ಸ್ಥಳೀಯ ಸರ್ಕಾರಗಳು

 

* ವಿಕೇಂದ್ರೀಕರಣದ ಮೊದಲ ಹಂತ ಸಂಯುಕ್ತ ಪದ್ದತಿಯಾದರೆ, ನಂತರದ ಹಂತವೇ ಸ್ಥಳೀಯ ಸರ್ಕಾರ ಪದ್ಧತಿಯಾಗಿದೆ.
* ಸ್ಥಳೀಯ ಸರ್ಕಾರಗಳ ಉದ್ದೇಶ, ಸ್ಥಳೀಯ ಜನರ ಅಭಿವೃದಿ, ಸಮಸ್ಯೆಗಳನ್ನು ಇತ್ಯರ್ಥಪಡಿಸುವುದಾಗಿದೆ.
* ಸ್ಥಳೀಯ ಸರ್ಕಾರಗಳಿಗೆ ಹೆಚ್ಚು ಪ್ರಾಮುಖ್ಯತೆ ದೊರೆಯಲು ಕಾರಣವೆಂದರೆ ಸ್ಥಳೀಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು, ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ, ಸಾಮಾನ್ಯ ವ್ಯಕ್ತಿ ಸರ್ಕಾರದ ಕಾರ್ಯ ಚಟವಟಿಕೆಯಲ್ಲಿ ಭಾಗವಹಿಸಲು ಅವಕಾಶ, ವಿಕೇಂದ್ರೀಕರಣಕ್ಕೆ ಪ್ರೋತ್ಸಾಹ, ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಯಗಳನ್ನು ಕಡಿಮೆಗೊಳಿಸುವುದು, ಸುಖೀರಾಜ್ಯ, ಜನರು ಸ್ವಾವಲಂಬಿಗಳಾಗಲು ಸಹಕಾರ, ರಾಷ್ಟ್ರಾಭಿಮಾನ ವನ್ನು ಬೆಳೆಸಿಕೊಳ್ಳಲು ಸಹಾಯಕವಾಗಿರುವುದರಿಂದ ಹೆಚ್ಚು ಮಹತ್ವ ಸಿಕ್ಕಿದೆ.
* ಮಹಾತ್ಮಾಗಾಂಧಿಯವರು ‘ಗ್ರಾಮ ಸ್ವರಾಜ್ಯ’ ಸ್ಥಾಪಿಸಲು ಆಗ್ರಹಪಡಿಸಿದ ಪರಿಣಾಮ ಸಂವಿಧಾನದ 4ನೇ ಭಾಗದಲ್ಲಿ ಗ್ರಾಮ ಪಂಚಾಯತಿಗೆ ಅವಕಾಶ ನೀಡಲಾಗಿದೆ.

