Loading [MathJax]/extensions/MathML/mml3.js

ಭಾರತಕ್ಕೆ ಪಿಡುಗಾಗಿ ಪರಿಣಮಿಸಿರುವ ‘ಏಡ್ಸ್ ’

 

ಮರಣಶಯ್ಯಗೆ ಕೊಂಡೊಯ್ಯುವ ಭಯಂಕರ ರೋಗ ‘ಏಡ್ಸ್’ (Acquired immuno deficiency syndrome) ಇಂದು ಒಂದು ಜಾಗತಿಕ ಪಿಡುಗಾಗಿ ಪರಿಣಮಿಸಿದೆ. ಈ ರೋಗಕ್ಕೆ ಚಿಕಿತ್ಸೆಯೇ ಇಲ್ಲವೆನ್ನುವುದು ಏಡ್ಸ್ರೋಗದ ಭೀಕರತೆಯನ್ನು ತೋರಿಸುತ್ತದೆ. ಭಾರತವು ಸೇರಿದಂತೆ ಏಡ್ಸ್ ರೋಗವು ವಿಶ್ವವ್ಯಾಪ್ತಿ ತನ್ನ ಕರಿನೆರಳನ್ನುಚಾಚಿದೆ. ಏಡ್ಸ್ ಜಾಗತಿಕ ಮಟ್ಟದಲ್ಲಿ ಭೀಕರ ರೋಗವಾಗಿ ಪರಿಣಮಿಸಿದ್ದು, ಭಾರತದಲ್ಲಿ ಏಡ್ಸ್ ರೋಗಿಗಳ ಸಂಖ್ಯೆಯುತೀವ್ರವಾಗಿ ಹೆಚ್ಚುತ್ತಿದೆ. ಏಡ್ಸ್ ರೋಗವು ಮೊದಲಿಗೆ ಆಫ್ರಿಕಾದಲ್ಲಿ ಮಂಗಗಳಲ್ಲಿ ಕಾಣಿಸಿಕೊಂಡಿತು. ಭಾರತದಲ್ಲಿ ಈರೋಗವು ಮೊದಲಿಗೆ 1986ರಲ್ಲಿ ಚೆನೈ ಮುಂಬೈನಲ್ಲಿ ಕಾಣಿಸಿಕೊಂಡಿತು. ಕರ್ನಾಟಕದಲ್ಲಿ ಇದು ಪ್ರಥಮ ಬಾರಿಗೆ1992ರಲ್ಲಿ ಬೆಂಗಳೂರಿನಲ್ಲಿ ಕಾಣಿಸಿಕೊಂಡಿತು. ಭಾರತದಲ್ಲಿ ಏಡ್ಸ್ ರೋಗವು ಮೊದಲಿಗೆ ಲೈಂಗಿಕ ಕಾರ್ಯಕರ್ತೆಯರು ಹಾಗೂ ಮಾದಕ ವ್ಯಸನಿಗಳಲ್ಲಿ ಕಾಣಿಸಿಕೊಂಡಿತು. ಚೆನೈ, ಮುಂಬೈ ನಗರಗಳು ಹಾಗೂ ಮಣಿಪುರ ರಾಜ್ಯದಲ್ಲಿ ಮೊದಲಿಗೆ ಏಡ್ಸ್ ರೋಗವು ಕಾಣಿಸಿಕೊಂಡ ನಂತರ ಇದು ಭಾರತದಾದ್ಯಂತ ಶೀಘ್ರವಾಗಿ ಹರಡಿತು. ಇಂದು ಭಾರತದಬಹುತೇಕ ರಾಜ್ಯಗಳಲ್ಲಿ ಏಡ್ಸ್ ರೋಗಿಗಳಾಗಿದ್ದಾರೆ.
