ಕೇಂದ್ರ ಕಾರ್ಯಾಂಗ- ರಾಷ್ಟ್ರಪತಿ

 

* ಭಾರತ ಸಂಸದೀಯ ಕಾರ್ಯಾಂಗ ವ್ಯವಸ್ಥೆಯನ್ನು ಒಳಗೊಂಡಿರುವುದರಿಂದ ರಾಷ್ಟ್ರಪತಿ ಕೇಂದ್ರ ಸರ್ಕಾರದ ಮುಖ್ಯಸ್ಥರಾಗಿರುತ್ತಾರೆ.
* ಕೇಂದ್ರ ಕಾರ್ಯಾಂಗಕ್ಕೆ ಸಂಬಂಧಿಸಿದಂತೆ ಸಂವಿಧಾನದ ಭಾಗ 5 ರಲ್ಲಿ 52 ರಿಂದ 78 ನೇ ವಿಧಿಗಳಲ್ಲಿ ಪ್ರಸ್ತಾಪಿಸಲಾಗಿದೆ.
* ಕೇಂದ್ರ ಕಾರ್ಯಾಂಗವು ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಯ ನೇತೃತ್ವದ ಮಂತ್ರಿಮಂಡಲ, ಅಟಾರ್ನಿ ಜನರಲ್ ರವನ್ನು ಒಳಗೊಂಡಿರುತ್ತದೆ.
* ಸಂವಿಧಾನದ 52ನೇ ವಿಧಿಯು ರಾಷ್ಟ್ರಪತಿಯವರ ಬಗ್ಗೆ ಪ್ರಸ್ತಾಪಿಸುತ್ತದೆ.
* ಸಂವಿಧಾನದ 53 ನೇ ವಿಧಿಯ ಪ್ರಕಾರ ಕೇಂದ್ರ ಕಾರ್ಯಾಂಗದ ಸಂಪೂರ್ಣ ಅಧಿಕಾರವು ರಾಷ್ಟ್ರಪತಿಗೆ ಸೇರಿರುತ್ತದೆ.
* ರಾಷ್ಟ್ರಪತಿಯವರು ನಾಮಮಾತ್ರ ಕಾರ್ಯಾಂಗದ ಮುಖ್ಯಸ್ಥರಾಗಿರುತ್ತಾರೆ.
* ಸಂವಿಧಾನದ 74(1)ನೇ ವಿಧಿಯ ಪ್ರಕಾರ ರಾಷ್ಟ್ರಪತಿಯವರು ಪ್ರಧಾನಮಂತ್ರಿಯನ್ನೊಳಗೊಂಡ ಮಂತ್ರಿಮಂಡಲದ ಸಲಹೆಯ ಮೇರೆಗೆ ತಮಗಿರುವ ಅಧಿಕಾರ ಚಲಾಯಿಸುತ್ತಾರೆ.
* ಡಾ. ಬಿ.ಆರ್.ಅಂಬೇಡ್ಕರ್‍ ವರು “ರಾಷ್ಟ್ರಾಧ್ಯಕ್ಷರು ರಾಷ್ಟ್ರದ ಪ್ರಮುಖರೇ ಹೊರತು ಕಾರ್ಯಾಂಗದ ಪ್ರಮುಖರಲ್ಲ. ಅವರು ರಾಷ್ಟ್ರವನ್ನು ಪ್ರತಿನಿಧಿಸುತ್ತಾರೆಯೇ ಹೊರತು ಆಡಳಿತ ನಡೆಸುವುದಿಲ್ಲ. ಮಂತ್ರಿಮಂಡಲದ ಸಲಹೆಯ ಮೇರೆಗೆ ಕಾರ್ಯನಿರ್ವಹಿಸಬೇಕು” ಎಂದಿದ್ದಾರೆ.
* ರಾಷ್ಟ್ರಪತಿ ರಾಷ್ಟ್ರದ ಪ್ರಥಮ ಪ್ರಜೆಯಾಗಿರುತ್ತಾರೆ.

