ಜ್ವಾಲಾಮುಖಿ

 

ಜ್ವಾಲಾಮುಖಿ ಭೂಮಿಯ ಮೇಲ್ಮೈ ಅಥವಾ ಚಿಪ್ಪಿನಲ್ಲಿರುವ ಒಂದು ಬಿರುಕು.ಭೂ ಮೇಲ್ಮೈನಲ್ಲಿ ಬಿರುಕು ಅಥವಾ ರಂಧ್ರಗಳು ಅಥವಾ ದ್ವಾರಗಳು ಉಂಟಾಗಿ ಅವುಗಳ ಮೂಲಕ ಭೂಮಿಯ ಒಳಗಿನ ಶಿಲಾಪಾಕವು ಹೊರಬೀಳುವುದನ್ನು ಜ್ವಾಲಾಮುಖಿಯೆಂದು ಕರೆಯುವರು. ಇಂತಹ ಬಿರುಕಿನ ಮೂಲಕ ಭೂಗರ್ಭದಿಂದ ಕುದಿಯುವ ದ್ರವರೂಪದಲ್ಲಿನ ಕಲ್ಲುಗಳು, ಬೂದಿ ಮತ್ತು ಇತರ ಅನಿಲಗಳು ಹೊರಗೆ ಚಿಮ್ಮುತ್ತವೆ. ಸಾಮಾನ್ಯವಾಗಿ ಘನರೂಪದಲ್ಲಿ ಅಥವಾ ದ್ರವರೂಪದಲ್ಲಿರುವ ಕಲ್ಲುಗಳನ್ನು ಹೊರ ಉಗುಳುವ ಇಂತಹ ಜ್ವಾಲಾಮುಖಿಗಳು ಪರ್ವತದ ಶಿಖರಭಾಗದಲ್ಲಿರುತ್ತವೆ.

ಜ್ವಾಲಾಮುಖಿಯ ವಿಧಗಳು


ಜ್ವಾಲಾಮುಖಿಗಳನ್ನು ಅವುಗಳ ಸ್ಫೋಟನಾ ಸಂಭವನೀಯತೆ ಆಧರಿಸಿ ಈ ಕೆಳಕಂಡಂತೆ ಮೂರು ವಿಧಗಳಾಗಿ ವಿಂಗಡಿಸಬಹುದು.

1) ಜಾಗೃತ ಜ್ವಾಲಾಮುಖಿಗಳು (Active Volcanoes)


ನಿರಂತರವಾಗಿ ಸ್ಫೋಟಗೊಂಡು ಲಾವಾರಸ, ಅನಿಲ, ಬೂದಿ ಇತ್ಯಾದಿಗಳನ್ನು ಹೊರಚಿಮ್ಮುವ ಜ್ವಾಲಾಮುಖಿಗಳಿಗೆ ಜಾಗೃತ ಜ್ವಾಲಾಮುಖಿಗಳು ಎನ್ನುವರು. ಪ್ರಪಂಚದಾದ್ಯಂತ ಸುಮಾರು 600 ಜಾಗೃತ ಜ್ವಾಲಾಮುಖಿಗಳಿವೆ. ಉದಾ: ಫಿಲಿಫೈನ್ಸ್ ದ್ವೀಪದ ಪಿನಾಟುಬೊ, ಇಟಲಿಯ ಸ್ಟ್ರಾಂಬೋಲಿ ಮತ್ತು ಎಟ್ನಾ, ಯುಎಸ್‍ಎಯ ಸೇಂಟ್ ಹೆಲೆನಾ, ಮೊದಲಾದವು.

2) ಸುಪ್ತ ಜ್ವಾಲಾಮುಖಿಗಳು(Dormant Volcanoes)


ಒಮ್ಮೆ ಸ್ಫೋಟಿಸಿ ಅನಂತರ ಬಹುಕಾಲ ಕಾರ್ಯಾಚರಣೆ ನಡೆಸದೆ ಸುಪ್ತವಾಗಿದ್ದು ಯಾವಾಗಲೋ ಒಮ್ಮೆ ಜಾಗೃತವಾಗಿ ಕಾರ್ಯಾಚರಣೆ ನಡೆಸುವ ಜ್ವಾಲಾಮುಖಿಗಳನ್ನು ಸುಪ್ತ ಜ್ವಾಲಾಮುಖಿ ಎನ್ನುವರು.
ಉದಾ: ಇಟಲಿಯ ಮೌಂಟ್ ವೆಸೂವಿಯಸ್, ಜಪಾನಿನ ಪ್ಯೂಜಿಯಾಮ,ಇಂಡೋನೇಷ್ಯಾದ ಕ್ರಕಟೋವ, ತಾಂಜೇನಿಯಾದ ಕಿಲಿಮಂಜರೋ ಮೊದಲಾದವು

3) ಲುಪ್ತ ಜ್ವಾಲಾಮುಖಿಗಳು(Extinct Volcanoes)


ಇವುಗಳು ಪುರಾತನ ಕಾಲದಲ್ಲಿ ಕಾರ್ಯಾಚರಣೆ ನಡೆಸಿದ್ದು ನಂತರದಲ್ಲಿ ಯಾವುದೇ ಕಾರ್ಯಾಚರಣೆ ನಡೆಸಿಲ್ಲ.
ಉದಾ: ಅರ್ಜೆಂಟೈನಾದ ಅಕಾಂಕಗುವಾ, ತಾಂಜೇನಿಯಾದ ಗೊರಾಂಗೊರೊ, ಸ್ಕಾಟ್ಲೆಂಡ್‍ನ್ ಆರ್ಥರ್‍ಸೀಟ್ ಮೊದಲಾದವು.

ಪ್ರಪಂಚದ ಪ್ರಸಿದ್ಧ ಜ್ವಾಲಾಮುಖಿಗಳು


1. ಮೌಂಟ್ ವೆಸೂವಿಯಸ್ (ಇಟಲಿ).
2. ಕ್ರಕಟೋವ (ಇಂಡೋನೇಷ್ಯ).
3. ಮೌಂಟ್ ಪಿಲೀ (ವೆಸ್ಟ್ ಇಂಡೀಸ್).
4. ಮೌಂಟ್ ಫ್ಯೂಜಿಯಾಮ (ಜಪಾನ)