ಭಾರತ ಸರ್ಕಾರವು ದೇಶದಲ್ಲಿ ಏಡ್ಸ್ ರೋಗವನ್ನು ನಿಯಂತ್ರಿಸಲು ಹಾಗೂ ಜನರಲ್ಲಿ ಈ ರೋಗದ ಬಗ್ಗೆಜಾಗೃತಿಯನ್ನು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೂ ಕೂಡ ಏಡ್ಸ್ ರೋಗದಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ವಿಶ್ವ ಬ್ಯಾಂಕ್ & ವಿಶ್ವ ಆರೋಗ್ಯ ಸಂಘಟನೆ (WHO) ಯು ಜೊತೆಗೂಡಿ1987ರಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣಾ ಕಾರ್ಯಕ್ರಮ (NACP) ವನ್ನು ಆರಂಭಿಸಿದವು. ಈ ಕಾರ್ಯಕ್ರಮದ ಅಡಿಯಲ್ಲಿ ಏಡ್ಸ್ಗೆ ಸಂಬಂದಿಸಿದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಕೇಂದ್ರ ಆರೋಗ್ಯ &ಕುಟುಂಬ ಕಲ್ಯಾಣ ಸಚಿವಾಲಯವು ರಾಷ್ಟ್ರೀಯ ಏಡ್ಸ್ ನಿಯಂತ್ರಣಾ ಸಂಘಟನೆಯನ್ನು ಸ್ಥಾಪಿಸಿತು. 1995ರಲ್ಲಿ ಏಡ್ಸ್ನಿಯಂತ್ರಣಾ ಸಂಘಟನೆಯನ್ನು ಸ್ಥಾಪಿಸಲಾಯಿತು. ಭಾರತದಲ್ಲಿ ಏಡ್ಸ್ ಸೋಂಕು ಏಡ್ಸ್ ಸೋಂಕು ಪೀಡಿತರಸಂಖ್ಯೆಯನ್ನು ಕಡಿಮೆಗೊಳಿಸುವುದರೊಂದಿಗೆ ಏಡ್ಸ್ ರೋಗ & ಇದರ ಸೋಂಕು ಹರಡುವಿಕೆಯನ್ನು ತಡೆಗಟ್ಟುವಉದ್ದೇಶದಿಂದ ಏಡ್ಸ್ ನಿಯಂತ್ರಣಾ ಸಂಘಟನೆಯನ್ನು ಸ್ಥಾಪಿಸಲಾಯಿತು.
1992ರಲ್ಲಿ ವಿಶ್ವ ಬ್ಯಾಂಕಿನ ಸಹಯೋಗದೊಂದಿಗೆ 5 ವರ್ಷಗಳ ಅವಧಿಗಾಗಿ (1992-1997) ಒಂದನೆಯ ಹಂತದ ಏಡ್ಸ್ ನಿಯಂತ್ರಣ ಕಾರ್ಯಕ್ರಮ (NACP) ವನ್ನು ಆರಂಭಿಸಲಾಯಿತು. ಆದರೆ ಇದನ್ನು ಮಾರ್ಚ್ 1999ರವರೆಗೆ ವಿಸ್ತರಿಸಲಾಯಿತು. ಎರಡನೆಯ ಹಂತದ ಏಡ್ಸ್ ನಿಯಂತ್ರಣ ಕಾರ್ಯಕ್ರಮವನ್ನು 1999 ರಿಂದ 2004 ರವರೆಗೆ ಜಾರಿಗೊಳಿಸಲಾಯಿತು. ಎರಡನೆಯ ಹಂತದ ಏಡ್ಸ್ ನಿಯಂತ್ರಣ ಕಾರ್ಯಕ್ರಮವು ಮುಖ್ಯವಾಗಿ ಎರಡು ಉದ್ದೇಶಗಳ್ಳನ್ನು ಹೊಂದಿತ್ತು, (1) ಎಚ್.ಐ.ವಿ ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವುದು & (2) ಎಚ್.ಐ.ವಿ/ ಏಡ್ಸ್ ಅನ್ನುನಿಯಂತ್ರಿಸುವ ಕೇಂದ್ರ & ರಾಜ್ಯ ಸಕರಾರಗಳ ಸಾಮಥ್ರ್ಯವನ್ನು ಹೆಚ್ಚಿಸುವುದು.
ಸುಮಾರು 5 ರಿಂದ 10 ವರ್ಷಗಳ ಕಾಲ ಎಚ್ಐವಿ ಸೋಂಕಿನಿಂಧ ಕಾದಾಡಿದ ನಂತರ, ಎಚ್ಐವಿ ವೈರಾಣು ರೋಗಿಯ ಸಮಗ್ರ ಶರೀರವನ್ನು ದುರ್ಬಲಗೊಳಿಸುತ್ತದೆ. ಇದರಿಂದ ರೋಗಿಯಲ್ಲಿ ಕ್ಷಯ, ನ್ಯುಮೋನಿಯಾ, ಬೇದಿ,ಜ್ವರ & ಚರ್ಮದ ಸೋಂಕುಗಳಂತಹ ಅನೇಕ ರೋಗಗಳು ಕಾಣಿಸಿಕೊಳ್ಳೂತ್ತದೆ. ಈ ಪರಿಸ್ಥಿತಿಯನನು ‘ಏಡ್ಸ್ ’ ಎಂದು ಕರೆಯುತ್ತಾರೆ. 50 ರಿಂದ 100 ವರ್ಷಗಳ ಹಿಂದೆ ಆಫ್ರಿಕಾದಲ್ಲಿ ಎಚ್ಐವಿ ಮೊದಲ ಬಾರಿಗೆ ಕಾಣಿಸಿಕೊಂಡಿತು.
