Loading [MathJax]/extensions/MathML/content-mathml.js

ಇ-ಸನದ್ (e-sanad)

 

ಇದು ಒಂದು ವಿದ್ಯುನ್ಮಾನ ಸೇವೆಯಾಗಿದ್ದು, ವಿದೇಶಗಳಿಗೆ ವಿದ್ಯಾಭ್ಯಾಸಕ್ಕೆ ಹೋಗುವವರು ಆನ್‍ಲೈನ್‍ನಲ್ಲಿ ದಾಖಲೆಗಳನ್ನು ಪರಿಶೀಲಿಸಲು ಮತ್ತು ದೃಡೀಕರಿಸಲು ಬಳಸುವ ಸೇವೆ ಇದಾಗಿದೆ. ಇ ಸನದ್ ಡಿಜಿಟಲ್ ಇಂಡಿಯಾ ಕ್ರಾರ್ಯಕ್ರಮದ ಪ್ರೇರಣೆಯಾಗಿದೆ. ಇದರಿಂದ ವ್ಯಕ್ತಿಯು ಕ್ಯಾಶ್ ಲೆಸ್ ಮತ್ತು Faceless ಆಗಿ ದಾಖಲಾತಿ ಪರಿಶೀಲನೆ ಮಾಡಿಸಬಹುದು. ಸಿ.ಬಿ.ಎಸ್.ಇಯ ಪರಿಣಾಮ ಮಂಜುಷಾ ವೆಬ್ ಪೋರ್ಟಲ್ ಅನ್ನು ಇದರ ಜೊತೆ ಏಕೀಕೃತಗೊಳಿಸಲಾಗಿದ್ದು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಗತಿಯನ್ನು ವೀಕ್ಷಿಸಬಹುದು. ಈ ಸೇವೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯಗಳು ಜಂಟಿಯಾಗಿ ಪ್ರಾರಂಭಿಸಿವೆ. ಪ್ರಸ್ತುತ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರು- ಶ್ರೀ ಮತಿ ಸುಷ್ಮಾ ಸ್ವರಾಜ್ ಪ್ರಸ್ತುತ ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವರು- ಪ್ರಕಾಶ್ ಜಾವಡೆಕರ್ ಇ ಸನದ್ (e-sanad) ವೆಬ್ ಸೈಟ್ ಅನ್ನು ಎನ್‍ಐಸಿ(NIC) ನಿರ್ವಹಿಸಲಿದೆ.

ದೇಶದಲ್ಲಿ ಇ ಸನದ್ ಸೇವೆಯನ್ನು ಆರಂಭಿಸಿದ ಮೊದಲ ರಾಜ್ಯ ತೆಲಂಗಾಣ