ರಕ್ಷಣಾ ವ್ಯವಸ್ಥೆ (Defence System)

 

• ಭಾರತದ ರಕ್ಷಣಾ ನೀತಿಯು ದೇಶವನ್ನು ಕಾಯುವ ಸೇನೆಗೆ ಅವಶ್ಯಕ
• ರಕ್ಷಣಾ ಉಪಕರಣಗಳು ನೀತಿ ಉಪಖಂಡದಲ್ಲಿ ಶಾಂತಿ ಕಾಯ್ದುಕೊಳ್ಳು ಉದ್ದೇಶಿಸುತ್ತವೆ.
• ರಕ್ಷಣಾ ಸಂಶೋಧನೆಯಲ್ಲಿ DRDO ಸಂಸ್ಥೆ ಪ್ರಮುಖ ಪಾತ್ರವಹಿಸುತ್ತದೆ.
• DRDO ಪ್ರಸ್ತುತ 50ಕ್ಕಿಂತ ಹೆಚ್ಚು ಪ್ರಯೋಗಾಲಯಗಳನ್ನು ಹೊಂದಿದೆ.
• ವೈಮಾನಿಕ ಶಸ್ತ್ರಗಳು, ವಿದ್ಯುಮ್ಮಾನ, ಯುದ್ಧ ವಾಹನ, ಕ್ಷಿಪಣಿ, ತಾಂತ್ರಿಕತೆ, ಜೀವ ವಿಜ್ಞಾನ ಇನ್ನೂ ಅನೇಕ ಕ್ಷೇತ್ರಗಳಲ್ಲಿ DRDO ಹಾಗೂ ಇತರ ಸಂಸ್ಥೆಗಳು ಯಶಸ್ಸು ಕಂಡಿವೆ.

ಡಿ.ಆರ್.ಡಿ.ಒ- Defence Research and Development Organisation


ಡಿ.ಆರ್.ಡಿ.ಒ ಪ್ರಧಾನ ಕಚೇರಿ ನವದೆಹಲಿಯಲ್ಲಿದೆ.
ಡಿ.ಆರ್.ಡಿ.ಒ ರಕ್ಷಣಾ ಸಂಶೋಧನೆಯಲ್ಲಿ ತೊಡಗಿಕೊಂಡ ಸಂಸ್ಥೆ.
1958 ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಮಿಲಿಟರಿ ಸಂಶೋಧನೆ ಮತ್ತು ಅಭಿವೃದ್ಧಿ ಹೊಣೆಗಾರಿಕೆ ಹೊಂದಿದೆ. ಸುಮಾರು 50ಕ್ಕೂ ಹೆಚ್ಚು ಅಂಗ ಸಂಸ್ಥೆಗಳನ್ನು ಹೊಂದಿದೆ.
ಎ.ಡಿ.ಇ. Aeronautical Development Establishment (ADE) - ಬೆಂಗಳೂರು – ವೈಮಾನಿಕ ಸಂಶೋಧನೆ
ಸಿ.ವಿ.ಆರ್.ಡಿ.ಇ. Combat Vehicles Research & Development Establishment (CVRDE) - ಚೈನ್ನೈ – ಮಿಲಿಟರಿ ವಾಹನಗಳ ಸಂಶೋಧನೆ
ಡಿ.ಎಫ್.ಆರ್.ಎಲ್. Defence Food Research Laboratory - ಮೈಸೂರು – ಆಹಾರ ಸಂಶೋಧನೆ
ಎಲ್.ಆರ್.ಡಿ.ಇ. Electronics & Radar Development Establishment ಬೆಂಗಳೂರು- ವಿದ್ಯುನ್ಮಾನ ಸಂಶೋಧನೆ
ಜಿ.ಟಿ.ಆರ್.ಇ Gas Turbine Research Establishment - ಬೆಂಗಳೂರು ಟರ್ಬೈನ್ ಸಂಶೋಧನೆ
ಐ.ಟಿ.ಆರ್. Integrated Test Range- ಬಾಲಾಸೂರ – ಕ್ಷಿಪಣಿ ಪರೀಕ್ಷೆ
ವಿ.ಆರ್.ಡಿ.ಇ. Vehicles Research & Development Establishment- ಅಹ್ಮದನಗರ – ವಾಹನ ಸಂಶೋಧನೆ
ಎಚ್.ಎ.ಎಲ್. Hindustan Aeronautics Limited- ಬೆಂಗಳೂರು – ವೈಮಾನಿಕ ಕ್ಷೇತ್ರ
ಬಿ.ಎಚ್.ಇ.ಎಲ್. Bharat Heavy Electricals - ಬೆಂಗಳೂರು, ಕೆ.ಜಿ.ಎಫ್. ವೈಮಾನಿಕ ಕ್ಷೇತ್ರ