ಏಡ್ಸ್ – 11 ನೆಯ ಯೋಜನೆಯಲ್ಲಿ ಲೈಂಗಿಕ ಕಾರ್ಯಕರ್ತರು, ಟ್ರಕ್ ಚಾಲಕರು, ವಲಸೆ ಕಾರ್ಮಿಕರು,ಬೀಸಿಬದಿ ಮಕ್ಕಳು ಮಾದಕ ವ್ಯಸನಿಗಳು, ಸಲಿಂಗ ಕಾಮಿಗಳಂತಹ ಏಡ್ಸ್ ರೋಗವು ಹೆಚ್ಚಾಗಿ ಕಂಡುಬರುವ ಜನರನ್ನುಗುರಿಯಾಗಿಸಿಕೊಳಲಾಗಿತ್ತು. ಏಡ್ಸ್ರೋಗ ನಿಯಂತ್ರಣ ಕಾರ್ಯಕ್ರಮಗಳಲ್ಲಿ ವರ್ತನೆ ಬದಲಾವಣೆಯ ಸಂಪರ್ಕ,ಸಂವಾದ ಆರೋಗ್ಯ ರಕ್ಷಣೆ, ಲೈಂಗಿಕವಾಗಿ ಹರಡುವ ಸೋಂಕುಗಳ ಚಿಕಿತ್ಸೆ & ವರ್ತನೆಯನ್ನು ಬದಲಾಯಿಸುವ ಪರಿಸರದ ನಿರ್ಮಾನದಂತಹ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು.
ಹದಿನೈದಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳಲ್ಲಿ ತಾಯಿಯಿಂದ ಮಗುವಿಗೆ ಬರುವುದು ಎಚ್ಐವಿ ಸೋಂಕುಹರಡುವಿಕೆಯ ಪ್ರಮುಖ ಮೂಲವಾಗಿದೆ. ತಾಯಿಯ ಗರ್ಭೀಣಿಯಾಗಿರುವಾಗ, ಮಗುವಿಗೆ ಜನ್ಮ ನೀಡುವಾಗ ಅಥವಾಮಗುವಿಗೆ ಎದೆ ಹಾಲುಣಿಸುವಾಗ ವೈರಾಣು ತಾಯಿಯಿಂದ ಮಗುವಿಗೆ ಹರಡುತ್ತದೆ. ಒಂದು ವೇಳೆ ನಿಯಂತ್ರಣಾಕ್ರಮಗಳನ್ನು ಕೈಗೊಳ್ಳದಿದ್ದರೆ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೂ ತಾಯಿಯಿಂದ ಮಗುವಿಗೆ ಸೋಂಕು ಹರಡುವ ಪ್ರಮಾಣವುಶೇಕಡಾ 15-25ರಷ್ಟೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ 24-45ರಷ್ಟೂ ವ್ಯತ್ಯಾಸವಾಗುತ್ತದೆ. ತಾಯಿ ತನ್ನಮಗುವಿಗೆ ಎದೆ ಹಾಲುಣಿಸುವ ವಿಧಾನಗಳು ಈ ಪ್ರಮಾಣದ ವ್ಯತ್ಯಾಸಕ್ಕೆ ಬಹುಮುಖ್ಯ ಕಾರಣವಾಗಿದೆ. ಕೈಗಾರೀಕರಣರಾಷ್ಟ್ರಗಳಿಗಿಂತ ಅಭಿವೃದ್ದಿ ಹೊಂದುತ್ತಿರುವ ದೇಶಗಳಲ್ಲಿ ಮಗುವಿಗೆ ಎದೆ ಹಾಲುಣಿಸುವುದು ಸಾಮಾನ್ಯವಾಗಿದೆ.ತಾಯಿಯಿಂದ ಮಗುವಿಗೆ ಸೋಂಕು ಹರಡುವುದನ್ನು AZT ((z)dovudie or nevirapine) ನಂತಹ ಔಷಧಿಗಳಿಂದ ತಗ್ಗಿಸಬಹುದಾಗಿದೆ.