ಪಂಚಾಯತ್ ರಾಜ್ ವ್ಯವಸ್ಥೆ


* ಋಗ್ವೇದದ ಕಾಲದಲ್ಲಿ ಸಭಾಗಳೆಂದು, ಬ್ರಿಟಿಷ್‍ರ ಕಾಲದಲ್ಲಿ ಆಡಳಿತದ ವಿಕೇಂದ್ರೀಕರಣ, ಮೊಂಟಾಗು ಚೆಲ್ಮ್ಸ್ಫೊರ್ಡ್ ಸುಧಾರಣೆಯ ಸ್ಥಳೀಯ ಸರ್ಕಾರಗಳು ಪಂಚಾಯತ ರಾಜ್ಯಗಳ ವಿಕಾಸದ ಪ್ರಮುಖ ಅಂಶಗಳು.
* ಬ್ರಿಟಿಷರು ತಮ್ಮ ಆಡಳಿತದ ಅವಧಿಯಲ್ಲಿ ಮೊದಲಿಗೆ 1887ರಲ್ಲಿ ಮದ್ರಾಸನಲ್ಲಿ ಮುನ್ಸಿಪಾಲಿಟಿಯನ್ನು ಸ್ಥಾಪಿಸಿದರು(ಸ್ಥಳೀಯ ಸರ್ಕಾರಗಳ ಆರಂಭ).
* 1897 ರಲ್ಲಿ ಬೆಂಗಳೂರಿನಲ್ಲಿ ಮುನ್ಸಿಪಾಲಿಟಿಯನ್ನು ರಚಿಸಲು ಹಿಂದಿನ ಮೈಸೂರು ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸಿತು.
* 1933 ರಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಮುನ್ಸಿಪಲ್ ಸಂಸ್ಥೆಯನ್ನು ರಚಿಸಿತು.
* ಸಂವಿಧಾನಕ್ಕೆ 73ನೇ ತಿದ್ದುಪಡಿ ತರುವ ಮೂಲಕ ಪಂಚಾಯತ ರಾಜ್ಯ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
* ಪಂಚಾಯತ ರಾಜ್ ಸಂಸ್ಥೆಗಳಿಗೆ ಸಂವಿಧಾನಾತ್ಮಕ ಸ್ಥಾನವನ್ನು (1992) 73ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ ಮೂಲಕ ನೀಡಲಾಗಿದೆ.
* ಸಂವಿಧಾನದ 40ನೇ ವಿಧಿಯು ಗ್ರಾಮ ಪಂಚಾಯತಿಗಳ ಸ್ಥಾಪನೆಗೆ ಅನುವು ಮಾಡಿಕೊಟ್ಟಿದೆ.
* ಪಂಚಾಯತ ರಾಜ್ ವ್ಯವಸ್ಥೆಗೆ ಸಂಬಂಧಿಸಿದಂತೆ ಮಸೂದೆ ರಚಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ.
* ಸ್ಥಾನಿಕ ರಾಜ್ಯಗಳು, ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಪುರಸಭೆ, ನಗರಸಭೆ, ನಗರ ಕಾರ್ಪೋರೇಷನ್‍ಗಳು ಇವು ಸ್ಥಳೀಯರಿಂದ ನಡೆಸಲ್ಪಡುವ ಆಡಳಿತ ಘಟಕಗಳು.

ಸ್ಥಳೀಯ ಸರ್ಕಾರಗಳನ್ನು ಬಲಪಡಿಸುವ ನಿಟ್ಟಿನಲ್ಲಿ ರಚಿತವಾದ ಸಮಿತಿಗಳು


1. ಬಲವಂತರಾಯ್ ಮೆಹ್ತಾ ಸಮಿತಿ


* ರಾಷ್ಟ್ರೀಯ ಅಭಿವೃದ್ದಿ ಮಂಡಳಿಯು ಸ್ಥಳೀಯ ಸರ್ಕಾರವನ್ನು ಬಲಪಡಿಸುವ ಸಲುವಾಗಿ ಬಲವಂತರಾಯ ಮೆಹ್ತಾ ಸಮಿತಿಯನ್ನು 1957 ಜನವರಿಯಲ್ಲಿ ನೇಮಿಸಿತು.
* ಈ ಸಮಿತಿಯು ಗ್ರಾಮ ಪಂಚಾಯತಿ, ತಾಲೂಕು ಸಮಿತಿ ಹಾಗೂ ಜಿಲ್ಲಾ ಪರಿಷತಗಳೆಂದು ಮೂರು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲು ಶಿಫಾರಸ್ಸು ಮಾಡಿತು.
* ಬಲವಂತರಾಯ ಮೆಹ್ತಾ ಸಮಿತಿಯು ಪ್ರಜಾಪ್ರಭುತ್ವದಲ್ಲಿ ಆಡಳಿತ ವಿಕೇಂದ್ರೀಕರಣಕ್ಕೆ ಶಿಫಾರಸ್ಸು ಮಾಡಿತು.
* ಗ್ರಾಮ ಮಟ್ಟದಲ್ಲಿ ಅಭಿವೃದ್ದಿ, ಅನುಸೂಚಿತ ಜಾತಿ, ವರ್ಗ, ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ, ತನಗೆ ಬರುವ ಆದಾಯದ ಸದ್ಬಳಕೆ, ಸ್ವಯಂ ಆಡಳಿತ ನಿರ್ವಹಿಸಲು ಅವಕಾಶ ಮಾಡಿಕೊಡುವ ಶಿಫಾರಸ್ಸುಗಳು
* ಅಕ್ಟೋಬರ್ 2, 1959 ರಲ್ಲಿ ದೇಶದಲ್ಲೇ ರಾಜಸ್ತಾನ ಪ್ರಥಮ ಬಾರಿಗೆ ಪಂಚಾಯತ ರಾಜ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿತು. ಇದನ್ನು ನೆಹರೂ (ರಾಜಸ್ಥಾನದ ನಾಗೂರ್ ಜಿಲ್ಲೆಯಲ್ಲಿ) ಉದ್ಘಾಟಿಸಿದರು.
* ಪಂಚಾಯತ್ ರಾಜ್‍ವ್ಯವಸ್ಥೆಯನ್ನು ಜಾರಿಗೆ ತಂದ ಎರಡನೇ ರಾಜ್ಯ ಆಂಧ್ರಪ್ರದೇಶ (1959 ರಲ್ಲಿ)
* 1960ರಲ್ಲಿ ಕರ್ನಾಟಕ, ಅಸ್ಸಾಂ, ತಮಿಳುನಾಡು ಪಂಚಾಯತ ರಾಜ್ ವ್ಯವಸ್ಥೆಗಳನ್ನು ಸ್ಥಾಪಿಸಲು ಮುಂದಾದವು.