ಭಾರತದ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮ


ರಕ್ಷಣಾ ಕ್ಷೇತ್ರದಲ್ಲಿ ಪ್ರಮುಖ ಸಂಶೋಧನೆ ಕ್ಷಿಪಣಿ ಇರುತ್ತದೆ. 1983 ರಲ್ಲಿ ಡಿ.ಆರ್.ಡಿ.ಓ. ಸಮಗ್ರ ನಿರ್ದೇಶಿತ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮ (Integrated Guided Missile Development Programme) ಹಮ್ಮಿಕೊಂಡು ಈ ಯೋಜನೆಯ ಅಡಿಯಲ್ಲಿ ವಿವಿಧ ರೀತಿಯ ಕ್ಷಿಪಣಿ ಅಭಿವೃದ್ಧಿ ಹಮ್ಮಿಕೊಳ್ಳಲಾಗಿದೆ.
1. ಪೃಥ್ವಿ – ಭೂಮಿಯಿಂದ ಭೂಮಿಗೆ
2. ಅಗ್ನಿ - ಭೂಮಿಯಿಂದ ಭೂಮಿಗೆ
3. ತ್ರಿಶೂಲ್ - – ಭೂಮಿಯಿಂದ ಆಕಾಶಕ್ಕೆ
4. ನಾಗ - ವಿರೋಧಿ ಟ್ಯಾಂಕ್ ಕ್ಷಿಪಣಿ

ಕ್ಷಿಪಣಿಗಳ ವರ್ಗೀಕರಣ


1. ಅಲ್ಪ ವಲಯ ಕ್ಷಿಪಣಿಗಳು: 500 ಕಿ.ಮೀ.ವರೆಗೆ ಕ್ರಮಿಸುವ ಸಾಮರ್ಥ್ಯ, ಸಿಡಿಮದ್ದು ಸಿಡಿಸಲು ಉಪಯೋಗ
ಉದಾ: ಪೃಥ್ವಿ (ಹಪ್ತ-ಪಾಕಿಸ್ತಾನ)
2. ಮಧ್ಯಂತರ ವಲಯ ಕ್ಷಿಪಣಿಗಳು: 500-5000 ಕಿ.ಮೀ. ಸಾಮರ್ಥ್ಯ. ಸಮಗ್ರ ಗುರಿ ನಿರ್ದೇಶಿತ ಕ್ಷಿಪಣಿ ಎಂದೂ ಕೂಡ ಕರೆಯಲಾಗುವುದು.
ಉದಾ: ಅಗ್ನಿ (ಘೋರಿ-ಪಾಕಿಸ್ತಾನ)
3. ದೀರ್ಘ ವಲಯ ಕ್ಷಿಪಣಿಗಳು: 5000 ಕಿ.ಮೀ.ಕ್ಕಿಂತ ಮೇಲೆ ಕ್ರಮಿಸುವ ಸಾಮರ್ಥ್ಯ. ಿವುಗಳಿಗೆ ಖಂಡಾಂತರ ಬ್ಯಾಲಿಸ್ಟಿಕ್ಸ್ ಕ್ಷಿಪಣಿಗಳೆಂದಲೂ ಕೂಡ ಕರೆಯಲಾಗುತ್ತದೆ.
ಉದಾ: ಸೂರ್ಯ (ಅಗ್ನಿ - 4)

