ತದ್ರೂಪಿ ಸೃಷ್ಠಿ ಅಥವಾ ಪ್ರಾಣಿ ಜೈವಿಕ ತಂತ್ರಜ್ಞಾನ (Cloning)
 
• ಇದು ಜೈವಿಕ ತಂತ್ರಜ್ಞಾನದ ಮತ್ತೊಂದು ಪ್ರಮುಖ ಕಾರ್ಯತಂತ್ರ .
• ಅನುವಂಶೀಯವಾಗಿ ಒಂದೇ ತೆರೆನಾಗಿರುವ ಅಣುಗಳನ್ನು ಅಥವಾ ಜೀವ ಕೋಶಗಳನ್ನು ಅಥವಾ ಜೀವಿಯೊಂದರ ದೇಹದೊಳಗೆ ಅಥವಾ ದೇಹದ ಹೊರಗೆ ಉತ್ಪತ್ತಿ ಮಾಡುವ ಪ್ರಕ್ರಿಯೆಗೆ ತದ್ರೂಪ ಸೃಷ್ಟಿ ಅಥವಾ ಕ್ಲೋನಿಂಗ್ ಎಂದು ಹೆಸರು.
• ಸ್ಕಾಟ್ಲೆಂಡಿನ ವಿಜ್ಞಾನಿಯಾದ ಡಾ|| ಇಯಾನ್ ವಿಲ್ಮಟ್ ಇವರು 1997 ರ ಫೆಬ್ರುವರಿ ತಿಂಗಳಿನಲ್ಲಿ ಮೊದಲ ತದ್ರೂಪಿ ಪ್ರಾಣಿಯಾದ 'ಡಾಲಿ' ಎಂಬ ಕುರಿಯನ್ನು ಸೃಷ್ಟಿಸಿದರು.
• ಕ್ಲೋನಿಂಗ್ ಅಂದರೆ ದೈಹಿಕ ಹಾಗೂ ಅನುವಂಶಿಕ ಒಂದು ಬಗೆಯ ತದ್ರೂಪಿಗಳನ್ನು ಲೈಂಗಿಕ ಸಂಪರ್ಕವಿಲ್ಲದೆ ಸೃಷ್ಠಿಸುವುದು.
• ತದ್ರೂಪಿಗಳು ಕೇವಲ ಒಬ್ಬನೆ ಪಾಲಕರ ವಂಶವಾಹಿಗಳನ್ನು ಪಡೆಯುತ್ತದೆ.
• 2009 ರಲ್ಲಿ ಭಾರತದಲ್ಲಿ ಸಮ್ರುಪಾ ಎಂಬ ನಿರೆಮ್ಮೆಯನ್ನು ಸೃಷ್ಠಿಸಲಾಯಿತು.
ತದ್ರೂಪಿ ಸೃಷ್ಟಿಯ ಅನುಕೂಲಗಳು
• ಮೇಕೆ,ಹಂದಿ,ಇಲಿ,ಮಂಗಾ ಮುಂತಾದ ಪ್ರಾಣಿಗಳಿಗೆ ಮಾನವನ ಅಗತ್ಯ ಜೀನಗಳನ್ನು ಸೇರಿಸಿ ಉಪಯುಕ್ತ ಪಡೆಯುವ ಉತ್ಪನ್ನಗಳನ್ನು ಪಡೆಯುವ ಪ್ರಯತ್ನಗಳಿಗೆ ಈ ತಂತ್ರಜ್ಞಾನ ವರದಾನವಾಗಿದೆ.
• ಹೆಚ್ಚಿನ ಪೋಷ್ಟಿಕಾಂಶಗಳನ್ನು ಹೊಂದಿರುವ ರೋಜಿ ಎಂಬ ಹಸುವನ್ನು ಸೃಷ್ಟಿಸಲಾಗಿದೆ.ಇದರಿಂದ ತಾಯಿಯ ಎದೆಹಾಲಿಗೆ ಸಮನಾದ ರೋಜಿ ಹಸುವಿನ ಹಾಲನ್ನು ಮಕ್ಕಳಿಗೆ ಕೊಡಬಹುದು.
• ಹಲವಾರು ಭಯಾನಕ ರೋಗಗಳನ್ನು ತಡೆಯಬಹುದು.
• ಅಳಿವಿನ ಅಂಚಿನಲ್ಲಿರುವ ಸಸ್ಯ ಪ್ರಾಣಿಗಳನ್ನು ಉಳಿಸಬಹುದು.
• ಊನಗೊಂಡ ಅಂಗಗಳನ್ನು ಪುನಃ ಬೆಳೆಸಿ ಜೋಡಿಸಬಹುದಾಗಿದೆ.
• ನಿರ್ಜಿವ ಜೀವಕೋಶಗಳಿಗೆ ಮರುಕೋಶ ಉದಾ : ಹೃದಯ.
ತದ್ರೂಪ ಸೃಷ್ಟಿಯ ಅನಾನುಕೂಲಗಳು
• ಇದು ಸಾಮಾಜಿಕವಾದ ಹಾಗೂ ರೀತಿ ನೀತಿಗಳಿಗೆ ವಿರುದ್ಧ್ಯವಾಗಿವೆ.
• ಇದು ಧರ್ಮಗಳಿಗೆ ವಿರುದ್ಧವಾಗಿದೆ.
• ಇದರಿಂದ ಮಾನವ ಕೌಟು0ಬಿಕ ಜೀವನದ ಮೇಲೆ ತುಂಬಾ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ.ಗಂಡಿನ ಅವಶ್ಯಕತೆಯಿಲ್ಲದೆ ಒಂದು ಜೀವಿಯ ಸೃಷ್ಟಿಯಾಗುವುದನ್ನು ನೆನೆಸಿಕೊಂಡರೆ, ಮುಂದೆ ಮಾನವನ ಸಾಮಾಜಿಕ ಸ್ಥಿತಿಗತಿಗಳಲ್ಲಿ ಉಂಟಾಗಬಹುದಾದ ಭೀಕರ ಪರಿಣಾಮಗಳ ಬಗ್ಗೆ ಭಯವುಂಟಾಗುತ್ತದೆ.