2. ಕೆ. ಸಂತಾನಮ್


* 1963ರಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಣಕಾಸಿನ ಮೂಲವನ್ನು ರೂಪಿಸಲು ರಚನೆಯಾದ ಸಮಿತಿಯಾಗಿದೆ.
* ಪಂಚಾಯತಿಗಳು, ಭೂಕಂದಾಯ ತೆರಿಗೆಯ ವಸೂಲಿ, ರಾಜ್ಯ ಮಟ್ಟದ ಅನುದಾನ, ಪಂಚಾಯತ ರಾಜ್ ಫೈನಾನ್ಸ್ ಕಾರ್ಪೋರೇಶನ ಸ್ಥಾಪನೆಗೆ ಶಿಫಾರಸ್ಸು.

3. ಅಶೋಕ್ ಮೆಹ್ತಾ ಸಮಿತಿ


* ಬಲವಂತರಾಯ್ ಮೆಹ್ತಾ ಸಮಿತಿಯ ಶಿಫಾರಸ್ಸುಗಳ ಲೋಪದೋಷ ಸರಿಪಡಿಸಲು ಅಶೋಕ್ ಮೇಹ್ತಾ ಸಮಿತಿಯ ರಚನೆ.
* ಜನತಾ ಸರ್ಕಾರ 1977 ರಲ್ಲಿ ಅಶೋಕ ಮೆಹ್ತಾ ಸಮಿತಿಯನ್ನು ರಚಿಸಿತು.
* ಈ ಸಮಿತಿ ತನ್ನ ವರದಿಯನ್ನು 1978 ರಲ್ಲಿ ಸಲ್ಲಿಸಿತು. ಇದರ ಶಿಫಾರಸ್ಸುಗಳೆಂದರೆ, ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಗೆ ಬದಲಾಗಿ ಎರಡು ಹಂತದ ಪಂಚಾಯತ್ ರಾಜ್ಯ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಶಿಫಾರಸ್ಸು ಮಾಡಿತು. ಅವುಗಳೆಂದರೆ, ಜಿಲ್ಲಾ ಪರಿಷತ್, ಮಂಡಲ ಪಂಚಾಯತ್
* ಗ್ರಾಮ ಸಭೆಗಳ ರಚನೆಗೆ ಅವಕಾಶ
* ಪಂಚಾಯತ್ ರಾಜ್ ಸಂಸ್ಥೆಗಳಿಗೆ ಎಸ್.ಸಿ/ಎಸ್.ಟಿ. ಮಹಿಳೆಯರಿಗೆ ಮೀಸಲು ಜೊತೆಗೆ ಇದನ್ನು ನೋಡಿಕೊಳ್ಳಲು ಪಂಚಾಯತ್ ರಾಜ್ ಮಂತ್ರಿ ನೇಮಕಕ್ಕೆ ಶಿಫಾರಸ್ಸು.
* ಪ್ರತಿಯೊಂದು ರಾಜ್ಯವು ಪಂಚಾಯತ್ ರಾಜ್ಯ ಸಚಿವಾಲಯವನ್ನು ಸ್ಥಾಪಿಸುವುದು.