ಶಾಲೆಯಲ್ಲಿ ಏಡ್ಸ್ ಬಗ್ಗೆ ಶಿಕ್ಷಣವನ್ನು ನೀಡುವುದು ರಾಷ್ಟ್ರೀಯ ಏಡ್ಸ್ ನಿಯಂತ್ರಣಾ ಕಾರ್ಯಕ್ರಮದ ಪ್ರಮುಖಚಟುವಟಿಕೆಗಳ ಪೈಕಿ ಒಂದಾಗಿದೆ. ಯುವ ವಿದ್ಯಾರ್ಥಿಗಳಲ್ಲಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಯುವ ಜನತೆಗೆಒತ್ತಡವನ್ನು ನಿಭಾಯಿಸುವ ಕೌಶಲ್ಯಗಳನ್ನು ಕಲಿಸುವುದಕ್ಕೆ ಹಾಗೂ ಯುವ ಜನತೆಯು ಸುರಕ್ಷಿತ &ಜವಾಬ್ದಾರಿಯುತವಾದ ಜೀವನ ಶೈಲಿಯನ್ನು ಅನುಸರಿಸುವುದಕ್ಕೆ ಏಡ್ಸ್ ಶಿಕ್ಷಣದಲ್ಲಿ ಆದ್ಯತೆ ನೀಡಲಾಗುತ್ತದೆ. ಈ ಕಾರ್ಯಕ್ರಮ ಕೌಟುಂಬಿಕ ಮೌಲ್ಯಗಳು ಹಾಗೂ ವಿರುದ್ಧ ಲಿಂಗದ ವರ ಬಗ್ಗೆ ಗೌರವವನ್ನು ಹೆಚ್ಚಿಸುವಂತಹದ್ದಾಗಿದೆ.
ಸಾಮಾನ್ಯ ಜನರು, ವಿಶೇಷವಾಗಿ ಗ್ರಾಮೀಣಿಗರಲ್ಲಿ ಏಡ್ಸ್ ರೋಗದ ಬದಲು ಜಾಗೃತಿಯನ್ನು ಹೆಚ್ಚಿಸಲು ಸರ್ಕಾರವು ಟಿ.ವಿ ಮಾಧ್ಯಮ ವನ್ನು ಬಳಸಲು ನಿರ್ಧರಿಸಿದೆ. ಎಚ್ಐವಿ/ ಏಡ್ಸ್ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ನೀಡಲು & ಚರ್ಚೆ ನಡೆಸಲು ರಾಷ್ಟ್ರೀಯ ಏಡ್ಸ್ ದೂರವಾಣಿ ಹೆಲ್ಪ್ ಲೈನ್ ಅನ್ನು ಆರಂಭಿಸಲಾಗಿದೆ.
ರಾಜೀವಗಾಂಧಿ ಫೌಂಡೇಶನ್ ಪರಿಕಲ್ಪತ ‘ರೆಡ್ ರಿಬ್ಬನ್ ಎಕ್ಸ್ ಪ್ರೆಸ್ ಎಂಬ ಹೆಸರಿನ ರೈಲು ‘ವಿಶ್ವ ಏಡ್ಸ್ದಿನ ’ 2007ರ ಡಿಸೆಂಬರ್ 1 ರಂದು ದೆಹಲಿಯಿಂದ ಹೊರಟಿವೆ.
ಎಚ್ಐವಿ & ಏಡ್ಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ರೈಲ್ವೇ ಇಲಾಖೆ, ನೆಹರು ಯುವಕ ಕೇಂದ್ರಸಂಘಟನೆ (ಯುವ ಜನ & ಕ್ರೀಡಾ ಇಲಾಖೆ) & ಯೂನಿಸೆಫ್ ಸಹಕಾರದೊಂದಿಗೆ ‘ನ್ಯಾಕೋ’ (ನ್ಯಾಷನಲ್ ಏಡ್ಸ್ಕಂಟ್ರೋಲ್ ಆರ್ಗನೈಜೇಷನ್) ಈ ಅಭಿಯಾನವನ್ನು ಆರಂಭಿಸಿದೆ.
ಎಲ್ಲಾ ವರ್ಗದ ಜನರಲ್ಲಿ ಎಚ್.ಐ.ವಿ / ಏಡ್ಸ್ ಬಗ್ಗೆ ತಿಳುವಳಿಕೆ ಮೂಡಿಸುವ ಪ್ರಯತ್ನ ಇದಾಗಿದ್ದು ಮುಖ್ಯವಾಗಿ ಗ್ರಾಮೀಣ ಪ್ರದೇಶದ ಜನರು, ಯುವಜನ ಸಂಘಟನೆಗಳು , ಸ್ವಸಹಾಯ ಸಂಘದ ಸದಸ್ಯರು,ಹದಿಹರೆಯದವರು, ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿಗಳು ಎಲ್ಲಾ ಪಂಚಾಯತ್ರಾಜ್ ಚುನಾಯಿತ ಉದ್ದೇಶಿತ ಜನ ಸಮುದಾಯನಾಗಿದ್ದಾರೆ.