ರಾಷ್ಟ್ರಪತಿಯಾಗಲು ಇರಬೇಕಾದ ಅರ್ಹತೆಗಳು


* ಭಾರತದ ಪ್ರಜೆಯಾಗಿರಬೇಕು.
* 35 ವರ್ಷ ವಯಸ್ಸಾಗಿರಬೇಕು
* ಲೋಕಸಭೆಗೆ ಆಯ್ಕೆಯಾಗಲು ಅಗತ್ಯವಿರುವ ಅರ್ಹತೆ ಹೊಂದಿರಬೇಕು.
* ಯಾವುದೇ ಲಾಭದಾಯಕ ಹುದ್ದೆಯಲ್ಲಿರಬಾರದು (ಕೇಂದ್ರ ಅಥವಾ ರಾಜ್ಯ ಸರ್ಕಾರದ)

ರಾಷ್ಟ್ರಪತಿ ಚುನಾವಣೆ (54, 55ನೇ ವಿಧಿ)


* ರಾಷ್ಟ್ರಪತಿಯನ್ನು ಸಂಸತ್ತಿನ ಉಭಯ ಸದನಗಳ ಲೋಕಸಭೆ, ರಾಜ್ಯಸಭೆಯ ಚುನಾಯಿತ ಸದಸ್ಯರು, ರಾಜ್ಯ ವಿಧಾನಸಭೆಯ ಚುನಾಯಿತ ಸದಸ್ಯರು ಹಾಗೂ ದೆಹಲಿ ಮತ್ತು ಪಾಂಡಿಚೇರಿ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳ ಚುನಾಯಿತ ಸದಸ್ಯರು ರಾಷ್ಟ್ರಪತಿಯನ್ನು ಚುನಾಯಿಸುತ್ತಾರೆ.
* ಸಂಸತ್ತಿನ ಉಭಯ ಸದನಗಳ ನಾಮಕರಣಗೊಂಡ ಸದಸ್ಯರು ರಾಜ್ಯ ವಿಧಾನ ಸಭೆಗಳ ನಾಮಕರಣಗೊಂಡ ಸದಸ್ಯರು ಹಾಗೂ ರಾಜ್ಯಗಳ ವಿಧಾನ ಪರಿಷತ್ತಿನ ಸದಸ್ಯರು, ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ.
* ರಾಷ್ಟ್ರಪತಿ ಚುನಾವಣೆಯಲ್ಲಿ ಥಾಮಸ್ ಹೇರ್ ಪ್ರತಿಪಾದಿಸಿರುವ ‘ಅನುಪಾತ ಪ್ರಾತಿನಿಧ್ಯ ಪದ್ಧತಿ’ ಗನುಗುಣವಾಗಿ ಏಕ ಪರಿವರ್ತಿತ ಮತದಾನ ನಡೆಸಲಾಗುವುದು. ಅಂದರೆ ಒಬ್ಬ ಮತದಾರ ಎಲ್ಲಾ ಅಭ್ಯರ್ಥಿಗಳಿಗೂ ಪ್ರಾಧ್ಯಾನತೆ ಮತ ನೀಡಬಹುದು (1,2,3,4,5,6) ಇತ್ಯಾದಿ ಪ್ರಾಧಾನ್ಯತೆ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
* ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದ ವಿವಾದಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುವ ಅಧಿಕಾರ ಹೊಂದಿದೆ(71ನೇ ವಿಧಿ).

ಅಧಿಕಾರಾವಧಿ (56ನೇ ವಿಧಿ)


* ರಾಷ್ಟ್ರಪತಿಯವರ ಅಧಿಕಾರಾವಧಿ ಸಂವಿಧಾನ ಬದ್ಧವಾಗಿ 5 ವರ್ಷಗಳು
* ಇವರು ತಮ್ಮ ಅಧಿಕಾರ ಮುಗಿದರು ನಮ್ಮ ಉತ್ತರಾಧಿಕಾರಿಯ ಆಯ್ಕೆಯಾಗುವವರೆಗೂ ಅಧಿಕಾರದಲ್ಲಿರಬಹುದು.
* ರಾಷ್ಟ್ರಪತಿ ಅನಿವಾರ್ಯ ಕಾರಣದಿಂದ ರಾಜೀನಾಮೆ ಕೊಡಲು ಇಚ್ಛಿಸಿದಲ್ಲಿ ತಮ್ಮ ರಾಜೀನಾಮೆಯನ್ನು ಉಪರಾಷ್ಟ್ರಪತಿಗೆ ಕೊಡಬೇಕಾಗುತ್ತದೆ.