4. ಜಿ.ವಿ.ಕೆ. ರಾವ್ ಸಮಿತಿ


* 1985ರಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಬಡತನ ನಿರ್ಮೂಲನೆ ಸಲುವಾಗಿ ಯೋಜನಾ ಆಯೋಗವು ಜಿ.ವಿ.ಕೆ.ರಾವ್‍ರವರ ಮುಖಂಡತ್ವದಲ್ಲಿ ಈ ಸಮಿತಿ ನೇಮಿಸಿತು.

5. ಎಲ್.ಎಂ.ಸಿಂಗ್ವಿ ಸಮಿತಿ


* ರಾಜೀವ್ ಗಾಂಧಿಯವರು ಎಲ್.ಎಂ. ಸಿಂಗ್ವಿ ಪ್ರಜಾಪ್ರಭುತ್ವ ಮತ್ತು ಅಭಿವೃದ್ದಿಗಾಗಿ ಪಂಚಾಯತ್ ರಾಜ್ ಸಂಸ್ಥೆಗಳ ಪುನಶ್ಚೇತನ ಎಂಬ ಸಮಿತಿಯನ್ನು ನೇಮಿಸಿತು.

ಕರ್ನಾಟಕದಲ್ಲಿ ಪಂಚಾಯತ್ ರಾಜ್ ಕಾಯ್ದೆ


* ಗಂಗರು ಮತ್ತು ರಾಷ್ಟ್ರಕೂಟರ ಕಾಲದಿಂದ ಕರ್ನಾಟಕದಲ್ಲಿ ಸ್ಥಳೀಯ ಸರ್ಕಾರಗಳ ಅಸ್ತಿತ್ವವನ್ನು ಕಾಣಬಹುದು.
* ಕರ್ನಾಟಕದಲ್ಲಿ 1983 ರಲ್ಲಿ ಪಂಚಾಯತ್ ರಾಜ್ ಮಸೂದೆಯನ್ನು ಸಿದ್ದಪಡಿಸಲಾಯಿತು.
* 1984 ರ ಮಾರ್ಚನಲ್ಲಿ ಅಂಗೀಕೃತ.
* 1985 ಜುಲೈ 10 ರಾಷ್ಟ್ರಪತಿ ಒಪ್ಪಿಗೆಯೊಂದಿಗೆ ಕಾಯೆಯಾಯಿತು.
* 73ನೇ ತಿದ್ದುಪಡಿಗನುಗುಣವಾಗಿ ಕರ್ನಾಟಕ ಸರ್ಕಾರವು 1993 ಮೇ 10 ಕರ್ನಾಟಕ ಪಂಚಾಯತ ಅಧಿನಿಯಮಕ್ಕೆ ಸ್ವಲ್ಪಮಟ್ಟಿನ ಬದಲಾವಣೆಯೊಂದಿಗೆ ಹೊಸ ಮಸೂದೆಯನ್ನು ಜಾರಿಗೆ ತಂದಿತು. ಇದರ ಪ್ರಮುಖ ಅಂಶಗಳೆಂದರೆ,
* ಗ್ರಾಮೀಣ ಪ್ರದೇಶದ ಸ್ಥಳೀಯ ಸರ್ಕಾರಗಳಿಗೆ 5 ವರ್ಷಕ್ಕೊಮ್ಮೆ ಚುನಾವಣೆ ನಡೆಸುವುದು
* ಪರಿಶಿಷ್ಟಜಾತಿ, ಮಹಿಳೆಯರಿಗೆ ಮೀಸಲಾತಿ ನೀತಿಯನ್ನು ಕಲ್ಪಿಸುವುದು.
* ಈ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ನಡೆಸುವುದರ ಜೊತೆಗೆ ಗ್ರಾಮೀಣ ಜನರು ನೇರವಾಗಿ ಚುನಾವಣೆಯಲ್ಲಿ ಭಾಗವಹಿಸುವುದು.
* ಕರ್ನಾಟಕದಲ್ಲಿ 1993 ರ ಹೊಸ ಕಾಯಿದೆ ಅನ್ವಯ 3 ರೀತಿಯ ಪಂಚಾಯತ ರಾಜ್ ವ್ಯವಸ್ಥೆಯನ್ನು ಕಾಣಬಹುದು. ಅವುಗಳೆಂದರೆ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿ.

