ಉಬ್ಬರ ವಿಳಿತಗಳು
 
ಸೂರ್ಯ ಚಂದ್ರರ ಆಕರ್ಷಣೆಯಿಂದ ಸಾಗರದ ಇಡೀ ಜಲಭಾಗವು ಪ್ರತಿದಿನ 2 ಬಾರಿ ಮೇಲಕ್ಕೆ ಉಬ್ಬುವುದು ಮತ್ತು 2 ಬಾರಿ ತಗ್ಗುವುದು. ಮೇಲುಬಿದ್ದಾಗ ತೀರಪ್ರದೇಶದಲ್ಲಿ ನೀರು ಸ್ವಲ್ಪ ನೆಲಭಾಗವನ್ನು ಆಕ್ರಮಿಸುವುದು. ಇದಕ್ಕೆ ಸಮುದ್ರದ ಉಬ್ಬರ ಎನ್ನುವರು. ಅದು ತಗ್ಗಿದಾಗ ಸಮುದ್ರದ ದಂಡೆಯಲ್ಲಿನ ಸ್ವಲ್ಪ ನೆಲಭಾಗವು ಹೊರಕಾಣುವುದು. ಇದಕ್ಕೆ ಸಮುದ್ರದ ಇಳಿತ ಎನ್ನುವರು. ಈ ಕ್ರಿಯೆಗೆ ಉಬ್ಬರವಿಳತ ಎಂದು ಹೆಸರು.
ಉಬ್ಬರವಿಳತಗಳಿಗೆ ಕಾರಣಗಳು
(1) ಸೂರ್ಯ ಮತ್ತು ಚಂದ್ರರು ಭೂಭಾಗವನ್ನು ಆಕರ್ಷಿಸುತ್ತಾರೆ. ಘನರೂಪದಲ್ಲಿರುವ
ಶಿಲಾಗೋಳದ ಮೇಲೆ ಇದರ ಪರಿಣಾಮ ಕಡಿಮೆ. ಜಲಗೋಳದ ಮೇಲೆ ಹೆಚ್ಚು ಆಕರ್ಷಿತವಾಗುವುದು. ಸೂರ್ಯನು ಚಂದ್ರನ ಗಾತ್ರಕ್ಕಿಂತ ಹೆಚ್ಚು ಗಾತ್ರವಿದ್ದರೂ, ಭೂಮಿಗೆ 150 ದ. ಲಕ್ಷ ಕಿ.ಮೀ. ದೂರದಲ್ಲಿರುವುದರಿಂದ ಸೂರ್ಯನ ಆಕರ್ಷಣೆಯು ಚಂದ್ರನ ಆಕರ್ಷಣೆಗಿಂತ ಭಾಗ ಮಾತ್ರ ಚಂದ್ರ ಭೂಮಿಗಿಂತ ಸಣ್ಣದಾಗಿದ್ದರೂ ಕೇವಲ 3,84,000 K.m. ದೂರದಲ್ಲಿರುವುದರಿಂದ ಆಕರ್ಷಣೆ ಪ್ರಭಾವ ಹೆಚ್ಚು. ಆದುದರಿಂದ ಉಬ್ಬರವಿಳಿತ ಚಂದ್ರನ ಪ್ರತ್ಯಕ್ಷ ಚಲನವಲನಗಳನ್ನು ಅನುಸರಿಸುತ್ತದೆ.
