ಸಂವಿಧಾನ ರಚನೆ

 

ಸಂವಿಧಾನ ರಚನಾ ಸಭೆಯ ರಚನೆ


* ಎಂ.ಎನ್. ರಾಯ್‍ರವರು 1934 ರಲ್ಲಿ ಪ್ರಥಮ ಬಾರಿಗೆ ಭಾರತಕ್ಕೆ ಸಂವಿಧಾನ ರಚನಾ ಸಭೆಯ ಅಗತ್ಯವನ್ನು ಪ್ರಸ್ತಾಪಿಸಿದರು.
* ನಂತರ ಭಾರತದ ರಾಷ್ಟ್ರೀಯ ಕಾಂಗ್ರೇಸ್ 1935 ರಲ್ಲಿ ಸಂವಿಧಾನ ರಚನಾ ಸಮಿತಿಯ ಬಗ್ಗೆ ಅಧಿಕೃತ ಬೇಡಿಕೆಯನ್ನಿಟ್ಟಿತು.
* 1938 ರಲ್ಲಿ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿಯ ಆಧಾರದ ಮೇಲೆ ಚುನಾಯಿಸಲ್ಪಟ್ಟ ಸಂವಿಧಾನ ರಚನಾ ಸಭೆಯಿಂದ ಭಾರತದ ಸಂವಿಧಾನ ರಚನೆಯಾಗಬೇಕೆಂದು ಜವಹರಲಾಲ್ ನೆಹರುರವರು ಕಾಂಗ್ರೇಸ್ ಪರವಾಗಿ ಘೋಷಿಸಿದರು.
* ಸಂವಿಧಾನ ರಚನಾ ಸಭೆಯ ಬೇಡಿಕೆಯನ್ನು 1940ರ ‘ಆಗಸ್ಟ್ ಕೊಡುಗೆ’ಯಲ್ಲಿ ಬ್ರಿಟಿಷ್ ಸರ್ಕಾರ ಒಪ್ಪಿಕೊಂಡಿತು.
* 1942ರಲ್ಲಿ ಬ್ರಿಟಿಷ್ ಸಚಿವ ಸಂಪುಟದ ಸದಸ್ಯರಾದ ಸರ್ ಸ್ವಾಪರ್ಡ್ ಕ್ರಿಪ್ಸ್ ರವರು ಸಂವಿಧಾನ ರಚನಾ ಸಭೆಯ ಸ್ಥಾಪನೆಗೆ ಸಂಬಂಧೀಸಿದಂತೆ ಕೆಲವು ಪ್ರಸ್ತಾವನೆಗಳನ್ನು ಭಾರತೀಯ ನಾಯಕರ ಮುಂದಿಟ್ಟಿತು. ಇವುಗಳು ‘ಕ್ರಿಪ್ಸ್ ಪ್ರಸ್ತಾವನೆಗಳು’ ಎಂದೇ ಜನಪ್ರಿಯವಾಗಿವೆ.
* ಕಾಂಗ್ರೇಸ್ ಮತ್ತು ಮುಸ್ಲಿಂ ಲೀಗ್‍ಗಳೆರಡೂ ಕ್ರಿಪ್ಸ್ ಪ್ರಸ್ತಾವನೆಯನ್ನು ತಿರಸ್ಕರಿಸಿದವು.
* ಕ್ಯಾಬಿನೆಟ್ ನಿಯೋಗದ ಶಿಫಾರಸ್ಸಿನ ಮೇರೆಗೆ 1946 ರಲ್ಲಿ ಸಂವಿಧಾನ ರಚನಾ ಸಭೆಯ ರಚನೆಯ ಜೊತೆಗೆ ಜುಲೈ ತಿಂಗಳಲ್ಲಿ ಚುನಾವಣೆಗಳನ್ನು ನಡೆಸಲಾಯಿತು.
* ಕ್ಯಾಬಿನೆಟ್ ನಿಯೋಗ ಪರೋಕ್ಷ ಚುನಾವಣೆಗೆ ಶಿಫಾರಸ್ಸು ಮಾಡಿತು.
* ಸಂವಿಧಾನ ರಚನಾ ಸಭೆಯ ಕೆಲವು ಸದಸ್ಯರನ್ನು ಬ್ರಿಟಿಷ್ ಪ್ರಾಂತ್ಯದಿಂದ ಚುನಾಯಿಸಲಾಯಿತು. (ಮದ್ರಾಸ, ಮುಂಬೈ, ಬಿಹಾರ, ಅಸ್ಸಾಂ, ಒರಿಸ್ಸಾ,ಪ. ಬಂಗಾಳ, ದೆಹಲಿ, ಕೊಡಗು ಮೊದಲಾದವುಗಳು)
* ಇನ್ನು ಕೆಲವು ಸದಸ್ಯರು ದೇಶಿಯ ಸಂಸ್ಥಾನಗಳಿಂದ ನಾಮಕರಣಗೊಂಡರು.