1. ಜಿಲ್ಲಾ ಪಂಚಾಯತಿ


* 1993ರ ಕಾಯ್ದೆಯ ಅನ್ವಯ ಪ್ರತಿ ಜಿಲ್ಲೆಯಲ್ಲೂ ಒಂದೊಂದು ಜಿಲ್ಲಾ ಪಂಚಾಯತ ಇರಬೇಕು.
* ಒಟ್ಟು 30 ಜಿಲ್ಲಾ ಪಂಚಾಯತಿಗಳಿವೆ.
* ಈ ಕಾಯ್ದೆ ಪ್ರಕಾರ ಪ್ರತಿ ಜಿಲ್ಲಾ ಪಂಚಾಯತಿಯು, 40,000 ಜನ ಸಂಖ್ಯೆಗೆ ಒಬ್ಬ ಸದಸ್ಯನನ್ನು ಚುನಾಯಿಸಲಾಗುತ್ತದೆ.
* 5 ವರ್ಷಗಳ ಅವಧಿಗೆ ಗ್ರಾಮೀಣ ಜನರು ನೇರವಾಗಿ ಆಯ್ಕೆ ಮಾಡುತ್ತಾರೆ. ಆದರೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈ ಸಂಖ್ಯೆಯಲ್ಲಿ ವ್ಯತ್ಯಾಸವಿದೆ. ಉದಾ: ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈ ಸಂಖ್ಯೆಯಲ್ಲಿ ವ್ಯತ್ಯಾಸವಿದೆ. ಉದಾ: ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 18,000 ಜನಸಂಖ್ಯೆಗೆ ಒಬ್ಬ ಸದಸ್ಯ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ 30,000 ಜನಸಂಖ್ಯೆಗೆ ಒಬ್ಬ ಸದಸ್ಯನನ್ನು ಚುನಾಯಿಸಲಾಗುತ್ತದೆ.
* ಆ ಜಿಲ್ಲೆಯ ಲೋಕಸಭಾ, ರಾಜ್ಯಸಭಾ, ವಿಧಾನಸಭಾ, ವಿಧಾನ ಪರಿಷತ್ ಸದಸ್ಯರು, ತಾಲೂಕು ಪಂಚಾಯತಿಯ ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಸದಸ್ಯರು, ಜಿಲ್ಲಾ ಪಂಚಾಯತ್ ಸಭೆಗಳಲ್ಲಿ ಭಾಗವಹಿಸುವುದರ ಜೊತೆಗೆ ಮತ ಚಲಾಯಿಸುವ ಹಕ್ಕನ್ನು ಪಡೆದಿರುತ್ತಾರೆ.
* 1/3 ರಷ್ಟು ಕೋರಂ ಅಗತ್ಯದೊಂದಿಗೆ ಜಿಲ್ಲಾ ಪಂಚಾಯತ್ ಸಭೆ 2 ತಿಂಗಳಿಗೊಮ್ಮೆ ನಡೆಯಬೇಕು.
* ಒಬ್ಬ ಅಧ್ಯಕ್ಷ ಮತ್ತು ಉಪಾಧ್ಯಕ್ಷನನ್ನು ಒಳಗೊಂಡಿರುತ್ತದೆ. ಇವರ ಅಧಿಕಾರಾವಧಿ 30 ತಿಂಗಳು.
* ಜಿಲ್ಲಾ ಪಂಚಾಯತಿ ವಿಧಿಸುವ ಎಲ್ಲಾ ವಿವಿಧ ತೆರಿಗೆ ಹಾಗೂ ದಂಡಗಳ ಮೂಲಕ ಸಂಗ್ರಹಿಸಲಾದ ಹಣವನ್ನು ಜಿಲ್ಲಾ ಪಂಚಾಯತಿ ಅಭಿವೃದ್ದಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುತ್ತದೆ.

ಜಿಲ್ಲಾ ಪಂಚಾಯತ್ ಸಮಿತಿಗಳು


1. ಕೃಷಿ ಮತ್ತು ಕೈಗಾರಿಕಾ ಸಮಿತಿ
2. ಸಾಮಾಜಿಕ ನ್ಯಾಯ ಸಮಿತಿ
3. ಶಿಕ್ಷಣ ಮತ್ತು ಆರೋಗ್ಯ ಸಮಿತಿ
4. ಹಣಕಾಸು ಸಾಮಾನ್ಯ ಸ್ಥಾಯಿ ಸಮಿತಿ
5. ಯೋಜನಾ ಲೆಕ್ಕಪತ್ರ ಸಮಿತಿ
* ಒಟ್ಟು 5 ಸ್ಥಾಯಿ ಸಮಿತಿ ಗಳಿರುತ್ತವೆ.