ಪದಚ್ಯುತಿ (61 ನೇ ವಿಧಿ)


* ಮಹಾಭಿಯೋಗ ಅಥವಾ ದೋಷಾರೋಪದ ಮೂಲಕ ಅಧಿಕಾರಾವಧಿಗೆ ಮುಂಚೆಯೆ ರಾಷ್ಟ್ರಪತಿಯವರನ್ನು ಪದಚ್ಯುತಿಗೊಳಿಸಬಹುದು.
* 361 ನೇ ವಿಧಿಯ ಪ್ರಕಾರ ರಾಷ್ಟ್ರಪತಿ ಚಲಾಯಿಸಿದ ಅಧಿಕಾರಗಳನ್ನು ನ್ಯಾಯಾಲಯದಲ್ಲಿ ಪ್ರಶ್ವಿಸುವಂತಿಲ್ಲ. ಅಧಿಕಾರಾವಧಿಯಲ್ಲಿ ಬಂಧಿಸುವಂತಿಲ್ಲ. ಸಿವಿಲ್ ಮೊಕದ್ದಮೆಗಳಿಗೆ ಸಂಬಂಧಿಸಿ ದಂತೆ ಎರಡು ತಿಂಗಳು ಮುಂಚಿತವಾಗಿಯೇ ನೊಟಿಸ್ ನೀಡಬೇಕಾಗುತ್ತದೆ.
* ಸಂಸತ್ತಿನ ಯಾವುದಾದರೂ ಒಂದು ಸದನದಲ್ಲಿ ರಾಷ್ಟ್ರಪತಿಯ ಬಗ್ಗೆ ದೋಷಾರೋಪಣ ಪಟ್ಟಿಯನ್ನು ಮಂಡಿಸಬೇಕು.
* 14 ದಿನಗಳ ಮುಂಚೆ ರಾಷ್ಟ್ರಪತಿಗೆ ಲಿಖಿತ ರೂಪದಲ್ಲಿ ನೋಟಿಸ್ ನೀಡಬೇಕು.
* ನಂತರ ಆರೋಪ ಸಾಬೀತಾದರೆ ಒಟ್ಟು ಸದಸ್ಯರಲ್ಲಿ 2/3 ರಷ್ಟು ಬಹುಮತದೊಮದಿಗೆ ರಾಷ್ಟ್ರಪತಿಯನ್ನು ಪದಚ್ಯುತಿಗೊಳಿಸಬಹುದು.

ವೇತನ, ಭತ್ಯೆ, ಸೌಲಭ್ಯಗಳು (59ನೇ ವಿಧಿ)


* ಮಾಸಿಕ ವೇತನ, ಆರೋಗ್ಯ, ಸಾರಿಗೆ, ಸಂಪರ್ಕ, ಭವ್ಯ ಬಂಗಲೆ, ಅಂದರೆ ‘ರಾಷ್ಟ್ರಪತಿ ಭವನ’ ಜೊತೆಗೆ ಸಿಮ್ಲಾದ ‘ರಾಜಭವನ’ ಹೈದರಾಬಾದ್‍ನ “ರಾಷ್ಟ್ರಪತಿ ನಿಲಯ” ನಿವೃತ್ತಿ ವೇತನವನ್ನು ನೀಡಲಾಗುತ್ತದೆ.
* ಇವರ ವೇತನವನ್ನು ಭಾರತ ಸಂಚಿತ ನಿಧಿಯಿಂದ ಕೊಡಲಾಗುತ್ತದೆ.
* ಏಕಕಾಲದಲ್ಲಿ ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿ ಸ್ಥಾನ ಖಾಲಿಯಾದಾಗ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಹಂಗಾಮಿ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸುತ್ತಾರೆ.
* ರಾಷ್ಟ್ರಪತಿ ಸ್ಥಾನ ಖಾಲಿಯಾದ 6 ತಿಂಗಳೊಳಗೆ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಬೇಕೆಂದು 62(2)ನೇ ವಿಧಿ ತಿಳಿಸುತ್ತದೆ.

ಪ್ರಮಾಣ ವಚನ (60ನೇ ವಿಧಿ)


* ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಂದ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸುತ್ತಾರೆ.

