Loading [MathJax]/extensions/MathML/content-mathml.js

ಮಂಗಳನ ಅಂಗಳದಲ್ಲಿ ಮಾನವ :

 

ಪೀಠಿಕೆ:


ಇಂದು ನಾವು ವೈಜ್ಞಾನಿಕ ಯುಗದಲ್ಲಿ ಪಾದಾರ್ಪಣೆ ಮಾಡುತ್ತಿದೇವೆ.ಸೌರ್ಯವ್ಯೂಹದ ಗ್ರಹಗಳ ಚಲನೆ,ವೇಗ,ಅವುಗಳ ಗಾತ್ರ, ಬಣ್ಣ, ಸೂರ್ಯನಿಂದ ಇರುವ ದೂರ,ಗ್ರಹಣ,ಗ್ರಹಗಳ ಚಲನೆ ಮುಂತಾದವುಗಳನ್ನು ಈಗಾಗಲೇ ಅರಿತಿದ್ದ ಮಾನವನು; ಈಗ ಮಂಗಳ ಗ್ರಹದ ಮೇಲೂ ತನ್ನ ಗಮನವನ್ನು ಕೇಂದ್ರೀಕರಿಸಿದ್ದಾನೆ.ಅದಕ್ಕೆ ಸಂಬಂಧಿಸಿದ ಚಿಕ್ಕ ಮಾಹಿತಿ ಇದಾಗಿದೆ.

ವಿಷಯ ನಿರೂಪಣೆ:


ಖಗೋಳಶಾಸ್ತ್ರಜ್ಞರು ಮಂಗಳ ಗ್ರಹದ ಬಗ್ಗೆ ಅಧ್ಯನ ಮಾಡಿ ಈ ರೀತಿ ಮಾಹಿತಿ ನೀಡಿದ್ದಾರೆ. ಭೂಗ್ರಹಕ್ಕೂ ಮೊದಲು ಮಂಗಳ ಗ್ರಹದಲ್ಲಿ ಜನವಸವಾಗಿದ್ದರು. ಜನಸಂಖ್ಯೆಯ ಒತ್ತಡ,ಪ್ರಕೃತಿ ವಿಕೋಪದಿಂದಾಗಿ ಮಂಗಳ ಗ್ರಹ ಇಂದು ಶೂನ್ಯವಾಗಿದೆ.ಮಂಗಳಗ್ರಹದ ಮಣ್ಣು ಕೆಂಪು ಬಣ್ಣವಾಗಿರುವುದರಿಂದ ಇಂದು ನಮಗೆ ಮಂಗಳ ಗ್ರಹ ಕೆಂಪಾಗಿ ಕಾಣಿಸುತ್ತದೆ. ಅಲ್ಲದೆ ಅಲ್ಲಲ್ಲಿ ಬಿದ್ದಿರುವ ಗುಳಿಗಳು ಹಿಂದೆ ಅಲ್ಲಿ ಸಾಕಷ್ಟು ನೀರು ಹಾಗೂ ವನಸ್ಪತಿ ಇದ್ದಿರಬಹುದೆಂದು ಸೂಚಿಸುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಂಗಳ ಗ್ರಹ ವಾಸಕ್ಕೆ ಯೋಗ್ಯವೇ, ಇಲ್ಲವೇ ಎಂಬುದನ್ನು ಅರಿಯಲು ಇತ್ತೀಚೆಗೆ ಅಮೆರಿಕದ ನಾಸಾ ಸೇರಿದಂತೆ ಹಲವಾರು ರಾಷ್ಟ್ರಗಳು ಸಾಕಷ್ಟು ಉಪಗ್ರಹಗಳನ್ನು ಮಂಗಳ ಗ್ರಹಕ್ಕೆ ಕಳುಹಿಸಿ ಬಹಳಷ್ಟು ಮಹಿತಿಗಳನ್ನು ಪಡೆದಿವೆ, ಇತ್ತೀಚೆಗೆ ಭಾರತವು ಸಹ ‘ಮಾಮ್’ ಎಂಬ ಉಪಗ್ರಹವನ್ನು ಮಂಗಳ ಗ್ರಹಕ್ಕೆ ಕಳುಹಿಸುವ ಮೂಲಕ ಮಂಗಳ ಗ್ರಹದ ಅನ್ವೇಷಣೆ ಮಾಡುತ್ತಿದೆ. ಇದರ ಮುಖ್ಯ ಉದ್ದೇಶ-‚ ಮಂಗಳ ಗ್ರಹದಲ್ಲಿ ಜೀವಿಗಳು ವಾಸಿಸುತ್ತಿರುವುದಕ್ಕೆ ಕುರುಹಾಗಿ ಮಿಥೇನ್ ಅನಿಲದ ಇರುವಿಕೆಯನ್ನು ಪತ್ತೆ ಹಚ್ಚುವುದು ಮತ್ತು ಅಲ್ಲಿನ ವಾತಾವರಣವನ್ನು ಅಧ್ಯಯನ ಮಾಡುವುದಾಗಿದೆ.

ಉಪಸಂಹಾರ :


ನಾವು ನಮ್ಮಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಹಾಯದಿಂದ ಇನ್ನು ಹೆಚ್ಚಿನ ಉಪಗ್ರಹಗಳನ್ನು ಮಂಗಳ ಗ್ರಹದೆಡೆಗೆ ಕಳುಹಿಸುವ ಮೂಲಕ ಅದರ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆಹಾಕಿದಾಗ, ಅಲ್ಲಿ ಮನುಷ್ಯ ಬದುಕಲು ಬೇಕಾದ ವಾತಾವರಣ ಇರುವುದಾದರೆ ಮುಂದೊಂದು ದಿನ ಮಂಗಳನ ಅಂಗಳದಲ್ಲಿ ಕಾಲಿಡುವ ಸಮಯ ದೂರವಿಲ್ಲ ಎಂದೆನ್ನಬಹದು.