* ಜಿಲ್ಲಾ ಪಂಚಾಯತಿಯ ಅಧಿಕಾರಗಳೆಂದರೆ, ಜಿಲ್ಲೆಯ ಸಮಗ್ರಹ ಅಭಿವೃದ್ದಿ ಉದಾ : ಕೃಷಿ, ಶಿಕ್ಷಣ, ಆರೋಗ್ಯ, ರಸ್ತೆ, ನೀರು ಮೊದಲಾದವುಗಳು
* ಜಿಲ್ಲಾ ಪಂಚಯತಿಯ ಆಡಳಿತ ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸುವುದರ (ಐಎಎಸ್) ಜೊತೆಗೆ ಮುಖ್ಯ ಲೆಕ್ಕಾಧಿಕಾರಿ ಉಪ ಕಾರ್ಯದರ್ಶಿಗಳನ್ನು ನೇಮಿಸುತ್ತಾರೆ.
* ಜಿಲ್ಲಾ ಪಂಚಾಯತಿಯ ಒಟ್ಟು ಸ್ಥಾನಗಳಲ್ಲಿ ಪರಿಶಿಷ್ಟ ಜಾತಿಗೆ ಶೇ. 15, ಪರಿಶಿಷ್ಟ ಪಂಗಡಕ್ಕೆ ಶೇ. 3 ಇತರೆ ಹಿಂದುಳಿದ ವರ್ಗಗಳಿಗೆ ಮಹಿಳೆಯರಿಗೆ 1/3 ರಷ್ಟು ಮೀಸಲು ಸ್ಥಾನಗಳನ್ನು ನಿಗದಿಪಡಿಸಲಾಗಿದೆ.