ರಾಷ್ಟ್ರಪತಿಯ ಅಧಿಕಾರ ಮತ್ತು ಕಾರ್ಯಗಳು


1. ಶಾಸನೀಯ ಅಧಿಕಾರ ಮತ್ತು ಕಾರ್ಯಗಳು :


* ರಾಷ್ಟ್ರಪತಿ ಸಂಸತ್ತಿನ ಅಧಿವೇಶನಗಳನ್ನು ಕರೆಯುವ ಮುಂದೂಡುವ ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ (85ನೇ ವಿಧಿ)
* ಸಾಮಾನ್ಯ ಮಸೂದೆಯ ಬಗ್ಗೆ ಲೋಕಸಭೆ ಮತ್ತು ರಾಜ್ಯಸಭೆಗಳ ನಡುವೆ ಭಿನ್ನಾಭಿಪ್ರಾಯ ಉಂಟಾದಾಗ ಜಂಟಿ ಅಧಿವೇಶನ ಕರೆಯುವ (108 ನೇ ವಿಧಿ) ಅಧಿಕಾರ
* ರಾಷ್ಟ್ರಪತಿಯವರು ಕಲೆ, ಸಾಹಿತ್ಯ, ವಿಜ್ಞಾನ ಸಮಾಜ ಸೇವೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 12 ಮಂದಿಯನ್ನು ರಾಜ್ಯಸಭೆಗೆ ನಾಮಕರಣ ಮಾಡುವ ಅಧಿಕಾರ (80ನೇ ವಿಧಿ)
* ಲೋಕಸಭೆಗ ಇಬ್ಬರು ಆಂಗ್ಲೋ- ಇಂಡಿಯನ್‍ರ ನೇಮಕ ಮಾಡುವ ಅಧಿಕಾರ (331ನೇ ವಿಧಿ)
* ಹೊಸ ಸಂಸತ್ತಿನ ಹಾಗೂ ಪ್ರತಿ ವರ್ಷದ ಪ್ರಥಮ ಅಧಿವೇಶನದಲ್ಲಿ ಭಾಷಣ ಮಾಡುವ ಅಧಿಕಾರ (86ಏ ವಿಧಿ)
* ಸಂಸತ್ ಅಧಿವೇಶನದಲ್ಲಿಲ್ಲದಿದ್ದಾಗ ಸುಗ್ರೀವಾಜ್ಞೆಗಳನ್ನು (ಕಾನೂನು) ಹೊರಡಿಸುವ ಅಧಿಕಾರ (123ನೇ ವಿಧಿ) (ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ. ಸಂಸತ್ತಿನ ಒಪ್ಪಿಗೆ ಅಗತ್ಯವಿಲ್ಲದಿದ್ದರೆ ರದ್ದಾಗುತ್ತದೆ)
* ‘ವಿಟೋ’ ಅಧಿಕಾರ ಉಭಯ ಸದನಗಳ ಅನುಮೋದನೆ ಪಡೆದ ಮಸೂದೆ ರಾಷ್ಟ್ರಪತಿಯವರ ಅಂಕಿತಕ್ಕೆ ಬಂದ ಸಂದರ್ಭದಲ್ಲಿ ರಾಷ್ಟ್ರಪತಿಯವರು ಆ ಮಸೂದೆಯನ್ನು ತಿರಸ್ಕರಿಸುವುದಕ್ಕೆ ಅಥವಾ ಅಂಗೀಕಾರ ನೀಡದಿರುವುದಕ್ಕೆ ವಿಟೋ ಎನ್ನಲಾಗುತ್ತದೆ (111ನೇ ವಿಧಿ)