ಭಾರತದ ಪ್ರಮುಖ ಕ್ಷಿಪಣಿಗಳು


ಅಗ್ನಿ ಕ್ಷಿಪಣಿ


ಇದೊಂದು ಮಧ್ಯಂತರ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು ಪರಮಾಣು ಕೊಂಡೊಯ್ಯುವ ಕ್ಷಿಪಣಿಯಾಗಿದೆ. 1989ರಲ್ಲಿ ಪ್ರಾರಂಭವಾದ ಈ ಯೋಜನೆ ಪ್ರಸ್ತುತ 6 ಅವತರಣಿಕೆಗಳನ್ನು ಹೊಂದಿದೆ. IGMDP ಕಾರ್ಯಕ್ರಮದಲ್ಲಿ ರಚನೆಯಾದ ಪ್ರಥಮ ಕ್ಷಿಪಣಿ ಇದಾಗಿದೆ. ಇದೊಂದು ಭೂಮಿಯಿಂದ ಭೂಮಿಗೆ ಹಾರುವ ಕ್ಷಿಪಣಿಯಾಗಿದ್ದು ಘನ ಮತ್ತು ದ್ರವ ಇಂಧನಗಳನ್ನು ಬಳಸಲಾಗುತ್ತದೆ. ಇದು ಪರಮಾಣು ಅಸ್ತ್ರ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಈ ಕ್ಷಿಪಣಿಯ ಮೂರು ಅವತರಣಿಕೆಗಳಿದ್ದು ಭೂಸೇನೆ, ವಾಯುಸೇನೆ ಮತ್ತು ನೌಕಾ ಸೇನೆ ಬಳಸುತ್ತಿವೆ.

ತ್ರಿಶೂಲ ಕ್ಷಿಪಣಿ


ಭೂಮಿಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿ ಇದಾಗಿದ್ದು ಕಡಿಮೆ ಕ್ರಮಿಸುವ ಕ್ಷಮತೆ ಹೊಂದಿದೆ.ಎಲ್ಲಾ ಹವಾಮಾನದಲ್ಲೂ ಬಹುಬೇಗನೆ ಪ್ರತಿಕ್ರಿಯಿಸುತ್ತದೆ. ಇದನ್ನು ಸಮುದ್ರದಿಂದ ಹಾಗೂ ಚಲಿಸುವ ವಾಹನಗಳಿಂದಲೂ ಸಹ ಉಡಾಯಿಸಬಹುದು. 9 ಕಿ.ಮೀ ಕ್ರಮಿಸುವ ಕ್ಷಮತೆ ಹೊಂದಿದರುವ ಈ ಕ್ಷಿಪಣಿಗೆ 5.5 ಕೆ.ಜಿ. ಛಿದ್ರಗೊಳ್ಳುವ ಸಿಡಿತಲೆಗಳನ್ನು ಕೂಡಿಸಲಾಗಿದೆ. ಕಡಿಮೆ ಎತ್ತರದಲ್ಲಿ ಹಾರುವ ವಿಮಾನ ಮತ್ತು ಹೆಲಿಕಾಪ್ಟರ್ ಪತನಗೊಳಿಸಲು ಬಹಳ ಸಹಕಾರಿಯಾಗಿದೆ. ಪ್ರಸ್ತುತ ಈ ಕ್ಷಿಪಣಿ ಕಾರ್ಯಕ್ರಮ ನಿಲ್ಲಿಸಲಾಗಿದೆ.