ಉಬ್ಬರವಿಳಿತಗಳ ಪ್ರಕಾರಗಳು
(1) ದೈನಂದಿನ ಉಬ್ಬರವಿಳಿತ
(2) ಅಧಿಕ ಉಬ್ಬರವಿಳಿತ
(3) ಮಧ್ಯಮ ಉಬ್ಬರವಿಳಿತ
1. ದೈನಂದಿನ ಉಬ್ಬರವಿಳಿತಗಳು
ಚಂದ್ರನ ಆಕರ್ಷಣೆಯಿಂದ ಉಬ್ಬರವಿಳಿತಗಳು ಉಂಟಾದಾಗ ಸಮುದ್ರ ಮಟ್ಟವು ಏರುವುದರಿಂದ ನೀರಿನ ಪ್ರವಾಹವು ಒಂದು ಸಮುದ್ರ ದಂಡೆಯ ಭಾಗವು ಮುಚ್ಚಿಹೋಗುತ್ತದೆ. ಉಬ್ಬರ ಉಂಟಾಗಿ ಆರು ಗಂಟೆಗಳ ನಂತರ ಸಮುದ್ರ ಮಟ್ಟ ಕೆಳಗಿಳೀದು ಸಮುದ್ರ ತೀರ ಭಾಗ ಮೇಲೆ ಕಾಣುವುದು. ಈ ರೀತಿ ದಿನಕ್ಕೆ 2 ಉಬ್ಬರಗಳು 2 ಇಳಿತಗಳು ಉಂಟಾಗುತ್ತವೆ. ಇವುಗಳನ್ನು ದೈನಂದಿನ ಉಬ್ಬರವಿಳಿತ ಎನ್ನುವರು.
2. ಅಧಿಕ ಉಬ್ಬರವಿಳಿತ
ಚಂದ್ರಮಾನದ ಒಂದು ತಿಂಗಳಲ್ಲಿ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ಭೂಮಿ ಚಂದ್ರ ಸೂರ್ಯರು ಒಂದೇ ಸರಳ ರೇಖೆಯಲ್ಲಿರುವುವು. ಸೂರ್ಯ ಚಂದ್ರರ ಆಕರ್ಷಣೆಯ ಮೊತ್ತದಿಂದ ತೀವ್ರಗತಿಯ ಉಬ್ಬರಗಳು ಮತ್ತು ತಈವ್ರ ತೆರನಾದ ಇಳಿತಗಳುಂಟಾಗುತ್ತವೆ. ಇವುಗಳಿಗೆ ಅಧಿಕ ಉಬ್ಬರವಿಳಿತ ಎನ್ನುವರು.
3. ಮಧ್ಯಮ ಉಬ್ಬರವಿಳಿತ
ಅರ್ಧ ಚಂದ್ರ ದಿನಗಳಲ್ಲಿ ಸೂರ್ಯ ಚಂದ್ರರು 900 ಅಂತರದಲ್ಲಿರುವರು. ಆಗ ಚಂದ್ರನ ಆಕರ್ಷಣೆಯಿಂದ ಇಳಿತವಾದ ಕಡೆ ಸೂರ್ಯನಿಂದ ಉಬ್ಬರವು, ಉಬ್ಬರವಾದ ಕಡೆ ಇಳಿತವೂ ಆಗುತ್ತದೆ. ಆದುದರಿಂದ ಆ ದಿನಗಳಲ್ಲಿ ಉಬ್ಬರ ಮತ್ತು ಇಳಿತಗಳ ಪ್ರಮಾಣವು ಬಹಳ ಕಡಿಮೆ ಇರುವುದು. ಇವುಗಳನ್ನು ಮಧ್ಯಮ ಉಬ್ಬರವಿಳಿತ ಎನ್ನುವರು.
ಉಪಯೋಗಗಳು
ಉಬ್ಬರವಿಳಿತಗಳು ಮನುಷ್ಯನಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉಪಯುಕ್ತವಾಗಿವೆ.ಅವುಗಳೆಂದರೆ :
1. ದೊಡ್ಡ ನೌಕಾಯಾನಕ್ಕೆ ಉಪಯುಕ್ತವಾಗಿದೆ.
2. ಬಂದರು ಮತ್ತು ಹಡಗು ನಿಲ್ದಾಣಗಳನ್ನು ನಿರ್ಮಿಸಲು ಸಹಕಾರಿಯಾಗುತ್ತವೆ
3. ಉಬ್ಬರವಿಳಿತಗಳಿಂದ ಬರುವ ನೀರು ಬಂದರುಗಳ ತೀರವನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತವೆ
4. ಉಪ್ಪನ್ನು ಉತ್ಪಾದಿಸಲು ಸಹಕಾರಿಯಾಗಿದೆ.
5. ಮೀನುಗಾರಿಕೆಗೆ ಮತ್ತು ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ಉಪಯುಕ್ತ.