2. ಕಾರ್ಯಾಂಗೀಯ ಅಧಿಕಾರಗಳು :-


* ಭಾರತ ಸರ್ಕಾರದ ಎಲ್ಲಾ ವ್ಯವಹಾರ ಮತ್ತು ಒಪ್ಪಂದಗಳು ರಾಷ್ಟ್ರಪತಿಯವರ ಹೆಸರಿನಲ್ಲಿ ನಡೆಯುತ್ತವೆ.
* ರಾಷ್ಟ್ರಪತಿಯವರು ಪ್ರಧಾನಮಂತ್ರಿಯನ್ನು ನೇಮಿಸುವ 75(1) ನೇ ವಿಧಿ ಪ್ರಧಾನಮಂತ್ರಿ ಸಲಹೆ ಮೇರೆಗೆ ಇತರ ಮಂತ್ರಿಗಳನ್ನು ನೇಮಿಸುವ ಅಧಿಕಾರ.
* ಅಟಾರ್ನಿ ಜನರಲ್ (76ನೇ ವಿಧಿ) ಹಾಗೂ ಆಡಿಟರ್ ಜನರಲ್ ನೇಮಕ (148ನೇ ವಿಧಿ)
* ಹಣಕಾಸು ಆಯೋಗದ ಅಧ್ಯಕ್ಷ ಮತ್ತು ಸದಸ್ಯರು (280ನೇ ವಿಧಿ) ಹಾಗೂ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರೆ ಆಯುಕ್ತರ ನೇಮಕ (324ನೇ ವಿಧಿ)
* ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ನೇಮಕ (316ನೇ ವಿಧಿ) ಹಾಗೂ ಹಿಂದುಳಿದ ವರ್ಗಗಳ ಅಧ್ಯಕ್ಷರ ನೇಮಕ (340ನೇ ವಿಧಿ) ಜೊತೆಗೆ ಅಧಿಕೃತ ಭಾಷಾ ಸಮಿತಿಗಳ ನೇಮಕ (344ನೇ ವಿಧಿ)
* ರಾಜ್ಯಗಳಿಗೆ ರಾಜ್ಯಪಾಲರ ನೇಮಕ (155ನೇ ವಿಧಿ) ಹಾಗೂ ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯಗಳ ಮಖ್ಯ ನ್ಯಾಯಾಧೀಶರುಗಳ ನೇಮಕ (124-217ನೇ ವಿಧಿಗಳು)

3. ಹಣಕಾಸಿನ ಅಧಿಕಾರಗಳು :-


* ರಾಷ್ಟ್ರಪತಿಯ ಅನುಮತಿಯಿಲ್ಲದೆ ಹಣಕಾಸು ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವಂತಿಲ್ಲ.
* ರಾಷ್ಟ್ರಪತಿ ಐದು ವರ್ಷಗಳಿಗೊಮ್ಮೆ ಹಣಕಾಸು ಆಯೋಗವನ್ನು ರಚಿಸುತ್ತಾರೆ (280ನೇ ವಿಧಿ)
* ರಾಷ್ಟ್ರೀಯ ತುರ್ತುನಿಧಿ, ಸಂಚಿತ ನಿಧಿ ರಾಷ್ಟ್ರಪತಿಯ ಅಧೀನದಲ್ಲಿರುತ್ತವೆ (ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಬಳಸಲಾಗುತ್ತದೆ)

4. ನ್ಯಾಯಿಕ ಅಧಿಕಾರಗಳು :-


* ನ್ಯಾಯಾಲಯಗಳು ಅಪರಾಧಿಗೆ ನೀಡಿದ ಶಿಕ್ಷೆಯನ್ನು ತಡೆಯುವ ಮುಂದೂಡುವ, ಕಡಿಮೆ ಮಾಡುವ, ಬದಲಿಸುವ ಅಥವಾ ಮರಣದಂಡನೆ ಶಿಕ್ಷೆ ನೀಡಿದ್ದರೆ, ಸಂಪೂರ್ಣವಾಗಿ ಕ್ಷಮಿಸುವ (72ನೇ ವಿಧಿ) ಅಧಿಕಾರ.
* ರಾಷ್ಟ್ರಪತಿ ಸಾರ್ವಜನಿಕ ಮಹತ್ವದ ವಿಷಯಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಸಲಹೆ ಕೇಳುವ ಅಧಿಕಾರ (143ನೇ ವಿಧಿ)

5. ಸೈನಿಕ (ಮಿಲಿಟರಿ) ಅಧಿಕಾರಗಳು :-


* ರಾಷ್ಟ್ರಪತಿಯವರು ವಾಯುಪಡೆ, ನೌಕಾಪಡೆ, ಭೂಪಡೆಗಳ ಮಹಾದಂಡ ನಾಯಕರಾಗಿರುವುದರ ಜೊತೆಗೆ ಈ ಮೂರು ಪಡೆಗಳ ಮುಖ್ಯಸ್ಥರನ್ನು ನೇಮಿಸುವ ಅಧಿಕಾರ.
* ಯುದ್ಧ ಮತ್ತು ಶಾಂತಿ ಘೋಷಿಸುವ ಅಧಿಕಾರ.

6. ವಿವೇಚನಾಧಿಕಾರಗಳು :-


* ಪ್ರಧಾನಿ ನೇಮಿಸುವ ಸಂದರ್ಭದಲ್ಲಿ
* ಸಂಸತ್ ಮಸೂದೆಗಳನ್ನು ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಿದ ಸಂದರ್ಭದಲ್ಲಿ
* ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