತಮಿಳುನಾಡಿನ ಸೇಲಂ, ಮಧುರೈ, ಆಂಧ್ರ ಪ್ರದೇಶದ ವಿಶಾಖಪಟ್ಟಣ ಮೊದಲಾದ ಸ್ಥಳಗಳಲ್ಲಿ ಬಾಕ್ಸೈಟ್ ಅದಿರು ದೊರೆಯುತ್ತದೆ.
• ಭಾರತವು ಸೌದಿ ಅರೇಬಿಯಾ, ಯು.ಎ.ಇ., ಬ್ರಿಟನ್, ಜರ್ಮನಿ, ಜಪಾನ. ಯು.ಎಸ್.ಎ. ರಾಷ್ಟ್ರಗಳಿಗೆ ಬಾಕ್ಸೈಟ್ ಅದಿರನ್ನು ರಫ್ತು ಮಾಡುತ್ತಿವೆ.

4) ಅಭ್ರಕ


• ಕಬ್ಬಿಣೇತರ ವರ್ಗದ ಖನಿಜಗಳಲ್ಲಿ ಅಭ್ರಕವು ಅತಿ ಮುಖ್ಯವಾದ ಅದಿರಾಗಿದೆ.
• ಭಾರತವು ಪ್ರಪಂಚದಲ್ಲೇ ಅತಿ ಹೆಚ್ಚು ಅಭ್ರಕದ ನಿಕ್ಷೇಪವನ್ನು ಹೊಂದಿದೆಯೆಂದು ಅಂದಾಜು ಮಾಡಲಾಗಿದೆ.
• ಅಭ್ರಕವು ಒಳ್ಳೆಯ ಪಾರದರ್ಶಕತೆ, ಸ್ಥಿತಿ ಸ್ಥಾಪಕತ್ವ, ಶಾಖ ನಿರೋಧಕ ಹಾಗೂ ಹೊಳಪುಳ್ಳ ಸಿಲಿಕೇಟ ಖನಿಜವಾಗಿದೆ. ಇದು ಶಾಖ ಮತ್ತು ವಿದ್ಯುತ್ತಿನ ಮಂದವಾಹಕವಾಗಿರು ವುದರಿಂದ ಇದನ್ನು ಶಾಖ ನಿರೋಧಕ ಹಾಗೂ ವಿದ್ಯುತ್ ನಿರೋಧಕ ವಸ್ತುವಾಗಿ ಟೆಲಿಫೋನ, ಟೆಲಿಗ್ರಾಫ್, ನಿಸ್ತಂತು ಸೇವೆ, ಗಾಜು ತಯಾರಿಕೆ, ಕೃತಕ ರಬ್ಬರ್, ಡೈನೊಮೋಗಳು, ರಾಸಾಯನಿಕ ಕೈಗಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ.
• ಅಭ್ರಕವು ‘ಕಾಗೆ ಬಂಗಾರ’ ಎಂದು ಪ್ರಸಿದ್ಧಿ ಪಡೆದಿದೆ.
• ಅಭ್ರಕದ ಮುಖ್ಯ ಅದಿರುಗಳು : ಅಭ್ರಕದಲ್ಲಿ ಕಂಡು ಬರುವ ರಾಸಾಯನಿಕ ಅಂಶ ಹಾಗೂ ಬಣ್ಣಗಳಿಗನುಗುಣವಾಗಿ ಅದನ್ನು ಅನೇಕ ವಿಧಗಳನ್ನಾಗಿ ವಿಂಗಡಿಸಲಾಗಿದೆ. ಇವುಗಳೆಂದರೆ ಮಸ್ಕೊವೈಟ್ (ಬಿಳಿ ಅಭ್ರಕ), ಬಯೋಟೈಟ್ (ಕಪ್ಪು ಅಭ್ರಕ), ಪ್ಲೂಗೋವೈಟ್ (ಕಂದು ಅಭ್ರಕ) ಮೊದಲಾದವು.
• ಭಾರತದಲ್ಲಿ ಅಭ್ರಕವು ಆಂಧ್ರ ಪ್ರದೇಶ, ಜಾರ್ಖಂಡ, ರಾಜಸ್ತಾನ, ಕೇರಳ, ತಮಿಳುನಾಡು,ಮಧ್ಯ ಪ್ರದೇಶದ, ಬಸ್ತಾರ್, ಬಾಲಘಾಟಗಳಲ್ಲಿ ಹಂಚಿಕೆಯಾಗಿದೆ.

5) ಚಿನ್ನದ ಅದಿರು


• ಭಾರತದಲ್ಲಿ ಚಿನ್ನದ ನಿಕ್ಷೇಪ ಬಹಳ ಕಡಿಮೆ ಇದೆ.
• ಕರ್ನಾಟಕದ ಕೋಲಾರ,ರಾಯಚೂರು, ಹಟ್ಟಿ ನಿಕ್ಷೇಪಗಳು, ಆಂಧ್ರ ಪ್ರದೇಶದ ಅನಂತಪುರ, ಬಿಹಾರ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಕಂಡುಬರುತ್ತವೆ.
• ಭಾರತದಲ್ಲಿ ಚಿನ್ನದ ಅದಿರು ಬೆಣಚುಕಲ್ಲಿನ ಶಿಲಾಸ್ತರಗಳಲ್ಲಿ ಎಳೆಗಳ ರೂಪದಲ್ಲಿ ದೊರೆಯುತ್ತದೆ.
• ರಾಯಚೂರಿನ ಹಟ್ಟಿಗಣಿ ದೇಶದಲ್ಲಿ ಅತಿ ಹೆಚ್ಚು ಚಿನ್ನವನ್ನು ಉತ್ಪಾದಿಸಲಾಗುತ್ತದೆ.