ಹೈನುಗಾರಿಕೆ (Dairy farming)

 

• ಪ್ರಾಣಿಗಳನ್ನು ಕ್ಷೀರೋದ್ಯಮ ಹಾಗೂ ಇತರೆ ಹಲವು ಉದ್ದೇಶಗಳಿಗಾಗಿ ಪೋಷಿಸುವುದನ್ನು ಪಶು ಸಂಗೋಪನೆ ಎನ್ನುತ್ತಾರೆ. ಇದು ಜೀವನಾಧಾರ ಹಾಗೂ ವಾಣಿಜ್ಯ ಮಾದರಿ ಹೀಗೆ ಎರಡು ಹಂತಗಳಲ್ಲಿಯೂ ನಿರ್ವಹಿಸಲ್ಪಡುವ ಉದ್ಯೋಗವಾಗಿದೆ.
• ಭಾರತವು ಹಾಲಿನ ಉತ್ಪಾದನೆಯಲ್ಲಿ ಸಾಧಿಸಿರುವ ಅಪಾರ ಪ್ರಗತಿಯನ್ನು ಶ್ವೇತ ಕ್ರಾಂತಿ ಎಂದು ಕರೆಯುತ್ತಾರೆ.
• ಭಾರತವೂ ಕೈಗೊಂಡಿರುವ ' ರಾಷ್ಟ್ರೀಯ ಸಮಗ್ರ ಕ್ಷೀರೋದ್ಯಮ ಅಭಿವೃದ್ಧಿ ಯೋಜನೆಯು ಪ್ರಪಂಚದಲ್ಲಿಯೇ ದೊಡ್ಡದು.ಇದಕ್ಕಾಗಿ ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಕಾರ್ಪೋರೇಶನ್ 1965 ರಲ್ಲಿ ಸ್ಥಾಪಿಸಲಾಗಿದೆ.
• 1991 ರಿಂದ 2001 ರ ಅವಧಿ ಭಾರತದ ಹಾಲಿನ ಉತ್ಪಾದನೆಯ ಪರ್ವಕಾಲ. ಈ ಅವಧಿಯಲ್ಲಿ ದೇಶವು ಪ್ರಪಂಚದಲ್ಲಿ ಅತಿ ಹೆಚ್ಚು ಹಾಲನ್ನು ಉತ್ಪಾದಿಸುವ ರಾಷ್ಟ್ರವಾಗಿ ಹೊರ ಹೊಮ್ಮಿತು.ಈ ಅವಧಿಯಲ್ಲಿ ದೊರೆಯುವ ತಲಾವಾರು ಹಾಲಿನ ಪ್ರಮಾಣ 184 ರಿಂದ 226 ಗ್ರಾಂ ಗಳಿಗೆ ಹೆಚ್ಚಿತು.
• ಇದರಿಂದ ಹಾಲಿನ ಉತ್ಪಾದನೆ ನಿರಂತರವಾಗಿ ಹೆಚ್ಚಿ ಭಾರತವು ಪ್ರಪಂಚದಲ್ಲಿ ಹಾಲಿನ ಉತ್ಪಾದನೆಯಲ್ಲಿ ಮೊದಲ ಸ್ಥಾನ ಪಡೆಯಿತು.

ಮೀನುಗಾರಿಕೆ


• ಮೀನು,ಸೀಗಡಿ,ಏಡಿ,ಸೀಲ್,ತಿಮಿಂಗಲ,ಮುತ್ತಿನ ಚಿಪ್ಪು ಮತ್ತಿತರ ಜಲಚರಗಳ ಸಂಗ್ರಹಣೆಯನ್ನು ಮೀನುಗಾರಿಕೆ ಎಂದೂ ಕರೆಯುವರು.
• ಭಾರತವು ಮೀನಿನ ಉತ್ಪಾದನೆಯಲ್ಲಿ ಪ್ರಪಂಚದ ರಾಷ್ಟ್ರಗಳಲ್ಲಿ ಚೈನಾದ ನಂತರ ಎರಡನೆಯ ಸ್ಥಾನವನ್ನು ಪಡೆದಿದೆ.
• ಭಾರತವು ಮೀನುಗಾರಿಕಾ ಮತ್ತು ಮೀನಿನ ಸಾಕಾಣಿಕೆಯಲ್ಲಿ ಇಂದು ಅಪಾರ ಪ್ರಗತಿಯನ್ನು ಸಾಧಿಸಿದ್ದು, ಇದನ್ನು ನೀಲಿ ಕ್ರಾಂತಿ ಎನ್ನುವರು.