Loading [MathJax]/extensions/MathML/mml3.js

ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ

 

ವಿಮಾ ವ್ಯಾಪ್ತಿಯಿಂದ ಹೊರಗುಳಿದಿರುವ ಪ್ರತಿಯೊಬ್ಬ ಭಾರತೀಯನನ್ನು ವಿಮಾ ವ್ಯಾಪಯೋಳಗೆ ತರಲು ಭಾರತ ಸರ್ಕಾರದ ಪ್ರಾಯೋಜಿತ ಜೀವ ವಿಮಾ ಯೋಜನೆಯೇ ಈ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ.

ಪ್ರಾರಂಭ:


09-05-15

2015 ರವರೆಗೆ ಕೇವಲ 20% ಜನರು ಮಾತ್ರ ವಿಮಾ ಸೌಲಭ್ಯ ಹೊಂದಿದ್ದು ,ಉಳಿದ 80% ನಾಗರೀಕರು ಯಾವುದೇ ವಿಮಾ ಪಾಲಿಸಿಯನ್ನು ಹೊಂದಿರಲಿಲ್ಲ. ಹೆಚ್ಚು ಹೆಚ್ಚು ಪ್ರೀಮಿಯಂ ಹಣ ಪಾವತಿಸಲಾಗದೆ ವಿಮಾ ಸೌಲಭ್ಯದಿಂದ ದೂರ ಉಳಿದಿದ್ದವರನ್ನು ವಿಮಾ ವ್ಯಾಪ್ತಿಯೊಳಗೆ ತರಲು ಕಡಿಮೆ ಪ್ರೀಮಿಯಂ ಹಣದೊಂದಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಯನ್ನು ಆರಂಭಿಸಲಾಗಿದೆ. 18 ನೇ ವಯೋಮನದಿಂದ 50 ವರ್ಷದೊಳಗಿನ ಹಾಗೂ ಯಾವುದಾದರೊಂದು ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿರುವ ವ್ಯಕ್ತಿಗಳು ಈ ಯೋಜನೆಯಡಿಯಲ್ಲಿ ವಿಮೆ ಮಾಡಿಸಲು ಅರ್ಹರು ವಾರ್ಷಿಕ 330 ರೂಪಾಯಿಗಳನ್ನು ನೇರವಾಗಿ ಪಾಲಿಸಿದಾರರ ಖಾತೆಯಿಂದ ಕಡಿತ ಮಾಡಿಕೊಳ್ಳಲಾಗುತ್ತದೆ. ಯಾವುದೇ ಕಾರಣದಿಂದ ಫಲಾನುಭಾವಿಯು ಮರಣ ಹೊಂದಿದರೆ ಅವಲಂಬಿತರಿಗೆ 2 ಲಕ್ಷದವರೆಗೆ ವಿಮೆ ನೀಡಲಾಗುತ್ತದೆ ಈ ಯೋಜನೆಯಡಿಯಲ್ಲಿ 2017 ಏಪ್ರಿಲ್ ವೇಳೆಗೆ 3.11 ಕೋಟಿ ನಾಗರೀಕರು ವಿಮೆ ಪಾಲಿಸಿ ಪಡೆದಿದ್ದು, 63767 ಪಾಲಿಸಿದಾರರಿಗೆ ಹಣ ವಿತರಿಸಲಾಗಿದೆ.