ಆಕಾಶ ಕ್ಷಿಪಣಿ


ಭೂಮಿಯಿಂದ ಆಕಾಶಕ್ಕೆ ಹಾರುವ ಈ ಕ್ಷಿಪಣಿ 30 ಕಿ,ಮೀ. ಕ್ರಮಿಸುವ ಸಾಮರ್ಥ್ಯ ಹೊಂದಿದ್ದು 55 ಕೆ.ಜಿ. ಸಿಡಿತಲೆಗಳ ಕೊಂಡೊಯ್ಯುವ ಕ್ಷಮತೆ ಹೊಂದಿದೆ. 8 ಗುರಿಗಳನ್ನು ಒಟ್ಟಿಗೆ ಹೊಡೆದು ಉರುಳಿಸುತ್ತದೆ. ಇದರಲ್ಲಿ ಸ್ಕ್ರಮ್ ಜೆಟ್ ತಾಂತ್ರಿಕತೆ ಅಂದರೆ ವಾಯುವಿನಿಂದ ಆಮ್ಲಜನಕ ತೆಗೆದುಕೊಳ್ಳುವ ತಾಂತ್ರಿಕತೆ ಅಳವಡಿಸಲಾಗಿದೆ.

ನಾಗ್ ಕ್ಷಿಪಣಿ


ಇದು ಮೂರನೆಯ ತಲೆಮಾರಿನ ಫೈರ್ ಅಂಡ್ ಫಾರ್ಗೆಟ್ ಸೌಲಭ್ಯವುಳ್ಳ ಕ್ಷಿಪಣಿ. 4 ಕಿ.ಮೀ. ಕ್ರಮಿಸುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿಗೆ ಇನ್ ಫ್ರಾ ರೆಡ್ ಇಮೇಜಿಂಗ್ ವ್ಯವಸ್ತೆ ಇರುವುದರಿಂದ ಶತ್ರು ಟ್ಯಾಂಕರ್ ಗಳಿಂದ ಹೊಮ್ಮುವ ಉಷ್ಣದಿಂದ ಪತ್ತೆ ಹಚ್ಚಿ ದಾಳಿ ಮಾಡುವ ವಿಶೇಷ ಸಾಮರ್ಥ್ಯ ಈ ಕ್ಷಿಪಣಿ ಹೊಂದಿದೆ.
ನಾಗ್ ಮಿಸೈಲ್ ನ ಅವತರಣಿಕೆಗಳು
1) ಹೆಲಿನಾ – 7-8 ವ್ಯಾಪ್ತಿ. ಇದನ್ನು ಹೆಲಿಕಾಪ್ಟರ್ ನಿಂದ ಹಾರಿಸಬಹುದು.
2) ನಾಮಿಕಾ – ಭೂ ಸೇನೆಯ ಅವತರಣಿಕೆಯಾಗಿದ್ದು ನಾಗ್ ಕ್ಷಿಪಣಿ ಕ್ಯಾರಿಯರ್ ವಾಹನದಿಂದ ಹಾರಿಸಬಹುದು.

ಬ್ರಹ್ಮೋಸ್ ಕ್ಷಿಪಣಿ


• ಇದೊಂದು ಸೂಪರ್ ಸಾನಿಕ್ ಕ್ಷಿಪಣಿಯಾಗಿದ್ದು ಭೂಮಿಯಿಂದ, ವಾಹನಗಳಿಂದ, ಯುದ್ಧ ಹಡಗುಗಳಿಂದ ಹಾಗೂ ಜಲಾಂತರಗಾಮಿಗಳಿಂದ ಉಡಾವಣೆ ಮಾಡಬಹುದಾಗಿದೆ.
• ಬ್ರಹ್ಮೋಸ್ ಎಂದರೆ ಬ್ರಹ್ಮಪುತ್ರ ಹಾಗೂ ಮಾಸ್ಕವೊ ಎಂಬ ಎರಡು ನದಿಗಳಿಂದ ಪಡೆದ ಹೆಸರಾಗಿದೆ.
• ಬ್ರಹ್ಮೋಸ್ ಏರೋಸ್ಪೇಸ್ ಪ್ರೈ ಲಿ. ಎಂಬ ಸಂಸ್ಥೆ ಈ ಕ್ಷಿಪಣಿಗಳನ್ನು ತಯಾರಿಸುತ್ತಿದ್ದು ಭಾರತ ಮತ್ತು ರಷ್ಯ ನಡುವಿನ ಒಪ್ಪಂದದಿಂದ ಈ ಕಾರ್ಯಕ್ರಮ ನಡೆಯುತ್ತಿವೆ.
• ಪ್ರಾಥಮಿಕವಾಗಿ ಇದೊಂದು ಟ್ಯಾಂಕ್ ನಿರೋಧಕ ಕ್ಷಿಪಣಿಯಾಗಿದ್ದು ಚಲಿಸುವ ತಟಗಳಿಂದಲೂ ಉಡಾಯಿಸಬಹುದಾಗಿದೆ. BEML ಸಂಸ್ತೆ ನಿರ್ಮಾಣ ಮಾಡಿರುವ TATRA ಟ್ರಕ್ಕುಗಳನ್ನು ಈ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ.
• ಭೂಸೇನೆ, ವಾಯುಸೇನೆ, ನೌಕಾಸೇನೆಯಿಂದ ಬಳಕೆ
• ಜಗತ್ತಿನ ಅತಿವೇಗದ ಕ್ರೂಸ್ ಕ್ಷಿಪಣಿ

