ಅನ್ನ ಭಾಗ್ಯ ಯೋಜನೆ(ಹಸಿವು ಮುಕ್ತ ಕರ್ನಾಟಕ)
ಉದ್ದೇಶ-
ಬಿಪಿಎಲ್ ಕುಟುಂಬಗಳಿಗೆ ಪ್ರತಿ ತಿಂಗಳಿಗೆ ಗರಿಷ್ಠ 30 ಕೆಜಿ ಅಕ್ಕಿಯನ್ನು 1 ಕೆಜಿಗೆ 1 ರೂ ನಂತೆ ವಿತರಿಸುವ ಮಹತ್ವಕಾಂಕ್ಷೆಯ ಯೋಜನೆಯಾಗಿದ್ದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಸಿವು ಮುಕ್ತ ರಾಜ್ಯ ನಿರ್ಮಾಣ ಕನಸು ನನಸು ಮಾಡಲು ಪ್ರಾರಂಭಿಸಿರುವ ಪ್ರಮುಖ ಯೋಜನೆ
ಆರಂಭ
ಜುಲೈ-10-2013
ಪ್ರಮುಖಾಂಶಗಳು-
ಬಿಪಿಎಲ್ ಅಥವಾ ಅಂತ್ಯೋದಯ ಅನ್ನ ಯೋಜನೆ ಕಾರ್ಡ್ ಇದ್ದರೆ ಒಬ್ಬರಿಗೆ ತಿಂಗಳಿಗೆ 10 ಕೆ.ಜಿ ,ಇಬ್ಬರಿಗೆ 20 ಕೆಜಿ 3 ಮತ್ತು ಅದಕ್ಕಿಂತ ಹೆಚ್ಚಿಗೆ ಇರುವ ಕುಟುಂಬಕ್ಕೆ ತಿಂಗಳಿಗೆ 30 ಕೆಜಿಯ ವರೆಗೆ ಆಹಾರ ಧಾನ್ಯವನ್ನು ವಿತರಣೆ ಮಾಡುವುದು .
ಯೋಜನೆಯ ಸಮರ್ಪಕ ಅನುಷ್ಟಾನಕ್ಕಾಗಿ ಪಡಿತರ ಖಾತ್ರಿ ಯೋಜನೆ ಜಾರಿಗೆ ತಂದಿದ್ದು ಇದರಿಂದ ಭಾನುವಾರವು ಸೇರಿದಂತೆ ತಿಂಗಳಾರಂಭದ 01-10 ರ ವರೆಗೆ ಬೆ 8-12 ಹಾಗೂ ಸಂಜೆ4 -8 ರವರೆಗೆ ನ್ಯಾಯ ಬೆಲೆ ಅಂಗಡಿ ತೆರೆದಿರುವುದು ಕಡ್ಡಾಯ.