* ಸಂವಿಧಾನ ರಚನಾ ಸಭೆಯು ಒಟ್ಟು 389 ಸದಸ್ಯರುಗಳನ್ನು ಒಳಗೊಂಡಿತ್ತು.
* ಇವರಲ್ಲಿ 296 ಮಂದಿ ಸದಸ್ಯರು ಬ್ರಿಟಿಷ್ ಭಾರತದಿಂದ ಚುನಾಯಿತರಾಗಿದ್ದರು.
* 93 ಮಂದಿ ಸದಸ್ಯರನ್ನು ದೇಶಿಯ ಸಂಸ್ಥಾನಗಳಿಂದ ನಾಮಕರಣ ಮಾಡಲಾಯಿತು. (ಬರೋಡ, ಭೂಪಾಲ್, ಕೊಚ್ಚಿನ್, ಆಳ್ವಾರ್, ಮೈಸೂರು,ಕೊಲ್ಲಾಪುರ, ಕೋಟಾ, ಇಂಡೋರ್ ಮೊದಲಾದವುಗಳು).
* 1946 ರ ಚುನಾವಣೆಗಳಲ್ಲಿ ಕಾಂಗ್ರೆಸ್ 208 ಸ್ಥಾನಗಳನ್ನು ಮುಸ್ಲಿಂ ಲೀಗ್ -73 ಸ್ಥಾನಗಳನ್ನು ಪಡೆದುಕೊಂಡಿದ್ದವು.
* ದೇಶ ವಿಭಜನೆಯ ಬಳಿಕ ಪ್ರತಿನಿಧಿಗಳ ಸಂಖ್ಯೆ- 299 ಕ್ಕೆ ಇಳಿಯಿತು. ಮೈಸೂರು ಸಂಸ್ಥಾನದಿಂದ 7 ಜನ ಸದಸ್ಯರು ನಾಮಕರಣಗೊಂಡಿದ್ದರು. ಹೀಗೆ ಸಂವಿಧಾನ ರಚನಾ ಸಭೆಯು ಪರೋಕ್ಷವಾಗಿ ಚುನಾಯಿಸಲ್ಪಟ್ಟ ಹಾಗೂ ನಾಮಕರಣಗೊಂಡ ಸದಸ್ಯರನ್ನು ಒಳಗೊಂಡಿತ್ತು.
* ಸಂವಿಧಾನ ರಚನಾ ಸಭೆಯ ಪ್ರಥಮ ಅಧಿವೇಶನ 9-12-1946 ರಂದು ನಡೆಯಿತು.
* ಜೆ.ಬಿ. ಕೃಪಲಾನಿಯವರ ಕೋರಿಕೆಯ ಮೇರೆಗೆ ಡಾ. ಸಚ್ಚದಾನಂದ ಸಿನ್ಹ ಸಂವಿಧಾನ ರಚನಾ ಸಭೆಯ ತಾತ್ಕಾಲಿಕ ಅಧ್ಯಕ್ಷರಾಗಿದ್ದರು.
* ಡಾ. ರಾಜೇಂದ್ರ ಪ್ರಸಾದರವರು ಸಂವಿಧಾನ ರಚನಾ ಸಭೆಯ ಖಾಯಂ ಅಧ್ಯಕ್ಷರಾಗಿ 11.12.1946 ರಂದು ಆಯ್ಕೆಯಾದರು.
* ಉಪಾಧ್ಯಕ್ಷರನ್ನಾಗಿ ಹೆಚ್. ಸಿ. ಮುಖರ್ಜಿಯವರನ್ನು ಆಯ್ಕೆ ಮಾಡಲಾಯಿತು.
* ಶ್ರೀ ಬಿ.ಎನ್. ರಾವ್‍ರವನ್ನು ಸಂವಿಧಾನಿಕ ಸಲಹೆಗಾರರನ್ನಾಗಿ ನೇಮಿಸಲಾಯಿತು.
* ಪಂಡಿತ್ ಜವಹರಲಾಲ್ ನೆಹರೂರವರು ತಮ್ಮ ಧ್ಯೇಯಗಳ ನಿರ್ಣಯವನ್ನು 13-12-1946 ರಂದು ಮಂಡಿಸಿದರು.
* ನೆಹರೂರವರ ‘ಧ್ಯೇಯಗಳ ನಿರ್ಣಯವನ್ನು 20.01.1947 ರಂದು ಅಂಗೀಕರಿಸಲಾಯಿತು. ಈ ನಿರ್ಣಯವು ಭಾರತವನ್ನು ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯ ಎಂಬುದಾಗಿ ಘೋಷಿಸಿದೆ.