ಇತರೇ ಕ್ಷಿಪಣಿಗಳು


• ನಿರ್ಭಯ: ಇದೊಂದು ಸಬ್ ಸಾನಿಕ್ ಕ್ಷಿಪಣಿಯಾಗಿದ್ದು 1000 ಕಿ.ಮೀ. ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಇದನ್ನು ಭೂಮಿ, ಆಕಾಶ ಹಾಗೂ ಸಮುದ್ರದಿಂದ ಹಾರಿಬಿಡಬಹುದು. 24 ವಿವಿಧ ಬಗೆಯ ಸಿಡಿತಲೆಗಳನ್ನು ಇದು ಕೊಂಡೊಯ್ಯಬಹುದು.
• ಸಾಗರಿಕಾ: ಪರಮಾಣು ಸಿಡಿತಲೆಗಳನ್ನು ಜಲಾಂತರ್ಗಾಮಿಗಳಿಂದ ಚಿಮ್ಮಿಸುವ ಸಾಮರ್ಥ್ಯ ಹೊಂದಿದೆ. 750 ಕಿ.ಮೀ. ದೂರದ ವರೆಗೆ ಕ್ರಮಿಸಬಹುದು. 500 ಕಿ.ಜಿ. ಸಿಡಿತಲೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.
• ಸೂರ್ಯ: ಇದೊಂದು ಬಾಲಾಸ್ಟಿಕ್ ಕ್ಷಿಪಣಿಯಾಗಿದ್ದು ಅಂತರ ಖಂಡಗಳ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಅಮೇರಿಕಾ, ರಷ್ಯಾ, ಚೀನಾ ಬಿಟ್ಟರೆ ಭಾರತ ಇಂತಹ ಕ್ಷಿಪಣಿ ಹೊಂದಿರುವ ನಾಲ್ಕನೇ ರಾಷ್ಟ್ರವಾಗಿದೆ. ಇದನ್ನು PSLV ಉಡಾವಣಾ ವಾಹನದಿಂದ ಉಡಾಯಿಸಬಹುದು. 5000 ರಿಂದ 10000 ಕಿ.ಮೀ. ಅಂತರ ಕ್ರಮಿಸುವ ಸಾಮರ್ಥ್ಯ ಹೊಂದಿದೆ.
• ಶೌರ್ಯ: ಇದು ಭೂಮಿಯಿಂದ ಭೂಮಿಗೆ ಹಾರುವ ಕ್ಷಿಪಣಿಯಾಗಿದ್ದು 750 ಕಿ.ಮೀ. ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಭೂಸೇನೆ ಮತ್ತು ನೌಕಾಪಡೆ ಇವುಗಳನ್ನು ಬಳಸುತ್ತಿದ್ದು ಪರಮಾಣು ಸಿಡಿತಲೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಮೊದಲು 40 ಕಿ.ಮೀ. ಕ್ರಮಿಸಿ ನಂತರ ಗುರಿಯೆಡೆಗೆ ಚಲಿಸುತ್ತದೆ.