2. ತಾಲೂಕು ಪಂಚಾಯತಿ


* 1993 ರ ಕರ್ನಾಟಕ ಪಂಚಾಯತ್ ಕಾಯ್ದೆ ಪ್ರಕಾರ ಪ್ರತಿ ತಾಲೂಕಿಗೂ ಒಂದು ತಾಲೂಕು ಪಂಚಾಯತಿ ಇರಬೇಕು.
* ಪ್ರತಿ ತಾಲೂಕು ಪಂಚಾಯತಿಗೆ 10,000 ಜನಸಂಖ್ಯೆಗೆ ಒಬ್ಬ ಸದಸ್ಯ ಗ್ರಾಮಗಳ ಜನರು ವಯಸ್ಕ ಮತದಾನದ ಮೂಲಕ 5 ವರ್ಷಗಳಿಗೊಮ್ಮೆ ಚುನಾಯಿಸುತ್ತಾರೆ.
* ತಾಲೂಕು ಪಂಚಾಯತಿಯಲ್ಲಿ ತಾಲೂಕನ್ನು ಪ್ರತಿನಿಧಿಸುವ ಲೋಕಸಭಾ, ರಾಜ್ಯಸಭಾ, ವಿಧಾನಸಭಾ, ವಿಧಾನಪರಿಷತ್ ಸದಸ್ಯರಿರುತ್ತಾರೆ.
* ತಾಲೂಕು ಪಂಚಾಯತಿಯ ಸದಸ್ಯರೆಲ್ಲ ಸೇರಿ ತಮ್ಮಲ್ಲಿಯೇ ಒಬ್ಬನನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನಂತರ 2 ತಿಂಗಳಿಗೊಮ್ಮೆ ಸಭೆ ಸೇರುವುದು ಜೊತೆಗೆ ಸಭೆ ನಡೆಸಲು 1/3 ರಷ್ಟು ಬಹುಮತವಿರಬೇಕು.
* ತಾಲೂಕು ಪಂಚಾಯತ ಅಧ್ಯಕ್ಷ ತನ್ನ ರಾಜೀನಾಮೆಯನ್ನು ಅಸಿಸ್ಟೆಂಟ್ ಕಮೀಷನರಗೆ ನೀಡಬೇಕು ಅಥವಾ ಉಪಾಧ್ಯಕ್ಷರಿಗೆ ನೀಡಬಹುದು.
* ತಾಲೂಕು ಪಂಚಾಯತಿಯ ಆಡಳಿತ ನಡೆಸಲು ಬೇಕಾದ ಹಣಕಾಸಿನ ಮೂಲಗಳೆಂದರೆ, ಸರ್ಕಾರದಿಂದ ಸಂಗ್ರಹಿಸಲಾದ ಧನ ಸಹಾಯ, ತೆರಿಗೆ ಮೊದಲಾದವುಗಳು.
* ತಾಲೂಕು ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುವ ಸಲುವಾಗಿ ರಾಜ್ಯ ಸರ್ಕಾರ ಒಬ್ಬ ‘ಎ’ದರ್ಜೆಯ ಅಧಿಕಾರಿಯನ್ನು ನೇಮಿಸುತ್ತದೆ. ಇವರು ತಾಲೂಕು ಪಂಚಾಯತಿಯ ಆಡಳಿತ ಮುಖ್ಯಸ್ಥರಾಗಿರುತ್ತಾರೆ. ತಾಲೂಕಿನ ಸಮಗ್ರ ಅಭಿವೃದ್ದಿ ತಾಲೂಕು ಪಂಚಾಯತ ಕಾರ್ಯಗಳಾಗಿರುತ್ತದೆ. ಉದಾ : ಕೃಷಿ, ರಸ್ತೆಗಳು, ಆಣೆಕಟ್ಟು, ಗೃಹ ನಿರ್ಮಾಣ, ನೀರು ಮೊದಲಾದವು.
* ತಾಲೂಕು ಪಂಚಾಯತಿಯ ಒಟ್ಟು ಸ್ಥಾನಗಳಲ್ಲಿ ಪರಿಶಿಷ್ಟ ಜಾತಿಗೆ ಶೇ.15ರಷ್ಟು ಪರಿಶಿಷ್ಟ ಪಂಗಡಕ್ಕೆ ಶೇ. 3 ರಷ್ಟು ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ 1/3 ರಷ್ಟು ಸ್ಥಾನಗಳನ್ನು ಮೀಸಲಿಡಲಾಗುತ್ತದೆ.