* ಸಂವಿಧಾನ ರಚನಾ ಸಭೆಯು ಸಂಬಂಧಪಟ್ಟ ವಿಷಯಗಳ ಪರಿಶೀಲನೆಗೆ 22 ಸಮಿತಿಗಳನ್ನು ನೇಮಿಸಿತು .
* ಡಾ.ಬಿ.ಆರ್.ಅಂಬೇಡ್ಕರರವರನ್ನು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
* ಡಾ. ಬಿ.ಆರ್. ಅಂಬೇಡ್ಕರರವನ್ನು “ಸಂವಿಧಾನದ ಶಿಲ್ಪಿ”, ಆಧುನಿಕ ಮನು: ಎಂದು ಕರೆಯಲಾಗುತ್ತದೆ.
* ಕರಡು ಸಮಿತಿಯು ಒಬ್ಬ ಅಧ್ಯಕ್ಷ ಮತ್ತು 6 ಜನ ಸದಸ್ಯರನ್ನು ಒಳಗೊಂಡಿತು. ಅವರುಗಳೆಂದರೆ ಡಾ. ಬಿ.ಆರ್. ಅಂಬೇಡ್ಕರ ಎನ್. ಗೋಪಾಲಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ, ಅಯ್ಯರ್ ಡಾ.ಕೆ.ಎಂ. ಮುನ್ಷಿ, ಸೈಯದ್ ಮಹಮದ್ ಸಾದುಲ್ಲ. ಎನ್. ಮಾಧವರಾವ್, ಟಿ.ಟಿ. ಕೃಷ್ಣಮಾಚಾರಿ ಇವರುಗಳು ಕರಡು ಸಮಿತಿಯಲ್ಲಿದ್ದ ಸದಸ್ಯರು.
* ಸಂವಿಧಾನ ರಚನಾ ಸಭೆಯಲ್ಲಿ 15 ಮಂದಿ ಮಹಿಳಾ ಸದಸ್ಯರಿದ್ದರು. ಅವರಲ್ಲಿ ಪ್ರಮುಖರರು ಸುಚೇತಾ ಕೃಪಲಾನಿ, ವಿಜಯಲಕ್ಷ್ಮೀ, ಪಂಡಿತ್, ಸರೋಜಿನಿ ನಾಯ್ಡು, ಶ್ರೀಮತಿ ಹಂಸ ಮೆನನ್, ರಾಜಕುಮಾರಿ ಅಮೃತ್‍ಕೌರ್ ಮೊದಲಾದವರು.
* ಸಂವಿಧಾನ ರಚನಾ ಸಭೆಯು ಒಟ್ಟು 11 ಭಾರಿ ಸಭೆ ಸೇರಿತು.
* ಭಾರತ ಸಂವಿಧಾನದ ರಚನೆಗೆ ತಗುಲಿದ ವೆಚ್ಚ 64 ಲಕ್ಷ ರೂ.ಗಳು.
* ಸಂವಿಧಾನ ರಚಿಸಲು ತೆಗೆದುಕೊಂಡ ಕಾಲಾವಧಿ 2 ವರ್ಷ, 11 ತಿಂಗಳು, 18 ದಿನಗಳು.
* ಸಂವಿಧಾನ ರಚನಾ ಸಭೆಯ ಸದಸ್ಯರು ಮಂಡಿಸಿದ 7635 ತಿದ್ದುಪಡಿಗಳಲ್ಲಿ 2473 ತಿದ್ದು ಪಡಿಗಳು ಚರ್ಚೆಗೆ ಒಳಗಾದವು.
* ಭಾರತ ಸಂವಿಧಾನವನ್ನು ಅಂಗೀಕರಿಸಿದ ದಿನ 26-11-1949..
* ಭಾರತ ಸಂವಿಧಾನ ಜಾರಿಗೆ ಬಂದದ್ದು 26.1.1950
* ಜನವರಿ 26ನ್ನು ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ.
* ಭಾರತದ ಮೂಲ ಸಂವಿಧಾನವು 395 ವಿಧಿಗಳು, 8 ಅನುಸೂಚಿಗಳು, 22 ಭಾಗಗಳನ್ನು 280 ಪುಟಗಳನ್ನು ಒಳಗೊಂಡಿದೆ.
* ಸಂವಿಧಾನ ರಚನಾ ಸಭೆ ಭಾರತದ ತಾತ್ಕಾಲಿಕ ಸಂಸತ್ತಾಗಿ ನವೆಂಬರ 17, 1947 ರಿಂದ ಎಪ್ರೀಲ್ 17, 1952 ರ ವರೆಗೆ ಕೆಲಸ ನಿರ್ವಹಿಸಿತು.