ಟ್ಯಾಂಕ್ ಗಳು


• ಅರ್ಜುನ: ಇದನ್ನು MBT ಟ್ಯಾಂಕ್ ಎಂದು ಕರೆಯಲಾಗಿದೆ. CVRDE ಚೆನ್ನೈನಲ್ಲಿ ತಯಾರಾಗುವ ಈ ಟ್ಯಾಂಕ್ 72 ಕಿ.ಮೀ. ಪ್ರತಿ ಗಂಟೆ ಚಲಿಸುವ ಸಾಮರ್ಥ್ಯ ಹೊಂದಿದೆ. ರಾತ್ರಿ ಚಲಿಸುವ ಸಾಮರ್ಥ್ಯ ಹೊಂದಿದ್ದು ಜಿ.ಪಿ.ಎಸ್. ತಂತ್ರಜ್ಞಾನ ಅಳವಡಿಸಲಾಗಿದೆ.
• ಉದಾ: ಅರ್ಜುನ T-90
• T-90 ಟ್ಯಾಂಕ್: ರಷ್ಯಾ ನಿರ್ಮಿತ ಈ ಟ್ಯಾಂಕ್ ಭೂ ಸೇನೆಯಲ್ಲಿ ಉಪಯೋಗಿಸಲಾಗುತ್ತದೆ.
• T-90 ಭೀಷ್ಮ: ಇವುಗಳನ್ನು ಭಾರತದಲ್ಲಿ ನಿರ್ಮಾಣ ಮಾಡಲಾಗುತ್ತದೆ. ರಷ್ಯಾ, ಇಸ್ರೇಲ್ ಮತ್ತು ಫ್ರಾನ್ಸ್ ದೇಶದ ಸಹಾಯದಿಂದ ತಂತ್ರಜ್ಞಾನ ಬಳಸಲಾಗುತ್ತಿದೆ. 125 ಮಿ.ಮಿ. ಬಂದೂಕು, 12.7 ಮಿ.ಮಿ. ಬಂದೂಕು ಇತ್ಯಾದಿಗಳನ್ನು ಇದು ಹೊಂದಿರುತ್ತದೆ.

ಯುದ್ಧ ವಿಮಾನಗಳು


1) ಸುಖೊಯಿ-ಸು30MKI – ರಷ್ಯಾ – ಮಲ್ಟಿ ರೋಲ್ ಫೈಟರ್
2) ಮಿರೇಜ್ 2000 – ಫ್ರಾನ್ಸ್ - ಮಲ್ಟಿ ರೋಲ್ ಫೈಟರ್
3) ಮಿಗ್ 29 –ರಷ್ಯಾ - ಮಲ್ಟಿ ರೋಲ್ ಫೈಟರ್
4) SU-30 MKI – ರಷ್ಯಾ - ಮಲ್ಟಿ ರೋಲ್ ಫೈಟರ್
5) ಜಾಗ್ವರ – ಇಂಗ್ಲಂಡ್ – ಆಕ್ರಮಣಕ್ಕಾಗಿ (Attack)
6) ಹಾವ್ಕ್ – ಇಂಗ್ಲಂಡ್ –ತರಬೇತಿ (Trainer)
7) ತೇಜಸ್ – ಭಾರತ – ಮಲ್ಟಿರೋಲ್ ವಿಮಾನ
8) ಪಾರಸ - ಭಾರತ- ಸಾಗರಿಕ ವಿಮಾನ

ಹೆಲಿಕಾಪ್ಟರ್ ಗಳು


1) Mi-8 – ರಷ್ಯ – ಸಾರಿಗೆ
2) ದೃವ- ಭಾರತ – ಬಳಕೆ
3) ಚಿತಾಹ – ಭಾರತ – ಬಳಕೆ
4) ಚೇತಕ- ಭಾರತ – ಬಳಕೆ
5) ಕಾಮೋವ್ – ರಷ್ಯ – ಆಕಾಶದಲ್ಲಿ ಮುನ್ನೆಚ್ಚರಿಕೆ ನೀಡಲು
6) ದ್ರುವ- ಭಾರತ – ಆಕ್ರಮಣ (Attcak)