3. ಗ್ರಾಮ ಪಂಚಾಯತಿ


* 1993 ರ ಪಂಚಾಯತ ರಾಜ್ ಕಾಯ್ದೆಯ ಪ್ರಕಾರ 5ಸಾವಿರ ಜನಸಂಖ್ಯೆಗೆ ಕಡಿಮೆ ಇಲ್ಲದಂತೆ ಹಾಗೂ 7 ಸಾವಿರ ಜನಸಂಖ್ಯೆಗಿಂತ ಹೆಚ್ಚಿಲ್ಲದ ಗ್ರಾಮ ಅಥವಾ ಗ್ರಾಮಗಳ ಸಮೂಹವನ್ನು ಗ್ರಾಮ ಪಂಚಾಯತಿ ಎಂದು ಕರೆಯಲಾಗಿದೆ. ಇದಲ್ಲದೆ ಕೊಡಗು, ಶಿವವೊಗ್ಗ, ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಉತ್ತರ ಕನ್ನಡ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ 2 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶಗಳಿಗೆ ಗ್ರಾಮ ಪಂಚಾಯತಿ ಎಂದು ಪರಿಗಣಿಸಲಾಗಿದೆ.
* ಪ್ರಸ್ತುತ ದೇಶದಲ್ಲಿ 2,22,000 ಗ್ರಾಮ ಪಂಚಾಯತಿಗಳಿಗೆ ಇದರಲ್ಲಿ ಕರ್ನಾಟಕದಲ್ಲಿ 5640 ಗ್ರಾಮ ಪಂಚಾಯತಿಗಳಿವೆ. ರಾಜ್ಯ ಚುನಾವಣಾ ಆಯೋಗದಿಂದ ಚುನಾವಣೆ ನಡೆಸಬೇಕು.
* ಪ್ರತಿ ಗ್ರಾಮ ಪಂಚಾಯತಿಯಲ್ಲಿ 400 ಜನಕ್ಕೆ ಒಬ್ಬ ಸದಸ್ಯನಿರುತ್ತಾನೆ. ವಯಸ್ಕ ಮತದಾನದ ಮೂಲಕ ಜನರೇ ನೇರವಾಗಿ 5 ವರ್ಷಗಳ ಅವಧಿಗೆ ಆಯ್ಕೆ ಮಾಡುತ್ತಾರೆ.
* ಗ್ರಾಮ ಸಭೆ ನಡೆಸಲು ಇರಬೇಕಾದ ಕೋರಂ ಶೇ. 10ರಷ್ಟು ಅಥವಾ 100 ಮತದಾರರು.
* ಗ್ರಾಮ ಪಂಚಾಯತಿಯು 2 ತಿಂಗಳಿಗೊಮ್ಮೆ ಸಭೆ ಸೇರುತ್ತದೆ. ಸದಸ್ಯರೇ ತಮ್ಮಲ್ಲಿಯೇ ಒಬ್ಬ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಿಸಿಕೊಳ್ಳುತ್ತಾರೆ. ಅಧಿಕಾರಾವಧಿ 30 ತಿಂಗಳು, ಗ್ರಾಮ ಪಂಚಾಯತಿಯ ಕಾರ್ಯಗಳೆಂದರೆ, ಸಮಸ್ತ ಗ್ರಾಮಗಳ ಅಭಿವೃದ್ದಿ ಉದಾ;ರಸ್ತೆ, ವಿದ್ಯುತ್, ನೀರು, ಕೃಷಿ ಮೊದಲಾದವುಗಳು.
* ಗ್ರಾಮ ಪಂಚಾಯತಿಯು. ಸಾಮಾಜಿಕ ನ್ಯಾಯ ಸಮಿತಿ (ಒಬ್ಬ ಮಹಿಳೆ ಮತ್ತು ಪರಿಶಿಷ್ಟ ಜಾತಿ ಸದಸ್ಯರನ್ನು ಹೊಂದುವುದು ಕಡ್ಡಾಯ) ಉತ್ಪಾದನ ಸಮಿತಿ, ಸೌಕರ್ಯಗಳ ಸಮಿತಿಗಳಿರುತ್ತವೆ. (3 ಸ್ಥಾಯಿ ಸಮಿತಿಗಳು) ಗ್ರಾಮ ಪಂಚಾಯತಿ ಕಾರ್ಯನಿರ್ವಹಣೆಯನ್ನು ರಾಜ್ಯ ಸರ್ಕಾರ ದಿಂದ ನೇಮಕಗೊಂಡ ಕಾರ್ಯದರ್ಶಿಯು ಆಡಳಿತಾಧಿಕಾರಿಯಾಗಿರುತ್ತಾನೆ.
* ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ, ಶೇ. 15, ಪರಿಶಿಷ್ಟ ಪಂಗಡ ಶೇ.3 ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ 1/3 ರಷ್ಟು ಮೀಸಲಾತಿ ನೀಡಲಾಗಿದೆ.
* ಗ್ರಾಮ ಪಂಚಾಯತಿಯ ಹಣಕಾಸಿನ ಮೂಲಗಳೆಂದರೆ, ರಾಜ್ಯ ಸರ್ಕಾರ, ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ನೀಡುವ ಸಹಾಯಧನ, ತೆರಿಗೆ, ದಂಡಗಳಿಂದ ಬರುವ ಹಣ.
* ಸಹಾಯಕ ಕಮೀಷನರಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ತೆಗೆದುಹಾಕುವ ಅಧಿಕಾರವಿದೆ (ದುರ್ನಡತೆ ಆಧಾರದ ಮೇಲೆ)
* ಭಾರತದಲ್ಲಿ ಮೊದಲಬಾರಿಗೆ ಪಂಚಾಯತ ವ್ಯವಸ್ಥೆಯಲ್ಲಿ ಮೀಸಲಾತಿ ನೀಡಿದ ರಾಜ್ಯ ಕರ್ನಾಟಕ
* 1993 ರ ಕಾಯ್ದೆ ಕರ್ನಾಟಕದಲ್ಲಿ ಜಾರಿಗೆ ಬಂದ ಸಂದರ್ಭದಲ್ಲಿ ಎಂ. ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದರು.